Home Information ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡಬ್ಲ್ಯೂಎಸ್’ಎಸ್’ಬಿ)ಯ ಬಿ ಮತ್ತು ಸಿ ದರ್ಜೆಯ ವಿವಿಧ ಸ್ಥಳೀಯ...

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡಬ್ಲ್ಯೂಎಸ್’ಎಸ್’ಬಿ)ಯ ಬಿ ಮತ್ತು ಸಿ ದರ್ಜೆಯ ವಿವಿಧ ಸ್ಥಳೀಯ ವೃಂದದ (ಹೈ-ಕ) ಹುದ್ದೆಗಳಿಗೆ ನೇರ ನೇಮಕಾತಿ.

SHARE

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡಬ್ಲ್ಯೂಎಸ್’ಎಸ್’ಬಿ)ಯು ಬಿ ಮತ್ತು ಸಿ ದರ್ಜೆಯ ವಿವಿಧ ಸ್ಥಳೀಯ ವೃಂದದ (ಹೈ-ಕ) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ನೇರ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ – 38
ಹುದ್ದೆಗಳ ವಿವರ
ಬಿ ದರ್ಜೆಯ ತಾಂತ್ರಿಕ ಹುದ್ದೆಗಳು – 05
1.ಸಹಾಯಕ ಅಭಿಯಂತರ (ಸಿವಿಲ್) – 03
2.ಸಹಾಯಕ ಅಭಿಯಂತರ (ಎಲೆಕ್ಟ್ರಿಕಲ್) – 01
3.ಸಹಾಯಕ ಅಭಿಯಂತರ (ಕಂಪ್ಯೂಟರ್ ವಿಜ್ಞಾನ) 01
ಸಿ ದರ್ಜೆಯ ತಾಂತ್ರಿಕ ಹುದ್ದೆಗಳು – 01
4.ಕಿರಿಯ ಅಭಿಯಂತರ (ಸಿವಿಲ್)
ಸಿ ದರ್ಜೆಯ ತಾಂತ್ರಿಕೇತರ ಹುದ್ದೆಗಳ – 32
5.ಕೆಮಿಸ್ಟ್ ಗ್ರೇಡ್-2 – 01
6.ಸಹಾಯಕ – 04
7.ಪ್ರಯೋಗಾಲಯ ಸಹಾಯಕ ದರ್ಜೆ-1 -01
8.ಅಪರೇಟರ್ – 02
9.ಎರಡನೇ ದರ್ಜೆ ಉಗ್ರಾಣ ಪಾಲಕ – 02
10.ಮಾಪನ ಓದುಗ – 18
11.ಕಿರಿಯ ಸಹಾಯಕ – 03
12.ಬೆರಳಚ್ಚುಗಾರ ಯಾ ಡಾಟಾ ಎಂಟ್ರಿ ಅಪರೇಟರ್ – 01

ವಿದ್ಯಾರ್ಹತೆ : ಇಂಜಿನಿಯರಿಂಗ್ / ಟೆಕ್ನಾಲಜಿಯಲ್ಲಿ ಕ್ರ ಸಂ 1ರ ಹುದ್ದೆಗೆ ಸಿವಿಲ್ ಪದವಿ, ಕ್ರ.ಸಂ 2ರ ಹುದ್ದೆಗೆ ಎಲೆಕ್ಟ್ರಿಕಲ್ ಪದವಿ, ಕ್ರ ಸಂ 3 ರ ಹುದ್ದೆಗೆ ಕಂಪ್ಯೂಟರ್ ವಿಜ್ಞಾನ, ಕ್ರ ಸಂ 4ರ ಹುದ್ದೆಗೆ ಸಿವಿಲ್ ಡಿಪ್ಲೋಮಾ, ಕ್ರ ಸಂ 5ರ ಹುದ್ದೆಗೆ ಎಂಎಸ್ಸಿ, ಕ್ರ ಸಂ 6 ರ ಹುದ್ದೆಗೆ ಯಾವುದೇ ಪದವಿ, ಕ್ರ ಸಂ 7ರ ಹುದ್ದೆಗೆ ರಸಾಯನಶಾಸ್ತ್ರದಲ್ಲಿ ಪದವಿ, ಕ್ರ ಸಂ 8ರ ಹುದ್ದೆಗೆ ಪಿಯುಸಿ ಜೊತೆಗೆ ಐಟಿಐ ಕೋರ್ಸ, ಕ್ರ ಸಂ 9 ರಿಂದ 11ರವರೆಗಿನÀ ಹುದ್ದೆಗಳಿಗೆ ಪಿಯುಸಿ, ಕ್ರ ಸಂ 12ರ ಹುದ್ದೆಗೆ ಪಿಯುಸಿ ಜೊತೆಗೆ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಗೊತ್ತಿರಬೇಕು.

ವಯೋಮಿತಿ : ಕನಿಷ್ಠ 18 ವರ್ಷ ವಯಸನ್ನು ನಿಗದಿ ಮಾಡಲಾಗಿದ್ದು, ಗರಿಷ್ಠ ವಯೋಮಿತಿಯನ್ನು ಸಾಮಾನ್ಯ ವರ್ಗದವರಿಗೆ 35 ವರ್ಷ, ಪ್ರವರ್ಗ 2ಎ,2ಬಿ, 3ಎ,3ಬಿ, ಅಭ್ಯರ್ಥಿಗಳಿಗೆ 38 ವರ್ಷ, ಪ.ಜಾ, ಪ.ಪಂ, ಪ್ರವರ್ಗ 1ರ ಅಭ್ಯರ್ಥಿಗಳಿಗೆ 40 ವರ್ಷಕ್ಕೆ ನಿಗದಿ ಮಾಡಲಾಗಿದೆ.
ಅರ್ಜಿ ಶುಲ್ಕ : ಸಾಮಾನ್ಯ, ಪ್ರವರ್ಗ- 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಬಿ ವೃಂದದ ಹುದ್ದೆಗೆ 600 ರೂ, ಸಿ ವೃಂದದ ಹುದ್ದೆಗೆ 400 ರೂ, ಪ.ಜಾ, ಪ. ಪಂ, ಪ್ರವರ್ಗ 1, ಮಾಜಿ ಸೈನಿಕ, ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27-09-2018
ಹೆಚ್ಚಿನ ಮಾಹಿತಿಗಾಗಿ ಹಾಗೂ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ www.bwssb.gov.in ಗೆ ಭೇಟಿ ನೀಡಿ.