Home Local ವಿದ್ಯಾರ್ಥಿಗಳಲ್ಲಿನ ಕ್ರೀಡಾ ಬೌಧಿಕತೆ ಶ್ಲಾಘನೀಯ – ಶ್ರೀ ಕೆ. ವಿ. ಶೆಟ್ಟಿ.

ವಿದ್ಯಾರ್ಥಿಗಳಲ್ಲಿನ ಕ್ರೀಡಾ ಬೌಧಿಕತೆ ಶ್ಲಾಘನೀಯ – ಶ್ರೀ ಕೆ. ವಿ. ಶೆಟ್ಟಿ.

SHARE

ಅಂಕೋಲಾ : “ಹೈಸ್ಕೂಲ್ ವಿದ್ಯಾರ್ಥಿಗಳಲ್ಲಿ ಕ್ರೀಡಾ ಜ್ಞಾನ ಅಗಾಧವಾಗಿದ್ದು ಈ ರಸಪ್ರಶ್ನೆ ಕಾರ್ಯಕ್ರಮ ಅವರ ಪ್ರತಿಭೆಯನ್ನು ಅನಾವರಣಗೊಳಿಸಿದೆ. ಕ್ರೀಡೆಯಲ್ಲಿ ಸಾಧನೆ ಮಾಡಿದವರ ಹೆಸರು ಬರೆದ ದಾಖಲೆಗಳು ಧರಿಸುವ ಉಡುಪು ಹಾಗೂ ಕ್ರೀಡಾ ಚಿನ್ನೆಗಳನ್ನು ಮೊದಲಾದ ಕ್ರೀಡೆಗೆ ಸಂಬಂಧಿಸಿದ ಜ್ಞಾನವನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡಿದ್ದು ಶ್ಲಾಘನೀಯವಾಗಿದ್ದು ಕಾಲೇಜಿನಲ್ಲಿ ಇದುವರೆಗಿನ ವಿನುತನ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಕೆನರಾ ವೇಲ್‍ಫರ್ ಟ್ರಸ್ಟನ ಧರ್ಮದರ್ಶಿಗಳಾದ ಶ್ರೀ ಕೆ. ವಿ. ಶೆಟ್ಟಿ ಅಭಿಪ್ರಾಯ ಪಟ್ಟರು.

ಅಂಕೋಲಾದ ಜಿ. ಸಿ. ಕಾಲೇಜು ‘ರಾಷ್ಟೀಯ ಕ್ರೀಡಾ ದಿನ’ದ ಅಂಗವಾಗಿ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾ ರಸಪ್ರಶ್ನೆ ಸ್ಫರ್ಧೆಯ ಪಾರಿತೋಷಕ ವಿತರಣಾ ಸಮಾರಂಭದ ಅತಿಥಿಗಳಾಗಿ ಮಾತನಾಡುತ್ತಿದ್ದರು. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಚಟುವಟಿಕೆ ನಡೆಯುವಂತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಪ್ರಾಯೋಜಕರು ಇನ್ನೋರ್ವ ಅತಿಥಿಗಳಾದ ಅಂಕೋಲಾ ಸ್ಟೇಟ್ ಬ್ಯಾಂಕ್ ಆಫ ಇಂಡಿಯಾದ ಶಾಖಾ ವ್ಯವಸ್ಥಾಪಕರಾದ ಶ್ರೀ ಎಂ. ವಿ. ರಮೇಶ ಮಾತನಾಡಿ ಈ ರೀತಿಯ ಕಾರ್ಯಕ್ರಮಗಳಿಗೆ ಬ್ಯಾಂಕ ಸಹಕರಿಸುತ್ತದೆ ಮತ್ತು ಮಕ್ಕಳ ಸ್ಫರ್ಧೆ ಅಚ್ಚುಕಟ್ಟಾಗಿ ನಡೆದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಇಮ್ತಿಯಾಜ ಅಹ್ಮದ ಖಾನ್ ಇವರು ಮಾತನಾಡುತ್ತ ಹೊಸ ರೀತಿಯ ಈ ಕಾರ್ಯಕ್ರಮ ಯಶಸ್ವಿಯಾದ ಬಗ್ಗೆ ಸಂತೋಷ ವ್ಯಕ್ತ ಪಡಿಸಿ. ಮುಂದಿನ ದಿನಗಳಲ್ಲಿ ಕ್ರೀಡೆಗೆ ಸಂಬಂದಪಟ್ಟ ಹಲವು ಚಟುವಟಿಕೆಗಳನ್ನು ಕೈಗೊಂಡರೆ ಕಾಲೇಜು ಸದಾ ಸಹಕರಿಸುತ್ತದೆ ಎಂದರು.
ಕಾರ್ಯಕ್ರಮದ ಸಂಯೋಜಕರಾದ ಕಾಲೇಜಿನ ದೈಹಿಕ ನಿರ್ದೇಶಕರಾದ ಶ್ರೀ ಅಶ್ವೀನ ಆರ್. ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರ ಉಪಕಾರ ಸ್ಮರಿಸಿದರು.
ಈ ಕ್ರೀಡಾ ರಶಪ್ರಶ್ನೆಯಲ್ಲಿ ಜಿಲ್ಲೆಯ ಹಲವು ಪ್ರೌಢ ಶಾಲೆಗಳು ಸ್ಫರ್ಧಿಸಿದ್ದು ಹಲವಾರು ಸುತ್ತುಗಳ ನಂತರದಲ್ಲಿ ಆರು ತಂಡಗಳು ಅಂತಿಮ ಹಂತವನ್ನು ತಲುಪಿದ್ದವು. ಸ್ಫರ್ಧೆಗೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು ಶ್ಲಾಘನೆಗೆ ಒಳಗಾಗಿತ್ತು.

