Home Local ದಿ.8 ಕ್ಕೆ ಮಾನವ್ಯ ಕವಿ ಸನದಿ ಅವರ ‘ಧಾರವಾಡ ಪೇಡೆ’ ಮಕ್ಕಳ ಕವಿತಾ ಸಂಕಲನ ಅನಾವರಣ...

ದಿ.8 ಕ್ಕೆ ಮಾನವ್ಯ ಕವಿ ಸನದಿ ಅವರ ‘ಧಾರವಾಡ ಪೇಡೆ’ ಮಕ್ಕಳ ಕವಿತಾ ಸಂಕಲನ ಅನಾವರಣ ಸಮಾರಂಭ

SHARE

ಕುಮಟಾ: ಹಿರಿಯ ಕವಿ ಡಾ.ಬಿ.ಎ.ಸನದಿಯವರ ಮಕ್ಕಳ ಕವಿತಾ ಸಂಕಲನ ‘ಧಾರವಾಡ ಪೇಡೆ’ ಬಿಡುಗಡೆ ಸಮಾರಂಭ ಮತ್ತು ಮಕ್ಕಳ ಕವಿಗೋಷ್ಠಿಯನ್ನು ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಪಿ.ಆರ್.ನಾಯಕ ಸಭಾಭವನದಲ್ಲಿ ದಿ. 8 ಶನಿವಾರ, ಅಪರಾಹ್ನ 3.15 ಕ್ಕೆ ಧಾರವಾಡದ ಅಮುಪ ಪ್ರಕಾಶನ ಸಹಯೋಗದೊಡನೆ ಆಯೋಜಿಸಲಾಗಿದೆ.

ಹಿರಿಯ ಸಾಹಿತಿಗಳಾದ ಡಾ.ಬಾಳಣ್ಣ ಶೀಗಿಹಳ್ಳಿ ಧಾರವಾಡ ಅವರು ಕೃತಿ ಲೋಕಾರ್ಪಣೆಗೊಳಿಸಲಿದ್ದು, ಅತಿಥಿಗಳಾಗಿ ಅಮುಪ ಪ್ರಕಾಶನದ ಪ್ರಕಾಶಕಿ ಪರವೀನ ಎ.ದರ್ಗಾ ಧಾರವಾಡ ಮತ್ತು ಸಾಹಿತಿ ಎ.ಎ.ದರ್ಗಾ ಆಗಮಿಸಲಿದ್ದಾರೆ. ಕವಿ ಸನದಿಯವರೂ ಉಪಸ್ಥಿತರಿದ್ದು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಲಿದ್ದಾರೆ.

ಮುಖ್ಯಾಧ್ಯಾಪಕ ಎನ್.ಆರ್.ಗಜು ಆತಿಥ್ಯ ವಹಿಸಿಲಿದ್ದು ವಿದ್ಯಾರ್ಥಿಕವಿಗಳಾದ ರಕ್ಷಿತಾ ಪಟಗಾರ, ವಿಶ್ವಾಸ ಪೈ, ಸುಬ್ರಹ್ಮಣ್ಯ ಗುನಗಾ, ಹರ್ಷಿತಾ ನಾಯ್ಕ, ಮುಕ್ತಾ ಭಟ್ಟ, ದರ್ಶನ್ ನಾಯ್ಕ ಸ್ವರಚಿತ ಕವಿತೆಗಳನ್ನು ವಾಚಿಸಲಿದ್ದಾರೆಂದು ಡಾ.ಬಿ.ಎ.ಸನದಿ ಸಾಹಿತ್ಯ ಸಂಘದ ಸಂಚಾಲಕ, ಶಿಕ್ಷಕ ಸುರೇಶ ಪೈ ಪ್ರಕಟಣೆಯಲ್ಲಿ ತಿಳಿಸಿದ್ದು ಸಾಹಿತ್ಯಾಸಕ್ತರು ಆಗಮಿಸಬೇಕೆಂದು ಕೋರಿದ್ದಾರೆ.