Home Local ಹೊನ್ನಾವರದ ಕರ್ಕಿಯಲ್ಲಿ ಭೀಕರ ಅಪಘಾತ : ನೋಡು ನೋಡುತ್ತಲೇ ಹಾರಿತು ಜೀವ!

ಹೊನ್ನಾವರದ ಕರ್ಕಿಯಲ್ಲಿ ಭೀಕರ ಅಪಘಾತ : ನೋಡು ನೋಡುತ್ತಲೇ ಹಾರಿತು ಜೀವ!

SHARE

ಹೊನ್ನಾವರ : ತಾಲೂಕಿನ ಕರ್ಕಿಯಲ್ಲಿ ಪ್ಯಾಸೆಂಜರ್ ಟೆಂಪೋ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದೆ ಈ ಭೀಕರ ಅಪಘಾತದಲ್ಲಿ ಐದು ಜನ ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ .

ಕುಮಟಾದಿಂದ ಹೊನ್ನಾವರದ ಕಡೆಗೆ ಚಲಿಸುತ್ತಿದ್ದ ಟೆಂಪೋದಲ್ಲಿ ಸುಮಾರು 22-25 ಜನ ಪ್ರಯಾಣಿಕರು ಇದ್ದರು ಎಂದು ವರದಿಯಾಗಿದೆ .ಸಾಯಂಕಾಲ ಸಂಭವಿಸಿದ ಈ ಘಟನೆಯಲ್ಲಿ ಐದು ಜನ ಪ್ರಾಣ ಕಳೆದುಕೊಂಡಿದ್ದು ಇದರಲ್ಲಿ ಟ್ಯಾಂಪೋ ಚಾಲಕನ ಸಹಿತ ಓರ್ವ ಚಿಕ್ಕ ಬಾಲಕಿಯೂ ಸೇರಿದ್ದಾಳೆ ಎನ್ನಲಾಗಿದೆ .


KA 30 1313 ನಂಬರ್ ನ ಟ್ಯಾಂಪೋ ನಾದ ಪ್ರಕಾಶ ಹೆಸರನ್ನು ಹಿಂಬದಿಗೆ ಬರೆಸಲಾಗಿದೆ. ಇದೇ ಟ್ಯಾಂಪೋ ಅಪಘಾತಕ್ಕೆ ಈಡಾಗಿದೆ . ಗಣೇಶ ಚತುರ್ಥಿಯ ಸಂದರ್ಭವಾದ್ದರಿಂದ ಜನದಟ್ಟಣೆ ಹೆಚ್ಚಿದ್ದು ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚಿನದಾಗಿತ್ತು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ .

ಮೃತರನ್ನು ಕುಮಟಾ ಬಗ್ಗೋಣದ ಕಮಲಾಕರ‌ ಭಂಡಾರಿ, ಕುಮಟಾ ನಾಗೂರಿನ ಸಮಂತಾ ಮಡಿವಾಳ, ಹೊನ್ನಾವರದ ಮೋಹನ ಮೇಸ್ತಾ, ಸಿಂಚನಾ ಮಡಿವಾಳ, ನಾಗರಾಜ ನಾಯ್ಕ ಎಂದು ಗುರುತಿಸಲಾಗಿದೆ.