Home Local ಆಯತಪ್ಪಿ ಎದುರಾಯ್ತು ಅಪಾಯ:ಅಂಕೋಲಾದಲ್ಲಿ ಬಾವಿಗೆ ಬಿದ್ದು ಹಾರಿಹೋಯ್ತು ಬಾಲಕನ ಪ್ರಾಣ!

ಆಯತಪ್ಪಿ ಎದುರಾಯ್ತು ಅಪಾಯ:ಅಂಕೋಲಾದಲ್ಲಿ ಬಾವಿಗೆ ಬಿದ್ದು ಹಾರಿಹೋಯ್ತು ಬಾಲಕನ ಪ್ರಾಣ!

SHARE

ಅಂಕೋಲಾ: ತಾಲ್ಲೂಕಿನ ಕುಂಬಾರಕೇರಿಯಲಲ್ಲಿ ಆಯ ತಪ್ಪಿ ಬಾವಿಗೆ ಬಿದ್ದು ಬಾಲಕನೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ.

ಪಿಎಂ ಹೈಸ್ಕೂಲ್‌ನ ೯ನೇ ತರಗತಿಯ ವಿದ್ಯಾರ್ಥಿಯಾಗಿರುವ ವಿಶಾಲ ವಿನೋದ ಆಚಾರಿ (೧೫) ಮೃತ ದುರ್ದೈವಿ. ಈತ ಆಕಸ್ಮಿಕವಾಗಿ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ.

ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬಾವಿಯಿಂದ ಬಾಲಕನ ಶವ ಹೊರತೆಗೆದಿದ್ದಾರೆ ಎಂದು ವರದಿಯಾಗಿದೆ .ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೋಲೀಸರು ಸ್ಥಳದಲ್ಲಿ ಹಾಜರಿದ್ದು ಪರಿಸ್ಥಿಯ ಪರಾಮರ್ಷೆ ನಡೆಸಿದರು.