Home Local ಮೋದಿಯವರ ಕನಸು ನನಸಾಗಿಸಲು ಶಾಸಕ ದಿನಕರ‌ ಶೆಟ್ಟಿ ಶ್ರಮಿಸುತ್ತಿದ್ದಾರೆ: ಶ್ರೀಕಲಾ ಶಾಸ್ತ್ರಿ

ಮೋದಿಯವರ ಕನಸು ನನಸಾಗಿಸಲು ಶಾಸಕ ದಿನಕರ‌ ಶೆಟ್ಟಿ ಶ್ರಮಿಸುತ್ತಿದ್ದಾರೆ: ಶ್ರೀಕಲಾ ಶಾಸ್ತ್ರಿ

SHARE

ಹೊನ್ನಾವರ. : ಸಾವಿರಾರು ಜನರಿಗೆ ಗ್ಯಾಸ್ ಸಂಪರ್ಕ ನೀಡುವುದರ ಮೂಲಕ ಹೊಗೆ ರಹಿತ ಮನೆಗಳ ಕನಸು ಕಂಡಂತ ಪ್ರದಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಬಡ ಜನತೆಗೆ ಉಚಿತ ಗ್ಯಾಸ್ ಸಂಪರ್ಕ ನೀಡುತ್ತಿದ್ದಾರೆ ಇದರ ಸದುಪಯೋಗವನ್ನು ಎಲ್ಲರೂ ಪಡೆಯಲಿ ಎಂಬ ಆಶಯದಿಂದ ಶಾಸಕರು ಗ್ರಾಮ ಗ್ರಾಮದಲ್ಲಿ ಈ ಕಾರ್ಯ ನಡೆಸುತ್ತಿದ್ದಾರೆ ಎಂದು ಜಿ.ಪಂ ಸದಸ್ಯೆ ಶ್ರೀಕಲಾ ಶಾಸ್ತ್ರೀ ಹೇಳಿದರು ಅವರು ಹೊನ್ನಾವರ ತಾಲೂಕಿನ ಸಾಲ್ಕೋಡ ಗ್ರಾಮ ಪಂಚಾಯತ ವ್ಯಾಪ್ತಿಯ 103 ಫಲಾನುಭವಿಗಳಿಗೆ ಅರೇಅಂಗಡಿಯಲ್ಲಿ ಪ್ರದಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಉಚಿತ ಅಡುಗೆ ಅನಿಲ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ದಿನಕರ ಶೆಟ್ಟಿಯವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.

ಶಾಸಕರಾದ ದಿನಕರ‌ಶೆಟ್ಟಿಯವರು ಅನಿಲ ವಿತರಣೆ ಮಾಡಿ ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಮಾತನಾಡಿದರು.

ಈ ಸಂದರ್ಭದಲ್ಲಿ ಟಿ ಎಸ್ ಹೆಗಡೆ, ತಾಲೂಕಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜು ಭಂಡಾರಿ ,ಎಂ ಎಸ್ ಹೆಗಡೆ ಕಣ್ಣಿ, ಎನ್ ಎಸ್ ಹೆಗಡೆ ,ಆರ್ ಎಂ ಹೆಗಡೆ ಶ್ರೀಧರ ಹೆಗಡೆ ಮತ್ತು ಎಲ್ ಪಿ ಜಿ ವಿತರಕರು ಉಪಸ್ಥಿತರಿದ್ದರು.