Home Local ಮುರ್ಡೇಶ್ವರ ಬಸ್ತಿ ಬಳಿ ಭೀಕರ ಅಪಘಾತ : ಹಾರಿ ಹೋಯ್ತು ಓರ್ವನ ಪ್ರಾಣ

ಮುರ್ಡೇಶ್ವರ ಬಸ್ತಿ ಬಳಿ ಭೀಕರ ಅಪಘಾತ : ಹಾರಿ ಹೋಯ್ತು ಓರ್ವನ ಪ್ರಾಣ

SHARE

ಭಟ್ಕಳ: ತಾಲೂಕಿನ ಮುರ್ಡೇಶ್ವರದ ಸಮೀಪ ಸಿಪ್ಟ್ ಕಾರ ಹಾಗೂ ಬೈಕ್ ಮುಖ್ಕಾಮುಕ್ಕಿ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಬೈಕ್ ನಜ್ಜು ಗುಜ್ಜಾಗಿದ್ದು ಸಂಪೂರ್ಣವಾಗಿ ಜಖಂ ಆಗಿದೆ.

ಬೈಕ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಹಿಂಬದಿ ಸವಾರ ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡವನನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮುರುಡೇಶ್ವರ ಬಸ್ತಿ ಬಳಿ ಈ ಘಟನೆ ನಡೆದಿದೆ.

ಬೈಕ್ ಸವಾರರನನ್ನು ಮುರುಡೇಶ್ವರ ಉತ್ತರ ಕೊಪ್ಪದ ನಿವಾಸಿ ದೇವು ಮರಾಠಿ ಎಂದು ಗುರುತಿಸಲಾಗಿದೆ. ಹಿಂಬದಿ ಸವಾರ ಚಂದ್ರು ಗಂಭೀರವಾಗಿದ್ದಾನೆಂದು ವರದಿಯಾಗಿದೆ.