Home Important ಮಿಗ್-27 ವಾಯುಪಡೆಯ ವಿಮಾನ ಪತನ: ಅಪಾಯದಿಂದ ಪಾರಾದ ಪೈಲಟ್.

ಮಿಗ್-27 ವಾಯುಪಡೆಯ ವಿಮಾನ ಪತನ: ಅಪಾಯದಿಂದ ಪಾರಾದ ಪೈಲಟ್.

SHARE

ಹೊಸದಿಲ್ಲಿ: ಮಿಗ್-27 ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಒಂದು ರಾಜಸ್ಥಾನದ ಜೋಧ್ಪುರ ಸಮೀಪ ದುರಂತಕ್ಕೀಡಾಗಿದೆ. ಪೈಲಟ್ ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.

ದಿನ ನಿತ್ಯದ ಅಭ್ಯಾಸ ಹಾರಾಟ ನಡೆಸುತ್ತಿದ್ದಾಗ ವಿಮಾನ ದುರಂತಕ್ಕೀಡಾಗಿದೆ. ಈ ಕುರಿತಾಗಿ ತನಿಖೆಗೆ ವಾಯುಪಡೆ ಆದೇಶಿಸಿದೆ.
ವಾಯುಪಡೆಯಲ್ಲಿ ಇನ್ನೂ ಎರಡು ಸ್ಕ್ವಾಡ್ರನ್ಗಳಷ್ಟು ಮಿಗ್-27 ಯುದ್ಧ ವಿಮಾನಗಳಿದ್ದು, ಮುಂದಿನ ವರ್ಷ ಅವುಗಳಿಗೆ ನಿವೃತ್ತಿ ನೀಡಲಿದೆ.

ಮೇಲ್ದರ್ಜೆಗೇರಿಸಿದ ಮಿಗ್-27 ವಿಮಾನವೊಂದು ಜೂನ್ನಲ್ಲಿ ಜೋಧ್ಪುರದ ಜನ ವಸತಿ ಪ್ರದೇಶದಲ್ಲಿ ಇದೇ ರೀತಿ ಪತನಗೊಂಡಿತ್ತು. ಆಗಲೂ ದುರಂತಕ್ಕೆ ಕೆಲವೇ ಕ್ಷಣಗಳ ಮೊದಲು ಪೈಲಟ್ ಹೊರಗೆ ಹಾರಿ ಸುರಕ್ಷಿತ ಪಾರಾಗಿದ್ದರು.