Home Local ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ವೈಯುಕ್ತಿಕ ವೀರಾಗ್ರಣಿ ಪಟ್ಟಿ

ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ವೈಯುಕ್ತಿಕ ವೀರಾಗ್ರಣಿ ಪಟ್ಟಿ

SHARE

ಕುಮಟಾ:2018-19 ನೇ ಸಾಲಿನ 14ರ ವಯೋಮಿತಿ ಒಳಗಿನ ಪ್ರಾಥಮಿಕ ವಿಭಾಗದ ಇಲಾಖಾ ಕ್ರೀಡಾ ಕೂಟವು ದಿ: 11/09/2018 ರಂದು ತಾಲೂಕಾ ಮಟ್ಟದಲ್ಲಿ ನಡೆದಿದ್ದು, ಕಾಳಮ್ಮ ನಗರ ಕ್ರೀಡಾಂಗಣದಲ್ಲಿ ಮೊರಾರ್ಜಿ ಶಾಲೆಯು ಭಾಗವಹಿಸಿ, ವೈಯುಕ್ತಿಕ ವೀರಾಗ್ರಣಿಯನ್ನು ಬಾಚಿಕೊಂಡಿರುತ್ತದೆ .

ಕೃಷ್ಣಮೂರ್ತಿ ಸಿದ್ದಿ 600ಮೀ ಓಟ ಪ್ರಥಮ, 400ಮೀ ಓಟ ಪ್ರಥಮ, ಮತ್ತು ಗುಂಡು ಎಸೆತ ಪ್ರಥಮ ವೈಯುಕ್ತಿಕ ವೀರಾಗ್ರಣಿಯನ್ನು ಪಡೆದಿರುತ್ತಾನೆ. ಪ್ರವೀಣ ಸಿದ್ದಿ 600ಮೀ ಓಟ ದ್ವಿತೀಯ, ಹರೀಶ ಕಾಂಬ್ಳೆ ಮತ್ತು ಸಂಗಡಿಗರು 4 x 100 ಮೀ ರಿಲೇ ಪ್ರಥಮ, ಭಾವನಾ ಕಾಂಬ್ಳೆ 4 x 100 ಮೀ ರಿಲೇ ಪ್ರಥಮ, ಹರೀಶ ಕಾಂಬ್ಳೆ 200ಮೀ ಓಟ ತೃತೀಯ, ಬಾಲಕಿಯರ ಖೋ ಖೋ ದ್ವಿತೀಯ ಮತ್ತು ಬಾಲಕರ ವಾಲಿಬಾಲ್ ಪ್ರಥಮ

ದೈಹಿಕ ಶಿಕ್ಷಣ ಶಿಕ್ಷಕರಾಗಿ ತರಬೇತಿಯನ್ನು ನೀಡಿದ ಶ್ರೀ ಮನೋಹರ ಎಲ್ ನಾಯಕರನ್ನು ಶಾಲಾ ಪ್ರಬಾರಿ ಪ್ರಾಂಶುಪಾಲರಾದ ಶ್ರೀ ಸಂಜಯ ನಾಯಕ, ಶಿಕ್ಷಕ, ಶಿಕ್ಷಕೇತರ ವರ್ಗದವರು ಅಭಿನಂದಿಸಿದ್ದು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲೂ ಪ್ರಶಸ್ತಿಯನ್ನು ಪಡೆಯಲೆಂದು ಶುಭ ಹಾರೈಸಿರುತ್ತಾರೆ.