Home Local ಒಂದೂವರೆ ವರ್ಷ ಬಂದ್ ಆಗಲಿದೆಯೇ ಕುಮಟಾ- ಶಿರಸಿ ರಸ್ತೆ ? ಪರ್ಯಾಯ ಮಾರ್ಗದ ಬಗ್ಗೆ ನಡೆದಿದೆ...

ಒಂದೂವರೆ ವರ್ಷ ಬಂದ್ ಆಗಲಿದೆಯೇ ಕುಮಟಾ- ಶಿರಸಿ ರಸ್ತೆ ? ಪರ್ಯಾಯ ಮಾರ್ಗದ ಬಗ್ಗೆ ನಡೆದಿದೆ ಚಿಂತನೆ!

SHARE

ಕುಮಟಾ: ಕುಮಟಾ ಶಿರಸಿ ರಾಜ್ಯ ಹೆದ್ದಾರಿ ಬಂದ್ ಆಗಲಿದೆಯೇ? ಈ ಪ್ರಶ್ನೆ ಈಗ ಎಲ್ಲರ ಮನಸ್ಸಿನಲ್ಲಿ ಮೂಡುತ್ತಿದೆ .ಹೌದು ಇದಕ್ಕೆ ನಿಖರವಾದ ಕಾರಣವಿದೆ . ಅದೇನಪ್ಪಾ ಅಂದ್ರೆ ಈ ವರದಿಯನ್ನು ನೀವು ಓದಲೇಬೇಕು .

ಶಿರಸಿ- ಕುಮಟಾ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ 69ರ ಶಿರಸಿ ತಾಲೂಕಿನ ಬೆಳ್ಳೆಕೇರಿ ಕತ್ರಿಯಿಂದ ಕುಮಟಾವರೆಗಿನ 60 ಕಿ.ಮೀ ರಸ್ತೆಯನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಯು ಡಿಸೆಂಬರ್ ನಲ್ಲಿ ಕೈಗೊಳ್ಳುವುದರಿಂದ ಒಂದೂವರೆ ವರ್ಷ ಈ ರಸ್ತೆಯಲ್ಲಿ ಸಂಚಾರ ನಿಷೇಧಿಸಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ.

‌ಅಭಿವೃದ್ಧಿ‌ಪಡಿಸಲಾಗುತ್ತದೆ. ಕಾಮಗಾರಿ ನಡೆಯುವ ವೇಳೆ ಶಿರಸಿಯಿಂದ ಕುಮಟಾಕ್ಕೆ ಪರ್ಯಾಯ ಮಾರ್ಗವಾಗಿ ಸಿದ್ದಾಪುರ ಮತ್ತು ಯಲ್ಲಾಪುರ ರಸ್ತೆಯಲ್ಲಿ ಸಂಚಾರ ಕಲ್ಪಿಸಬಹುದು ಎಂದು ಪತ್ರದಲ್ಲಿ ಉಲ್ಲೇಖಿಲಾಗಿದೆ.

ಆದರೆ, ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಳಿಸಿದರೆ ಶಿರಸಿಯಿಂದ ಕುಮಟಾ, ಕಾರವಾರ, ಭಟ್ಕಳ, ಮಂಗಳೂರು ತೆರಳುವವರಿಗೆ ಸಮಸ್ಯೆಯಾಗಲಿದೆ. ಹೀಗಾಗಿ ಪರ್ಯಾಯ ಮಾರ್ಗದ ಬಗ್ಗೆ ಇದೀಗ ಚಿಂತನೆ ನಡೆದಿದೆ. ಕಾರವಾರ ಮತ್ತು ಗೋವಾಕ್ಕೆ ತೆರಳುವವರು ಯಲ್ಲಾಪುರ ಮೂಲಕ ರಾಷ್ಟ್ರೀಯ ಹೆದ್ದಾರಿ ಬಳಸಿ ಅಂಕೋಲಾಕ್ಕೆ ಮತ್ತು ಭಟ್ಕಳ, ಮಂಗಳೂರು ತೆರಳುವವರಿಗೆ ಸಿದ್ದಾಪುರ ಮೂಲಕ ಹೊನ್ನಾವರಕ್ಕೆ ಸಂಪರ್ಕಿಸುವ ಮಾರ್ಗ ಸೂಚಿಸಲು ಚಿಂತನೆ ನಡೆಯುತ್ತಿದೆ. ಇದೇ ವೇಳೆ ಶಿರಸಿಯಿಂದ ಹೆಗಡೆಕಟ್ಟಾ ಮಾರ್ಗವಾಗಿ ವಡ್ಡಿ ಘಾಟ್- ಅಂಕೋಲಾ ತಲುಪಬಹುದಾದರೂ ಇಲ್ಲಿ ರಸ್ತೆ ಸಮರ್ಪಕವಾಗಿರದ ಕಾರಣ ಬೃಹತ್ ವಾಹನಗಳಿಗೆ ತೊಂದರೆ ಆಗಲಿದೆ ಎನ್ನಲಾಗಿದೆ.

ಇದಕ್ಕೆ ಜಿಲ್ಲಾಧಿಕಾರಿಗಳು ಒಪ್ಪಿಗೆ ಸೂಚಿಸಿದರೆ ರಸ್ತೆ ಬಂದ್ ಆಗುವುದಂತೂ ಗ್ಯಾರಂಟಿ .ಆದರೆ ಆ ಅಷ್ಟೂ ದಿನಗಳು ಜನತೆ ಯಾವ ರೀತಿ ಪರ್ಯಾಯ ಮಾರ್ಗವನ್ನು ಅನುಸರಿಸುತ್ತಾರೆ ಎನ್ನೋದು ಈಗ ಇರುವ ಗೊಂದಲ.

ರಸ್ತೆಗೆ ಅಭಿವೃದ್ಧಿಯ ದೃಷ್ಟಿಯಿಂದ ನಾವಿದಕ್ಕೆ ಹೊಂದಿಕೊಳ್ಳಲೇ ಬೇಕು ಎಂಬುದು ಹಲವರ ಮಾತಾದರೆ. ಹೇಗಪ್ಪ ದಿನಂಪ್ರತಿ ಓಡಾಡೋದು ಎಂಬುದು ಇನ್ನೂ ಕೆಲವರ ಪ್ರಶ್ನೆ.