Home Local ಸದ್ದಿಲ್ಲದೇ ಹರಡುತ್ತಿದೆ ಉತ್ತರ ಕನ್ನಡದಲ್ಲಿ ಇಲಿ ಜ್ವರ! ಮೂವರ ಪ್ರಾಣ ಪಡೆಯಿತೇ ಈ ‘ಲೆಪ್ಟೋಸ್ಪೆರೊಸಿಸ್’?

ಸದ್ದಿಲ್ಲದೇ ಹರಡುತ್ತಿದೆ ಉತ್ತರ ಕನ್ನಡದಲ್ಲಿ ಇಲಿ ಜ್ವರ! ಮೂವರ ಪ್ರಾಣ ಪಡೆಯಿತೇ ಈ ‘ಲೆಪ್ಟೋಸ್ಪೆರೊಸಿಸ್’?

SHARE

ಅಂಕೋಲಾ: ಉತ್ತರ ಕನ್ನಡಿಗರಿಗೆ ಮತ್ತೆ ಇಲಿ ಜ್ವರದ ಸೋಂಕಿನ‌ ಭಯ ಕಾಡಲಾರಂಭಿಸಿದೆ. ಹೌದು ಅತಿಯಾದ ಮಳೆಯಿಂದಾಗಿ ಇಲಿ ಜ್ವರ ಹರಡಿದೆ ಎಂದು ಮಾಹಿತಿಗಳು ಲಭ್ಯವಾಗಿದೆ. ಜ್ವರ ಪತ್ತೆಯಾದ 25 ಮಂದಿಯ ಪೈಕಿ ಮೂವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.ಭಟ್ಕಳದಲ್ಲಿ ಇಬ್ಬರು ಹಾಗೂ ಅಂಕೋಲಾದಲ್ಲಿ ಒಬ್ಬರು ಈ ಜ್ವರದಿಂದ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.
ಹೀಗಾಗಿ ಜನತೆ ಸ್ವಲ್ಪ‌ಮಟ್ಟಿಗೆ ಮುನ್ನೆಚ್ವರಿಕಾ ಕ್ರಮ‌ಅನುಸರಿಸುವ ಅಗತ್ಯವೂ ಇದೆ ಎನ್ನಲಾಗಿದೆ.

ಇಲಿ‌ ಜ್ವರದ ಬಗ್ಗೆ ಇಲ್ಲಿದೆ ಮಾಹಿತಿ.

ಮಳೆಗಾಲದಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಮತ್ತೊಂದು ಮಹಾಮಾರಿ ರೋಗವೆಂದರೆ ಇಲಿಜ್ವರ. ಮಲೇರಿಯಾ ಮತ್ತು ಡೆಂಘೀ ಜ್ವರದ ನಂತರದ ಸ್ಥಾನ ಸಿಗುವುದಿದ್ದರೆ ಇಲಿ ಜ್ವರಕ್ಕೆ ಸಿಗಬೇಕು. ‘ಲೆಪ್ಟೋಸೈರಾ’ ಎಂಬ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಈ ಜ್ವರ ಸಾಮಾನ್ಯವಾಗಿ ಇಲಿ ಹೆಗ್ಗಣಗಳ ಮುಖಾಂತರ ಹರಡುತ್ತದೆ.

ಮನುಷ್ಯರಿಂದ ಮನುಷ್ಯರಿಗೆ ನೇರವಾಗಿ ಹರಡುವುದಿಲ್ಲ. ವ್ಶೆಜ್ಞಾನಿಕ ಬಾಷೆಯಲ್ಲಿ ಈ ರೋಗವನ್ನು ‘ಲೆಪ್ಟೋಸ್ಪೆರೊಸಿಸ್’ ಎಂದು ಕರೆಯಲಾಗುತ್ತದೆ. ಇಲಿಗಳ ಕಡಿತ ಅಥವಾ ಇಲಿಗಳಿಂದ ಮಲಿನಗೊಂಡ ದ್ರವಾಹಾರಗಳಿಂದ ಹರಡುವ ಈ ರೋಗ, ಹೆಚ್ಚಾಗಿ 20ರಿಂದ 50 ಆಸುಪಾಸಿನಲ್ಲಿ ಕಾಣಿಸಿಕೊಳ್ಳುತ್ತದೆ.

ಮಕ್ಕಳಲ್ಲಿ ಕಾಣಿಸುವುದು ಅಪರೂಪ,. ಇಲಿಗಳ ಕಡಿತ ಅಥವಾ ತೊಂದರೆ, ವರ್ಷದ ಯಾವುದೇ ಋತುವಿನಲ್ಲಿ ಆಗ ಬಹುದಾದರೂ, ಮಳೆಗಾಲದಲ್ಲಿ ಕೊಚ್ಚೆ ಅಥವಾ ಮಲೀನ ಪ್ರದೇಶಗಳಲ್ಲಿ ಇಲಿಗಳ ಸಂಖ್ಯೆ ಹೆಚ್ಚಾಗುವುದರಿಂದ ಇಲಿ ಜ್ವರ ಮಳೆಗಾಲದಲ್ಲಿ ಹೆಚ್ಚು ಕಾಣಸಿಗುತ್ತದೆ.

