Home Local ಪ್ರತಿಭಾ ಕಾರಂಜಿಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಹಳದೀಪುರ ಶಾಲೆಯ ವಿದ್ಯಾರ್ಥಿಗಳು.

ಪ್ರತಿಭಾ ಕಾರಂಜಿಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಹಳದೀಪುರ ಶಾಲೆಯ ವಿದ್ಯಾರ್ಥಿಗಳು.

SHARE

ಹೊನ್ನಾವರ: ಹಳದೀಪುರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹಿರಿಯ ಹಾಗೂ ಕಿರಿಯರ ವಿಭಾಗದಲ್ಲಿ ಬೇರೆ ಬೇರೆ ವಿಷಯಗಳ ಸ್ಪರ್ಧೆಯಲ್ಲಿ ಒಟ್ಟೂ 14 ಪ್ರಥಮ, 7 ದ್ವಿತೀಯ ಹಾಗೂ 6 ತೃತೀಯ ಸ್ಥಾನಗಳನ್ನು ಪಡೆಯುವುದರೊಂದಿಗೆ ತಮ್ಮ ಸಾಧನೆಯನ್ನು ಮೆರೆದಿದ್ದಾರೆ.

ಹಿರಿಯರ ವಿಭಾಗದ ಸಂಸ್ಕøತ ಮತ್ತು ಇಂಗ್ಲಿಷ್ ಕಂಠಪಾಠಗಳಲ್ಲಿ ಕೃತಿಕಾ ಹಳದೀಪುರ ಪ್ರಥಮ, ಹಿಂದಿ ಮತ್ತು ಕೊಂಕಣಿ ಕಂಠಪಾಠ ಹಾಗೂ ಆಶುಭಾಷಣಗಳಲ್ಲಿ ಗಣಪತಿ ನಾಯ್ಕ ಪ್ರಥಮ, ಸಂಸ್ಕøತ ಧಾರ್ಮಿಕ ಪಠಣದಲ್ಲಿ ಸಂಜನಾ ಭಟ್ಟ ಪ್ರಥಮ, ಅಭಿನಯ ಗೀತೆಯಲ್ಲಿ ಮುಕ್ತಾ ಗೌಡ ಪ್ರಥಮ, ಕ್ಲೇ ಮಾಡೆಲಿಂಗ್‍ನಲ್ಲಿ ಗಣೇಶ್ ಮುಕ್ರಿ ಪ್ರಥಮ, ದಿಶಾ ಶ್ಯಾನಭಾಗ್ ಇವಳು ಕನ್ನಡ ಕಂಠಪಾಠದಲ್ಲಿ ಪ್ರಥಮ ಹಾಗೂ ಮರಾಠಿ ಕಂಠಪಾಠದಲ್ಲಿ ದ್ವಿತೀಯ, ಸಾದಿಯಾ ಖಾಜಿ ಈಕೆ ಉರ್ದು ಕಂಠಪಾಠದಲ್ಲಿ ದ್ವಿತೀಯ ಮತ್ತು ಅರೇಬಿಕ್ ಧಾರ್ಮಿಕ ಪಠಣದಲ್ಲಿ ತೃತೀಯ, ಚಿತ್ರಕಲೆಯಲ್ಲಿ ವಿಘ್ನೇಶ್ವರ ಮುಕ್ರಿ ದ್ವಿತೀಯ, ದೇಶಭಕ್ತಿಗೀತೆಯಲ್ಲಿ ದಿಶಾ ಸಂಗಡಿಗರು ಪ್ರಥಮ, ಕ್ವಿಜ್‍ನಲ್ಲಿ ಕೃತಿಕಾ ಸಂಗಡಿಗರು ಪ್ರಥಮ ಹಾಗೂ ಕೋಲಾಟದಲ್ಲಿ ನಿಶಾ ಸಂಗಡಿಗರು ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಕಿರಿಯರ ವಿಭಾಗದಲ್ಲಿ ದರ್ಶನ ಗೌಡ ಈತನು ಕನ್ನಡ ಕಂಠಪಾಠದಲ್ಲಿ ಪ್ರಥಮ ಹಾಗೂ ಹಿಂದಿ ಕಂಠಪಾಠದಲ್ಲಿ ದ್ವಿತೀಯ, ರಕ್ಷಿತಾ ನಾಯ್ಕ ಇವಳು ಸಂಸ್ಕøತ ಕಂಠಪಾಠದಲ್ಲಿ ಪ್ರಥಮ ಮತ್ತು ಇಂಗ್ಲಿಷ್ ಕಂಠಪಾಠದಲ್ಲಿ ತೃತೀಯ, ವಿನಯ್ ರೇವಣಕರ್ ಈತನು ಚಿತ್ರಕಲೆಯಲ್ಲಿ ಪ್ರಥಮ, ಕೊಂಕಣಿ ಕಂಠಪಾಠದಲ್ಲಿ ದ್ವಿತೀಯ ಹಾಗೂ ಕ್ಲೇ ಮಾಡೆಲಿಂಗ್‍ನಲ್ಲಿ ತೃತೀಯ, ಸೌಜನ್ಯಾ ಮುಕ್ರಿ ಕಥೆ ಹೇಳುವುದರಲ್ಲಿ ದ್ವಿತೀಯ, ಸಂದೇಶ್ ಮುಕ್ರಿ ಸಂಸ್ಕøತ ಧಾರ್ಮಿಕ ಪಠಣದಲ್ಲಿ ತೃತೀಯ, ದೇಶಭಕ್ತಿ ಗೀತೆಯಲ್ಲಿ ರಕ್ಷಿತಾ ಸಂಗಡಿಗರು ತೃತೀಯ ಹಾಗೂ ಕ್ವಿಜ್‍ನಲ್ಲಿ ಸಂದೇಶ ಸಂಗಡಿಗರು ತೃತೀಯ ಸ್ಥಾನ ಪಡೆದಿರುತ್ತಾರೆ. ಈ ಎಲ್ಲಾ ಬಾಲ ಪ್ರತಿಭೆಗಳನ್ನು ಶಾಲಾ ಶಿಕ್ಷಕ ವೃಂದ, ಎಸ್.ಡಿ.ಎಮ್.ಸಿ. ಹಾಗೂ ಪಾಲಕ ವೃಂದ ಅಭಿನಂದಿಸಿರುತ್ತಾರೆ.