Home Local ವಿಶ್ವ ದೇಹದಾಢ್ರ್ಯ ಸ್ಪರ್ಧೆಯಲ್ಲಿ ಕಂಚಿನ ಪದಕ ರಾಜೇಶ ಮಡಿವಾಳ: ಕುಮಟಾದ ಕುವರನಿಗೆ ಅಭಿನಂದನೆ

ವಿಶ್ವ ದೇಹದಾಢ್ರ್ಯ ಸ್ಪರ್ಧೆಯಲ್ಲಿ ಕಂಚಿನ ಪದಕ ರಾಜೇಶ ಮಡಿವಾಳ: ಕುಮಟಾದ ಕುವರನಿಗೆ ಅಭಿನಂದನೆ

SHARE

ಕುಮಟಾ: ಶ್ರೀ ರಾಜೇಶ ಮಡಿವಾಳ ಅಗ್ನಿ ಶಾಮಕ ಇಲಾಖೆ ಕುಮಟಾ ಇವರು ದಕ್ಷಿಣ ಕೊರಿಯಾದಲ್ಲಿ ನಡೆದ ದಿನಾಂಕ : 09-09-2018 ರಿಂದ 13-09-2018 ರವರೆಗೆ ವಿಶ್ವ ಅಗ್ನಿಶಾಮಕ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದು ಇವರು ದೇಹದಾಢ್ರ್ಯ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದು ದೇಶಕ್ಕೆ ಕೀರ್ತಿ ತಂದಿದ್ದಾರೆ.

ಇವರ ಈ ಸಾಧನೆಗೆ ತರಬೇತುದಾರರಾದ ಎಸ್.ಡಿ. ನಾಯ್ಕ ಉ.ಕ. ಜಿಲ್ಲಾ ದೇಹದಾಢ್ರ್ಯ ಸಂಘದ ಕಾರ್ಯದರ್ಶಿ ಜಿ.ಡಿ. ಭಟ್ಟ ಹಾಗೂ ಇನ್ನಿತರ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ. ಅದಲ್ಲದೇ ಅನೇಕ ಕಡೆಗಳಿಂದ ಅಭಿನಂದನೆಗಳೂ ಹರಿದುಬರುತ್ತಿದೆ.

ಇವರ ಸಾಧನೆ ಇನ್ನಷ್ಟು ಹೆಚ್ಚಲಿ ಎಂಬುದೇ ಸತ್ವಾಧಾರದ ಆಶಯವಾಗಿದೆ.