Home Local ಮುದ್ದುಕೃಷ್ಣ ಛದ್ಮವೇಷ ಸ್ಪರ್ಧೆಯಲ್ಲಿ ಧನುಷ್ಯ ನಾಗಪ್ಪ ಗೌಡ ಪ್ರಥಮ,ಶ್ರೀರಾಮ ಗಿರೀಶ ಭಟ್ಟ ದ್ವಿತೀಯ

ಮುದ್ದುಕೃಷ್ಣ ಛದ್ಮವೇಷ ಸ್ಪರ್ಧೆಯಲ್ಲಿ ಧನುಷ್ಯ ನಾಗಪ್ಪ ಗೌಡ ಪ್ರಥಮ,ಶ್ರೀರಾಮ ಗಿರೀಶ ಭಟ್ಟ ದ್ವಿತೀಯ

SHARE

ಕುಮಟಾ : ವಿಶ್ವ ಹಿಂದು ಪರಿಷತ್ ಕುಮಟಾ ಇವರು ನಡೆಸಿದ ಮುದ್ದುಕೃಷ್ಣ ಛದ್ಮವೇಷ ಸ್ಪರ್ಧೆಯಲ್ಲಿ ರಂಗಾ ದಾಸ ಶಾನಭಾಗ ಹೆಗಡೆಕರ ಬಾಲಮಂದಿರದ ಎಲ್.ಕೆ.ಜಿ ವಿದ್ಯಾರ್ಥಿಗಳಾದ ಧನುಷ್ಯ ನಾಗಪ್ಪ ಗೌಡ ಕಾಳಿಂಗ ಮರ್ದನ ಕೃಷ್ಣ ವೇಷದಿಂದ ರಂಜಿಸಿ ಪ್ರಥಮ ಸ್ಥಾನ ಗಳಿಸಿದರೆ ಶ್ರೀರಾಮ ಗಿರೀಶ ಭಟ್ಟ ಗೋವು ಕಾಯುವ ಕೃಷ್ಣನ ವೇಷದಿಂದ ಜನರನ್ನು ರಂಜಿಸಿ ದ್ವಿತೀಯ ಸ್ಥಾನ ಗಳಿಸಿದನು.

ಅದೇ ರೀತಿ ಲಯನ್ಸ ಕ್ಲಬ್ ಹೊನ್ನಾವರ ಇವರು ನಡೆಸಿದ ಮುದ್ದು ಕೃಷ್ಣ ಸ್ಪಧೆಯಲ್ಲಿ ಯು.ಕೆ.ಜಿಯ ಸಂತನು ದತ್ತಾತ್ರಯ ಭಟ್ಟ ದನಗಾಹಿ ಕೃಷ್ಣನ ವೇಷ ಧರಿಸಿ ಪ್ರಥಮ ಸ್ಥಾನ ಪಡೆದರು.ಈ ಮೂರು ವಿದ್ಯಾರ್ಥಿಗಳು ನಮ್ಮ ಸಂಸ್ಥೆ ಮತ್ತು ಶಾಲೆಗೆ ಕೀರ್ತಿ ತಂದಿದ್ದು ಎಲ್ಲರ ಪರವಾಗಿ ಇವರಿಗೆ ಹೃತ್ಪೂರ್ವಕ ಅಭಿನಂದನೆಗಳು.