Home Local ಗ್ರಾಮಾಂತರ ಯುವಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಗ್ರಾಮಾಂತರ ಯುವಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

SHARE

ಗ್ರಾಮಾಂತರ ಯುವಕ ಸಂಘ‌ , ಬಾಡ-ಹುಬ್ಬಣಗೇರಿ (ರಿ) ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಿನ್ನೆ ನಡೆದಿದ್ದು ರಾಘವೇಂದ್ರ ನಾಯ್ಕ್ ಇವರನ್ನು ಸಂಘದ ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಂಘದ ಉಪಾಧ್ಯಕ್ಷರಾಗಿ ನಿತ್ಯಾನಂದ ನಾಯ್ಕ್ ಹಾಗೂ ಮಹೇಶ್ ನಾಯ್ಕ್ ಇವರು ಆಯ್ಕೆಯಾದರೆ , ವಿನಾಯಕ ನಾಯ್ಕ್ ಅವರು ಕಾರ್ಯದರ್ಶಿಯಾಗಿ ,‌ಸಂತೋಷ್ ನಾಯ್ಕ್ ಇವರು ಸಂಘಟನಾ ಕಾರ್ಯದರ್ಶಿಯಾಗಿ ಹಾಗೂ ಸಚಿನ್ ನಾಯ್ಕ್ ಅವರನ್ನು ಖಜಾಂಚಿಯಾಗಿ ಆಯ್ಕೆಮಾಡಲಾಯಿತು.

ಸಲಹಾ ಸಮೀತಿಯ ಸದಸ್ಯರಾಗಿ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಕೇಶವಾನಂದ ನಾಯ್ಕ್ , ಭಾಸ್ಕರ್ ನಾಯ್ಕ್ , ಮಹೇಂದ್ರ ನಾಯ್ಕ್ , ಪುರಂದರ ನಾಯ್ಕ್ , ವಿನಾಯಕ ನಾಯ್ಕ್ , ಮಹಾದೇವ ನಾಯ್ಕ್ ಹಾಗೂ ಬಾಲಕೃಷ್ಣ ನಾಯ್ಕ್ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಯಶವಂತ ನಾಯ್ಕ್ , ಶ್ರೀಧರ್ ನಾಯ್ಕ್ , ಪ್ರಭಾಕರ ನಾಯ್ಕ್ , ದೀಪಕ್ ನಾಯ್ಕ್ , ಗಿರೀಶ್ ನಾಯ್ಕ್ , ಯೋಗೀಶ್ ನಾಯ್ಕ್ , ರಾಜೀವ ನಾಯ್ಕ್ , ವಿನೋದ ನಾಯ್ಕ್ , ನಾಗರಾಜ ನಾಯ್ಕ್ ಸೇರಿದಂತೆ ಅನೇಕ ಸದಸ್ಯರು ಉಪಸ್ಥಿತರಿದ್ದರು.