Home Local ಸನಾತನ ಸಂಸ್ಥೆಯ ಮೇಲೆ ನಿಷೇಧ ಹಾಕುವ ಪ್ರಯತ್ನ ಮಾಡುವುದೆಂದರೆ, ಹಿಂದೂತ್ವನಿಷ್ಠರ ಧ್ವನಿ ಅಡಗಿಸುವ ಷಡ್ಯಂತ್ರವಾಗಿದೆ :...

ಸನಾತನ ಸಂಸ್ಥೆಯ ಮೇಲೆ ನಿಷೇಧ ಹಾಕುವ ಪ್ರಯತ್ನ ಮಾಡುವುದೆಂದರೆ, ಹಿಂದೂತ್ವನಿಷ್ಠರ ಧ್ವನಿ ಅಡಗಿಸುವ ಷಡ್ಯಂತ್ರವಾಗಿದೆ : ಕುಮಟಾದಲ್ಲಿ ಸನಾತನ ಸಂಸ್ಥೆ ಬೆಂಬಲಿಸಿ ಮನವಿ ಸಲ್ಲಿಕೆ

SHARE

ಕುಮಟಾ – ಗೌರಿ ಲಂಕೇಶ ಹತ್ಯೆಯ ಜೊತೆಗೆ ಕೆಲವು ವಿಚಾರವಾಧಿಗಳ ಹತ್ಯೆಯನ್ನು ಜೋಡಿಸಿ ಸನಾತನ ಸಂಸ್ಥೆಯ ಮೇಲೆ ಅಪಪ್ರಚಾರ ಮಾಡುವ ಮೂಲಕ ಹಿಂದೂದ್ವೇಷವನ್ನು ಪ್ರಕಟಿಸುವ ವ್ಯವಸ್ಥಿತ ಷಡ್ಯಂತ್ರ್ಯವನ್ನು ಕೆಲವು ರಾಜಕೀಯ ವ್ಯಕ್ತಿಗಳು ಮಾಡುತ್ತಿದ್ದಾರೆ. ಆಧ್ಯಾತ್ಮ ಮತ್ತು ಹಿಂದೂತ್ವ ಕ್ಷೇತ್ರದ ಪ್ರಚಾರದಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ಇರುವುದರಿಂದಲೇ, ಹಿಂದೂ ವಿರೋಧಿ ಶಕ್ತಿಗಳ ಕಂಗೆಣ್ಣಿಗೆ ಸನಾತನ ಸಂಸ್ಥೆಯ ಕಾರ್ಯವು ಗುರಿಯಾಗಿದೆ ಮತ್ತು ಸಂಸ್ಥೆಯ ಮೇಲೆ ಆಘಾತ ಮಾಡುವ ಪ್ರಯತ್ನ ಹಿಂದೂ ವಿರೋಧಿಗಳಿಂದ ಮಾಡಲಾಗುತ್ತಿದೆ. ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡದ ಸನಾತನ ಸಂಸ್ಥೆಯ ಮೇಲಿನ ನಿಷೇಧದ ಬೇಡಿಕೆಯು ಅನ್ಯಾಯವಾಗಿದೆ ಮತ್ತು ಇದನ್ನು ಎಂದಿಗೂ ಸಹಿಸಲಾಗದು. ಸನಾತನ ಸಂಸ್ಥೆಯ ಮೇಲೆ ನಿಷೇಧ ಹಾಕಿ ಹಿಂದೂತ್ವದ ವಿಚಾರಧಾರೆಯನ್ನು ನಾಶಮಾಡುವ ಷಡ್ಯಂತ್ಯವನ್ನು ಖಂಡಿತ ವಿಫಲಗೊಳಿಸುವೆವು ಎಂಬ ಎಚ್ಚರಿಕೆಯನ್ನು ನೆರೆದಿದ್ದ ಹಿಂದೂತ್ವನಿಷ್ಠರು ಸನಾತನ ಸಂಸ್ಥೆಯ ಪರವಾಗಿ ನೀಡಿದರು. ಮಂಗಳವಾರ ದಿನಾಂಕ 4-9-2018 ರಂದು ಸನಾತನ ಸಂಸ್ಥೆಯನ್ನು ಬೆಂಬಲಿಸಿ ಆಯೋಜಿಸಿದ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂತ್ವನಿಷ್ಠರು ಒಟ್ಟಾದರು. ಈ ಸಂಧರ್ಭದಲ್ಲಿ ವಿಶ್ವ ಹಿಂದೂ ಪರಿಷತ್‍ನ ಶ್ರೀ ರಾಮದಾಸ ಶೇಟ, ಆರ್ ಎಸ್ ಎಸ್ ನ ಮುಖಂಡರಾದ ಶ್ರೀ ಹನುಮಂತ ಶ್ಯಾನಭಾಗ, ಪೂಜ್ಯ ಆಸಾರಮ ಬಾಪೂಜೀ ಸೇವಾ ಸಮಿತಿಯ ಕಾರ್ಯಕರ್ತರು, ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು, ಭಜರಂಗದಳದ ಕಾರ್ಯಕರ್ತರು, ಸಮಾಜಸೇವಕರಾದ ಶ್ರೀ ತುಕಾರಾಮ ನಾಯ್ಕ, ಹಾಗೂ ಇತರ ಅನ್ಯ ಹಿಂದೂ ಸಂಘಟನೆಗಳ ಪ್ರಮುಖರು ಮತ್ತು ಧರ್ಮಾಭಿಮಾನಿಗಳು ಭಾಗವಹಿಸಿದ್ದರು.

