Home Local ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಯುವತಿ: ಹೊನ್ನಾವರದ ಮಂಕಿಯಲ್ಲಿ ದುರ್ಘಟನೆ.

ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಯುವತಿ: ಹೊನ್ನಾವರದ ಮಂಕಿಯಲ್ಲಿ ದುರ್ಘಟನೆ.

SHARE

ಹೊನ್ನಾವರ: ತಾಲ್ಲೂಕಿನ ಮಂಕಿಯಲ್ಲಿ ಯುವತಿಯೊಬ್ಬಳು ರೈಲ್ವೆ ಹಳಿಯ ಮೇಲೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಮಂಕಿಯ ವಡಿಗೇರಿಯ ಯುವತಿ ಮಾಲಿನಿ ಗೌಡ (23) ಆತ್ಮಹತ್ಯೆ ಮಾಡಿಕೊಂಡವಳು. ಮಂಕಿ– ಮುರ್ಡೇಶ್ವರದ ನಡುವಿನ ರೈಲ್ವೆ ಹಳಿಯ ಮೇಲೆ ಈಕೆ‌ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಸಂಜೆಯ ಸುಮಾರು 4 ಗಂಟೆಯ ವೇಳೆಗೆ ಎರ್ನಾಕುಲಂ– ಪುಣೆ ಪೂರ್ಣಾ ಎಕ್ಸ್‌ಪ್ರೆಸ್‌ ರೈಲಿಗೆ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಳು ಎಂಬ ಬಗ್ಗೆ ಪೂರ್ಣ ಮಾಹಿತಿ ಸಿಕ್ಕಿಲ್ಲವಾದರೂ ಮಂಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ.