Home Local ಹಂದಿಯ ದಾಳೆಗೆ ಆಸ್ಪತ್ರೆ ಸೇರಿದ ಮಂಕಿ ವಲಯದ ಅರಣ್ಯ ರಕ್ಷಕ ದೇವೇಂದ್ರ ಗೊಂಡ!

ಹಂದಿಯ ದಾಳೆಗೆ ಆಸ್ಪತ್ರೆ ಸೇರಿದ ಮಂಕಿ ವಲಯದ ಅರಣ್ಯ ರಕ್ಷಕ ದೇವೇಂದ್ರ ಗೊಂಡ!

SHARE

ಹೊನ್ನಾವರ: ತಾಲೂಕಿನ ಮಂಕಿ ವಲಯದ ಅರಣ್ಯ ರಕ್ಷಕ ದೇವೇಂದ್ರ ಗೊಂಡ ಇವರು ನಿನ್ನೆ ಮಧ್ಯಾಹ್ನ ಗಸ್ತು ತಿರುಗುವ ಸಂದರ್ಭದಲ್ಲಿ ಕಾಡು ಹಂದಿಯೊಂದು ಇವರ ಮೇಲೆ ದಾಳಿ ಮಾಡಿದ ಘಟನೆ ವರದಿಯಾಗಿದೆ.

ಹಂದಿಯೊಂದು ಇವರ ಮೇಲೆ ಎರಗಿದ ಪರಿಣಾಮ ತೀವೃತರ ಗಾಯಗಳಾಗಿದ್ದು ಸೆಂಟ್ ಇಗ್ನೇಷಿಯಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

ಹಂದಿಯ ದಾಳಿಯಿಂದ ಘಾತಕ್ಕೊಳಗಾದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅರಣ್ಯ ಭಾಗದಲ್ಲಿ ಹಂದಿಗಳ ಕಾಟ ಹೆಚ್ಚುತ್ತಿದ್ದು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂಬ ಕಳಕಳಿ ವ್ಯಕ್ತವಾಗಿದೆ.