ಈ ಪ್ರತಿಭಟನೆಯನ್ನು ಕುಮಟಾದ ಗಿಬ್ ಹೈಸ್ಕೂಲ್ ವೃತ್ತದಲ್ಲಿ ನಡೆಸಿ ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿಯನ್ನು ನೀಡಲಾಯಿತು. ಅದರಲ್ಲಿ ಸನಾತನ ಸಂಸ್ಥೆಯ ನಿಷೇಧದ ವಿರುದ್ಧ ಹಿಂದೂತ್ವನಿಷ್ಠರು ಘೋಷಣೆ ಕೂಗಿದರು.

ಪೂರ್ವಗೃಹ ಪೀಡಿತರಾಗಿ ಸನಾತನ ಸಂಸ್ಥೆಯ ಮೇಲೆ ಸುಳ್ಳು ಆರೋಪವನ್ನು ಸಾಮ್ಯವಾಧಿಗಳು ಮಾಡುವ ಮೂಲಕ ತನಿಖೆಯ ದಿಶೆಯನ್ನು ಬದಲಾಯಿಸುತ್ತಿದ್ದಾರೆ. – ಶ್ರೀ. ಶರತಕುಮಾರ, ಹಿಂದೂ ಜನಜಾಗೃತಿ ಸಮಿತಿ, ಉತ್ತರಕನ್ನಡ

