Home Local ಶ್ರೀ ಶ್ರೀ ಆತ್ಮದೀಪಾನಂದಜಿ ಮಹಾರಾಜ್ ರವರಿಗೆ ಗೋಕರ್ಣ ಗೌರವ

ಶ್ರೀ ಶ್ರೀ ಆತ್ಮದೀಪಾನಂದಜಿ ಮಹಾರಾಜ್ ರವರಿಗೆ ಗೋಕರ್ಣ ಗೌರವ

SHARE

ಗೋಕರ್ಣ: ಪ ಪೂ ಶ್ರೀ ಶ್ರೀ ಆತ್ಮದೀಪಾನಂದಜಿ ಮಹಾರಾಜ್ , ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮ, ಹುಬ್ಬಳ್ಳಿ ಇವರು ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” 601ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ , ಸುವರ್ಣ ನಾಗಾಭರಣ ವಿಶೇಷ ಪೂಜೆ ನೆರವೇರಿಸಿದರು .

ಉಪಾಧಿವಂತ ಮಂಡಳಿ ಸದಸ್ಯ ಶ್ರೀ ಶ್ರೀಪಾದ ಭಟ್ ಚಿಟ್ಟೆ ಇವರು ಪೂಜ್ಯರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು . ವೇ ರಾಮಚಂದ್ರ ಭಟ್ ಜಂಭೆ ಪೂಜಾ ಕೈಂಕರ್ಯ ನೆರವೇರಿಸಿದರು .