ಅಂತಿಮ ಸುತ್ತಿನಲ್ಲಿ ಬಿಜಿಎಸ್, ಮಿರ್ಜಾನ ರೂ. 5000/- ಪ್ರಥಮ, ಮಹಾತ್ಮಾ ಗಾಂಧಿ ಪ್ರೌಢಶಾಲೆ ಚಿತ್ರಗಿ ರೂ. 3000/- ದ್ವೀತೀಯ ಹಾಗೂ ತೃತೀಯ ಸ್ಥಾನವನ್ನು ಪಿ.ಎಂ. ಇಂಗ್ಲೀಷ ಮಾದ್ಯಮ ಹೈಸ್ಕೂಲ್ ರೂ. 2000/- ಬಹುಮಾನ ಹಾಗೂ ಪಾರಿತೋಷಕ ಪಡೆದುಕೊಂಡರು. ಆರಂಭದಲ್ಲಿ ಪ್ರೀಯಾಂಜಲಿ ಪ್ರಾರ್ಥನೆ ಹಾಡಿದರು. ಉಪನ್ಯಾಸಕರಾದ ಶ್ರೀ ಉಲ್ಲಾಸ ಹುದ್ದಾರ್ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ಶ್ರೀ ನಾಗರಾಜ ದಿವಗಿ ಕಾರ್ಯಕ್ರಮವನ್ನು ನಿರ್ವಹಿಸಿದರು.
ರಸಪ್ರಶ್ನೆ ಸ್ಫರ್ಧೆಗೆ ಮೌಲ್ಯಮಾಪಕರಾಗಿ ಡಾ. ಅಶೋಕ ಕುಮಾರ ಹಾಗೂ ದರ್ಶನ ಸಹಕರಿಸಿದರು. ಸಚಿನ ಎಂ. ಶೆಟ್ಟಿ ಮತ್ತು ನಿತಿನ ಹಲಗೇಕರ ಇವರು ರಸಪ್ರಶ್ನೆಯ ಸಂಘಟನೆಯಲ್ಲಿ ಸಹಕರಿಸಿದರು.

ಕಾರ್ಯಕ್ರಮದ ಯಶಸ್ಸಿಗೆ ಟ್ರಸ್ಟಿನ ಸಿಬ್ಬಂದಿಗಳು, ಪದವಿ ಹಾಗೂ ಪಿಯು ವಿಭಾಗದ ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಗಳ ಸಹಕಾರ ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು.