Home Food ಬಿಸಿಬಿಸಿ ಗೋಳಿ ಬಜೆ ಸವಿಯಿರಿ!

ಬಿಸಿಬಿಸಿ ಗೋಳಿ ಬಜೆ ಸವಿಯಿರಿ!

SHARE

ಗೋಳಿ ಬಜೆ ಮಾಡಲು ಬೇಕಾಗುವ ಸಾಮಗ್ರಿಗಳು:

ಮೈದಾ ಹುಡಿ – 1 ಕಪ್
ಮೊಸರು/ ದಪ್ಪ ಮಜ್ಜಿಗೆ – 1/2 ಕಪ್
ಶುಂಠಿ – 1 ಚಮಚ (ಸಣ್ಣಗೆ ಹೆಚ್ಚಿದ್ದು ಅಥವಾ ತುರಿದಿದ್ದು)
ಹಸಿ ಮೆಣಸು – 1 ಚಮಚ (ಸಣ್ಣಗೆ ಹೆಚ್ಚಿ)
ಕರಿ ಬೇವು – 5-6 (ಸಣ್ಣಗೆ ಹೆಚ್ಚಿ)
ಹಿಂಗು – ಸ್ವಲ್ಪ
ಬೇಕಿಂಗ್ ಸೋಡಾ – ½ ಚಮಚ
ಸಕ್ಕರೆ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕರಿಯಲು ಎಣ್ಣೆ

ಮಾಡುವ ವಿಧಾನ:

ಮೇಲಿನ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ, ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ, ದೋಸೆ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಹಿಟ್ಟು ಮಾಡಿಟ್ಟುಕೊಂಡು, 15-20 ನಿಮಿಷ ಮುಚ್ಚಿ ಇಡಬೇಕು. ನಂತರ ಸಣ್ಣದಾದ ಉಂಡೆ ಮಾಡಿಕೊಂಡು, ಕಾದ ಎಣ್ಣೆ ಗೆ ಹಾಕಿ, ಚೆನ್ನಾಗಿ ಕೆಂಬಣ್ಣ ಬರುವ ತನಕ ಕರಿಯಬೇಕು. ಇದನ್ನು ತೆಂಗಿನ ಕಾಯಿ ಚಟ್ನಿ ಯೊಂದಿಗೆ ಬಿಸಿಬಿಸಿ ಸವಿಯಬೇಕು.