ಕರ್ನಾಟಕದ ಗೃಹಮಂತ್ರಿ ಜೀ. ಪರಮೇಶ್ವರ ಇವರು “ಗೌರಿ ಹತ್ಯೆಯಲ್ಲಿ ಸನಾತನ ಸಂಸ್ಥೆಯ ಕೈವಾಡ ಸಾಬೀತು ಆಗಿಲ್ಲ” ಎಂದು ಹೇಳಿದಾಗಲೂ ಸನಾತನ ಸಂಸ್ಥೆಯು ಭಯೋತ್ಪಾಧಕ ಸಂಘಟನೆ, ಸನಾತನ ಸಂಸ್ಥೆಯ ಮೇಲೆ ನಿಷೇಧ ಹಾಕಬೇಕು ಎಂಬ ಬೇಡಿಕೆಯೊಡ್ಡುವುದು ಸಾಮ್ಯವಾಧಿಗಳಿಗೆ ಸನಾತನದ ಮೇಲಿರುವ ದ್ವೇಷವನ್ನು ಎತ್ತಿತೋರಿಸುತ್ತದೆ. ಎಲ್ಲಾ ತನಿಖಾ ಸಂಸ್ಥೆಗಳು ಈ ಹತ್ಯೆಯ ಹಿಂದೆ ಯಾವುದೇ ಸಂಘಟನೆ ಇಲ್ಲ ಎಂದು ಹೇಳಿದಾಗಲೂ ಸನಾತನ ಸಂಸ್ಥೆಯ ಮೇಲೆ ಆರೋಪ ಮಾಡುವುದು ತನಿಖಾ ಸಂಸ್ಥೆಯ ಮೇಲೆ ಒತ್ತಡ ಹಾಕುವ ಮತ್ತು ತನಿಖೆಯ ದಿಶೆಯನ್ನು ಬದಲಿಸುವ ಷಡ್ಯಂತ್ರವಾಗಿದೆ. ಕಾಂಗ್ರ್ರೆಸ್ ನೇತಾರರ ಸಕ್ಕರೆ ಕಾರ್ಖಾನೆ, ಶಿಕ್ಷಣ ಸಂಸ್ಥೆ, ದೇವಸ್ಥಾನಗಳ ಆಡಳಿತದ ಭ್ರಷ್ಟಾಚಾರವನ್ನು ಸನಾತನವು ಬಯಲಿಗೆ ಎಳದಿದೆ. ಅದಕ್ಕೆ ಧ್ವೇಷದ ರಾಜಕಾರಣವನ್ನು ಭ್ರಷ್ಟ ಕಾಂಗ್ರೆಸ ನೇತಾರರು ಮಾಡುತ್ತಿದ್ದಾರೆ. ಇವರೇ ಸನಾತನದ ಅಪಕೀರ್ತಿಯ ಹಿಂದೆ ಇದ್ದಾರೆ. ಇಂದು ದೇಶದಲ್ಲಿ ಮಾನ್ಯ ನರೇಂದ್ರ ಮೋದಿಯವರ ಹತ್ಯೆಗೆ ಸಂಚು ರೂಪಿಸಿದ ಆರೋಪದಲ್ಲಿ 5 ಮಂದಿ ಅರ್ಬನ ಮಾವೋವಾಧಿ ನಕ್ಸಲರನ್ನು ಬಂಧಿಸಲಾಗಿದೆ. ಇದರ ಬಗ್ಗೆ ಯಾರು ಸಹ ಮಾತನಾಡುವುದಿಲ್ಲ. ಕೇವಲ ಸನಾತನ ಸಂಸ್ಥೆಯ ವಿರುದ್ಧ ಅಪಪ್ರಚಾರ ಮಾಡುವುದು ಷಡ್ಯಂತ್ರವಾಗಿದೆ.
ಸನಾತನದ ವಿರುದ್ಧ ಸುಳ್ಳು ವಾರ್ತೆಗಳನ್ನು ಪ್ರಕಟಿಸಿ, ಸನಾತನದ ಅಪಪ್ರಚಾರ ಮಾಡುವುದು ಸ್ವಾರ್ಥಿ ಹಿಂದೂ ದ್ವೇಷಿ ರಾಜಕಾರಣಿಗಳ ಕುತಂತ್ರವಾಗಿದೆ. , ಪುಂಡಲೀಕ ಪೈ
ದೇಶದಲ್ಲಿ ಬಾಂಬ್ ಸ್ಪೋಟ, ಭಯೋತ್ಪಾದನೆ, ಮತಾಂತರ ಮುಂತಾದ ದೇಶ ವಿರೋಧಿ ಕೃತ್ಯ ಮಾಡುವ ಮತಾಂಧ ಸಂಘಟನೆಗಳ ಮೇಲೆ ನಿಷೇಧದ ಬೇಡಿಕೆಯನ್ನು ಯಾರು ಮಾಡುವುದಿಲ್ಲ. ಆದರೆ ರಾಷ್ಟ್ರ ಮತ್ತು ಧರ್ಮ ಕಾರ್ಯ ಮಾಡುವ ಸನಾತನ ಸಂಸ್ಥೆಯ ಮೇಲೆ ನಿಷೇಧದ ಬೇಡಿಕೆ ಇಡುವುದು ಖಂಡನೀಯವಾಗಿದೆ. ಬಂಧಿತ ಆರೋಪಿಗಳಿಗೆ ಸನಾತನ ಸಂಸ್ಥೆಗೆ ಯಾವುದೇ ಸಂಬಂದ ಇಲ್ಲ ಎಂದು ಹೇಳಿದರೂ, ಕೆಲವು ಸ್ವಾರ್ಥಿ ರಾಜಕಾರಣಿಗಳು ಮಾತ್ರ ಸನಾತನ ಸಂಸ್ಥೆಯ ಅಪಪ್ರಚಾರ ಮಾಡುವುದು ಹಿಂದೂ ದ್ವೇಷದ ಪರಮಾವಧಿಯಾಗಿದೆ. ಇದೇ ಸಂಧರ್ಭದಲ್ಲಿ ಸಮಿತಿಯ ಶ್ರೀ ಸಂದೀಪ ಭಂಡಾರಿ, ಶ್ರೀ ಸತೀಶ ಶೇಟ, ಶ್ರೀ ಕಾಶೀನಾಥ ಪ್ರಭು, ಧರ್ಮಪ್ರೇಮಿಗಳಾದ ಶ್ರೀ ಅರುಣ ನಾಯ್ಕ, ಶ್ರಿ ಶ್ರೀನಿವಾಸ ಪೂಜಾರಿ ಶಿರಸಿ, ಶ್ರೀ ಅನಂತ ಹೆಗಡೆ ಶಿರಸಿ, ಸೌ. ನಮಿತಾ ಕಾಮತ ಹೊನ್ನಾವರ ಮತ್ತು ಸನಾತನ ಸಂಸ್ತೆಯ ಸಾಧಕರು, ಮುಂತಾದವರು ಉಪಸ್ಥಿತರಿದ್ದರು.