Home Local ಬಂದ್ ಆಯ್ತು ಶಿರಸಿ: ನಡು ಬೀದಿಯಲ್ಲಿ ಚಹಾ ತಿಂಡಿ ತಯಾರಿಸಿ ಪ್ರತಿಭಟನೆ ನಡೆಸಿದ ಪ್ರಮುಖರು!

ಬಂದ್ ಆಯ್ತು ಶಿರಸಿ: ನಡು ಬೀದಿಯಲ್ಲಿ ಚಹಾ ತಿಂಡಿ ತಯಾರಿಸಿ ಪ್ರತಿಭಟನೆ ನಡೆಸಿದ ಪ್ರಮುಖರು!

SHARE

ಶಿರಸಿ: ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್  ನೀಡಿರುವ ಭಾರತ್ ಬಂದ್ ಕರೆಯಿಂದಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ.

ಶಿರಸಿ ಸೇರಿದಂತೆ ರಾಜ್ಯದ ಹಲವೆಡೆ ಬಸ್ ಸಂಚಾರ ಸ್ಥಗಿತವಾಗಿದ್ದು ಬಸ್ ನಿಲ್ದಾಣಗಳಲ್ಲಿ ಸಿಕ್ಕಿ ಹಾಕಿಕೊಂಡಿರುವ ಪ್ರಯಾಣಿಕರು ಪರದಾಡುತ್ತಿದ್ದಾರೆ. 

ಶಿರಸಿಯಲ್ಲಿ ಬಂದರ್ ಯಶಸ್ವಿಯಾಗಿದ್ದು ಕಾಂಗ್ರೆಸ್ ಕಾರ್ಯಕರ್ತರು ನಡು ರಸ್ತೆಯಲ್ಲೆ ಚಹಾ, ತಿಂಡಿ ತಿನಿಸುಗಳು ತಿನ್ನುತ್ತಾ ಶಿರಸಿ ಸಂಪೂರ್ಣ ಬಂದಗೆ ಬೆಂಬಲ ನೀಡಿದೆ ಎಂದು ತೋರಿಸಿಕೊಟ್ಟರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಹಾಗೂ ಪಕ್ಷದ ಪ್ರಮುಖರು ನಡು ಬೀದಿಯಲ್ಲಿ ಚಹಾ ತಯಾರಿಸಿ ಅಡುಗೆ ಮಾಡಿ ಬಂದ್ ಗೆ ಬೆಂಬಲ ಸೂಚಿಸಿದರು. ಅಂಗಡಿ ಮುಂಗಟ್ಟು ಬಂದ್ ಆಗಿದ್ದು ಬೀದಿಗಳು ಬಿಕೋ ಎನ್ನುತ್ತಿದ್ದವು.