Home Article ದಿವ್ಯತೇಜರು (ಶಿಕ್ಷಕರ ದಿನಾಚರಣೆಯ ವಿಶೇಷ ಕವನ)

ದಿವ್ಯತೇಜರು (ಶಿಕ್ಷಕರ ದಿನಾಚರಣೆಯ ವಿಶೇಷ ಕವನ)

SHARE

ಉರಿದು ಬೆಳಕ ನೀಡುವ
ದೀಪದಂತೆ
ತೇದು ತೇದು ಕಂಪಸೂಸುವ
ಚಂದನದಂತೆ
ನಿಸ್ವಾರ್ಥದ ತರು

ಶಿಷ್ಯರೆಂಬ ಬೆಳೆವ ಮೊಳಕೆಗೆ
ನೀರುಣಿಸುತ
ಬಾಳ ಪಥಕೆ ದಾರಿತೋರ್ವ
ನೀತಿಯ ಕುರುಹು

ಪರರ ಬಾಳ್ವೆಯ ಹಸನು ಮಾಡ್ವ
ನಿಜಮಾಂತ್ರಿಕರು
ಕರಿಯ ಕಲ್ಲ ಶಿಲೆಯಾಗಿಸುವ
ಶಿಲ್ಪಿಗರು

ವರ್ಣ ವರ್ಗ ಭೇದ ಮರೆತು
ಜ್ಞಾನ ಗಂಗೆಯಂತೆ
ಬದುಕ ಪೊರೆವ
ದಿವ್ಯತೇಜರು.

✍ರೇಷ್ಮಾ ಉಮೇಶ ಭಟ್ಕಳ
ಶಿಕ್ಷಕರು ಶ್ರೀವಲ್ಲಿ ಪ್ರೌಢಶಾಲೆ ಚಿತ್ರಾಪುರ