Home Important ಗೋವಿನ ಉಳಿವಿಗೆ ಹಾಲು ಹಬ್ಬ.

ಗೋವಿನ ಉಳಿವಿಗೆ ಹಾಲು ಹಬ್ಬ.

SHARE
ಅಳಿವಿನಂಚಿನಲ್ಲಿರುವ ಭಾರತೀಯ ಗೋವಂಶದ ಉಳಿವಿಗೆ ‘ಅಭಯಾಕ್ಷರ’ ನೀಡುವ, ಗೋವು ಪ್ರೀತಿಯಿಂದ ಕೊಡುವ ಹಾಲನ್ನು ಕುಡಿದು ಸಂಭ್ರಮಿಸಿ, ಭಾರತೀಯ ಗೋವಂಶದ ಮಹತ್ವವನ್ನು ಸಾರುವ ‘ಅಭಯಾಕ್ಷರ – ಹಾಲುಹಬ್ಬ’ ಕಾರ್ಯಕ್ರಮವನ್ನು ಶ್ರೀರಾಮಚಂದ್ರಾಪುರಮಠದ ಕಾಮದುಘಾ ವಿಭಾಗದಿಂದ ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಆಯೋಜಿಸಲಾಗುತ್ತಿದ್ದು, 15/07/2017ರಂದು ಪದ್ಮನಾಭನಗರ ಹಾಗೂ 16/07/2017ರಂದು ರಾಜಾಜಿನಗರದಲ್ಲಿ ನಡೆಯಲಿದೆ.
ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳ ‘ಅಭಯಚಾತುರ್ಮಾಸ್ಯ’ದ ಅಂಗವಾಗಿ ‘ಅಭಯಾಕ್ಷರ – ಹಾಲುಹಬ್ಬ’ ಕಾರ್ಯಕ್ರಮಗಳು ನಡೆಯುತ್ತಿದ್ದು, ಗೋಸಂರಕ್ಷಣೆಯ ಸಪ್ತಸೂತ್ರಗಳನ್ನು ಜನಮಾನಸಕ್ಕೆ ತಲುಪಿಸಿ, ಗೋವಂಶ ಸಂರಕ್ಷಣೆಯ ಹಕ್ಕೋತ್ತಾಯದ ‘ಅಭಯಾಕ್ಷರ’ವನ್ನು ನಾಡಿನ ಪ್ರತಿಯೊಬ್ಬರಿಂದ ಪಡೆಯಲು ಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಗೋವಿನ ಮಹತ್ವವನ್ನು ಸಾರುವ ಜೊತೆಗೆ ಗೋಮಾಂಸ ಭಕ್ಷಣೆಯಿಂದ ಆಗುವ ದುಷ್ಷರಿಣಾಮ; ಹಾಲಿನಿಂದಾಗುವ ಪ್ರಯೋಜನಗಳ ಕುರಿತು ವೀಡಿಯೊ ಪ್ರದರ್ಶನ, ದೇಶೀ ಗೋವಿನ ಹಾಲಿನಿಂದ ವಿವಿಧ ಖಾದ್ಯಗಳ ತಯಾರಿಕೆಯ ಪ್ರಾತ್ಯಕ್ಷಿಕೆ ಹಾಗೂ ಮಾರಾಟ ನಡೆಯಲಿದೆ. ಆಗಮಿಸುವ ಎಲ್ಲಾ ಗೋಪ್ರೇಮಿಗಳಿಗೆ ಪ್ರಸಾದ ರೂಪದಲ್ಲಿ ಗೋಕ್ಷೀರದ ವಿತರಣೆನಡೆಯಲಿದೆ.
ಹಾಲಿತ್ತ ಗೋಮಾತೆಗೆ ಕೃತಜ್ಞತೆ ಅರ್ಪಿಸುವ ಈ ಕಾರ್ಯಕ್ರಮದಲ್ಲಿ,ಗೋಪೂಜೆ, ಗೋಆರತಿ, ಗೋಗ್ರಾಸ ಸಮರ್ಪಣೆಯಂತಹ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಯಕ್ಷಗಾನ – ನೃತ್ಯ – ರೂಪಕಗಳ ಮೂಲಕ ಗೋವಿನ ಮಹತ್ವವ ಅನಾವರಣಗೊಳ್ಳಲಿದೆ. ಭಾರತೀಯ ಗೋಪರಿವಾರದ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ಗೋಕಿಂಕರರಿಗೆ ‘ಗೋದೀಕ್ಷೆ’ಯನ್ನು ನೀಡಲಿದ್ದಾರೆ.
15/07/2017 – ಪದ್ಮನಾಭನಗರ
ಪದ್ಮನಾಭನಗರದ ಅಟಲ್ ಬಿಹಾರಿ ಪಾಜಪೇಯಿ ಕ್ರೀಡಾಂಗಣದಲ್ಲಿ 15/07/2017 ರಂದು ‘ಅಭಯಾಕ್ಷರ – ಹಾಲುಹಬ್ಬ’ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಉಪಮುಖ್ಯಮಂತ್ರಿಗಳು ಹಾಗೂ  ಪದ್ಮನಾಭನಗರ ಶಾಸಕರಾದ ಆರ್ ಅಶೋಕ್ ಗೌರವಾಧ್ಯಕ್ಷತೆಯಲ್ಲಿ ಹಾಲುಹಬ್ಬ ಸಮಿತಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಕಾರ್ಪೊರೇಟರ್ ಎಲ್ ಶ್ರೀನಿವಾಸ್, ಕಾರ್ಯಾಧ್ಯಕ್ಷರಾಗಿ ಸಿಎ. ಮಾಧವ ಹೆಬ್ಬಾರ್, ಕಾರ್ಯದರ್ಶಿಗಳಾಗಿ ಶೋಭಾ ಅಂಜನಪ್ಪ ಮುಂತಾದವರ ಸಮಿತಿಯನ್ನು ರಚಿಸಲಾಗಿದೆ.
16/07/2017 – ರಾಜಾಜಿನಗರ
ರಾಜಾಜಿನಗರದ ರಾಮಮಂದಿರದಲ್ಲಿ 16/07/2017 ರಂದು ‘ಅಭಯಾಕ್ಷರ – ಹಾಲುಹಬ್ಬ’ ಕಾರ್ಯಕ್ರಮ ನಡೆಯಲಿದ್ದು, ಸಮಿತಿಯಲ್ಲಿ ನಿವೃತ್ತ ರಾಜ್ಯಪಾಲರಾದ ರಾಮಾಜೋಯಿಸ್, ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಎಸ್ ಸುರೇಶ್ ಕುಮಾರ್,  ಸಾಮಾಜಿಕ ಕಾರ್ಯಕರ್ತರಾ ಲಕ್ಷೀನಾರಯಣ, ಡಾ. ಗಿರಿಧರ್ ಕಜೆ ಮುಂತಾದವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.