Home Local ಪ್ರತಿಭಾ ಕಾರಂಜಿಯಲ್ಲಿ ಮಿಂಚಿದ ಜೋಗಾಳಕೇರಿ ಪ್ರತಿಭೆ

ಪ್ರತಿಭಾ ಕಾರಂಜಿಯಲ್ಲಿ ಮಿಂಚಿದ ಜೋಗಾಳಕೇರಿ ಪ್ರತಿಭೆ

SHARE

ಯಲ್ಲಾಪುರ: ಯಲ್ಲಾಪುರದ ಮಳವಳ್ಳಿಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿಯಲ್ಲಿ ಸರಕಾರಿ ಕಿರಿಯ ಪ್ರಥಮಿಕ ಶಾಲೆಯ ಜೋಗಾಳಕೇರಿಯ ವಿದ್ಯಾರ್ಥಿನಿ ದೀಪಿಕಾ ರತ್ನಾಕರ್ ಹೆಬ್ಬಾರ್ ಹಿರಿಯರ ವಿಭಾಗದ ಇಂಗ್ಲೀಷ್ ಕಂಠಪಾಠ, ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಅಭಿನಯಗೀತೆ ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನ ಹಾಗೂ ಸಾಮೂಹಿಕ ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದು ತಾಲೂಕಾಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.

”ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು” ಎಂಬಂತೆ ಈ ಗ್ರಾಮೀಣ ಪ್ರತಿಭೆ ಮುಂದಿನ ದಿನಗಳಲ್ಲಿ ಬಹುಮುಖ ಪ್ರತಿಭೆ ಆಗಿ ಬೆಳೆಯಲೆಂದು ಶಾಲಾ ಶಿಕ್ಷಕರಾದ ಶ್ರೀಮತಿ ವೈಶಾಲಿ ಆರ್. ನಾಯಕ ಹಿರೇಗುತ್ತಿ, ಗೀತಾ ಮಹಾಲೆ, ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶ್ರೀ ರತ್ನಾಕರ ಹೆಬ್ಬಾರ್ ಕ್ಷೇತ್ರ ಶಿಕ್ಷಣಾಧಿಕಾರಿಯವರಾದ ಶ್ರೀಯುತ ಎನ್.ಆರ್.ಹೆಗಡೆಯವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.

ವರದಿ: ಎನ್. ರಾಮು ಹಿರೇಗುತ್ತಿ