ಸಾಮಾನ್ಯವಾಗಿ ರಕ್ತನಾಳಗಳನ್ನು ಆಕ್ರಮಿಸುವ ಈ ಬ್ಯಾಕ್ಟೀರಿಯಾ, ಕ್ರಮೇಣ ಶ್ವಾಸಕೋಶ, ಮೆದುಳು, ಪಿತ್ತಜನಕಾಂಗ, ಹೃದಯ ಮತ್ತು ಕಿಡ್ನಿಗಳಿಗೆ ವ್ಯಾಪಕವಾಗಿ ವಿಸ್ತರಿಸಿ ಎಲ್ಲಾ ಅಂಗಗಳನ್ನು ನಿಷ್ಕ್ರಿಯಗೊಳಿಸಿ ಮಾರಣಾಂತಿಕ ಕಾಯಿಲೆಯಾಗಿ ಮಾರ್ಪಡಾಗುತ್ತದೆ. ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಿ, ಸೂಕ್ತ ಚಿಕಿತ್ಸೆ ನೀಡಿದಲ್ಲಿ, ಪ್ರಾಣಪಾಯವನ್ನು ತಡೆಯಬಹುದು.

ಹೇಗೆ ಹರಡುತ್ತದೆ.. ?

ಸಾಮಾನ್ಯವಾಗಿ ಹಳ್ಳಿಗಾಡಿನ, ಗದ್ದೆ ಪ್ರದೇಶಗಳಲ್ಲಿ ಕೆಲಸ ಮಾಡುವ ರೈತಾಪಿ ಜನರಲ್ಲಿ ಮತ್ತು ತ್ಯಾಜ್ಯ ನಿರ್ವಹಣೆ ಮಾಡುವ ಕಾರ್ಮಿಕರಲ್ಲಿ ಕಾಣಸಿಗುತ್ತದೆ. ಇಲಿಗಳ ಮಲಮೂತ್ರಗಳಿಂದ ಮಲಿನಗೊಂಡ ಮಣ್ಣು, ನೀರು, ಆಹಾರಗಳ ಮೂಲಕ ಬ್ಯಾಕ್ಟೀರಿಯಾ ಮನಷ್ಯನ ದೇಹದೊಳಗೆ ಪ್ರವೇಶವಾಗುತ್ತದೆ. ತೆರೆದ ಗಾಯಗಳ ಮುಖಾಂತರ, ಮಲಿನಗೊಂಡ ಕುಡಿಯುವ ನೀರು ಆಹಾರಗಳಿಂದ ಮನುಷ್ಯ ದೇಹ ಸೇರಿದ ಬಳಿಕ ಇಲಿಜ್ವರ ಉಂಟಾಗಬಹುದು. ನಗರ ಪ್ರದೇಶದ ಕೊಳಚೆಗೇರಿಗಳಲ್ಲಿ ಇಲಿಗಳ ಸಂಖ್ಯೆ ಜಾಸ್ತಿ ಇರುವುದರಿಂದ ಸಾಕಷ್ಟು ಮುಂಜಾಗರೂಕತೆ ವಹಿಸಬೇಕಾಗುತ್ತದೆ ಇಲಿಗಳ ಮಲಮೂತ್ರ ಅಲ್ಲದೆ ಅವುಗಳ ಮೂಗು, ಕಣ್ಣು ಮತ್ತು ಬಾಯಿಯ ಎಂಜಲುಗಳಿಂದ ಮಾಲಿನಗೊಂಡ ಆಹಾರ ನೀರಿನ ಮುಖಾಂತರವೂ ಇಲಿಜ್ವರ ಕಾಣ ಬಹುದು.

ಇಲಿ ಜ್ವರದ ಲಕ್ಷಣಗಳು..

ಇಲಿಜ್ವರ ಸಾಮಾನ್ಯವಾಗಿ ಎರಡು ಹಂತಗಳಲ್ಲಿ ಕಾಣಿಸಿಕೊಳ್ಳಬಹುದು. ಇಲಿ ಕಡಿತದ ಬಳಿಕ ಅಥವಾ ಬ್ಯಾಕ್ಟೀರಿಯಾ ದೇಹದೊಳಗೆ ಪ್ರವೇಶಗೊಂಡ 3ರಿಂದ 9ದಿವಸಗಳ ಬಳಿಕ ರೋಗದ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭವಾಗಬಹುದು.
ಮೊದಲ ಹಂತದಲ್ಲಿ ಜ್ವರ ಅಥವಾ ಜ್ವರ ಬಂದಂತೆ ಅನಿಸಬಹುದು ಚಳಿ ಕೂಡಾ ಇರಬಹುದು.

ಮೈ, ಕೈ ನೋವು, ಸ್ನಾಯು ನೋವು, ಮಾಂಸಖಂಡಗಳ ಸೆಳೆತ, ಗಂಟುನೋವು, ವಾಂತಿಯ ಲಕ್ಷಣಗಳು ಇತ್ಯಾದಿಗಳು ಕಾಣಿಸಿ ಕೊಳ್ಳಬಹುದು. ಪ್ರಾಥಮಿಕ ಹಂತದ ಈ ಅವಧಿಯ ಬಳಿಕ ಒಂದೆರಡು ದಿನ ರೋಗಿ ಯಾವುದೇ ರೋಗ ಲಕ್ಷಣಗಳಿಲ್ಲದೆ, ರೋಗ ಗುಣವಾದಂತೆ ಭಾಸವಾಗಬಹುದು. ಈ ಹಂತದಲ್ಲಿ ಕೆಲವೊಮ್ಮೆ ಸುಮಾರು 90 ಶೇಕಡಾ ರೋಗಿಗಳು ಗುಣಮುಖವಾಗಲೂ ಬಹುದು. ಆದರೆ ಶೇಕಡಾ 10 ಮಂದಿರೋಗಿಗಳು ಎರಡನೇ ಹಂತದ ತೀವ್ರತೆಯ ಇಲಿಜ್ವರದ ಹಂತಕ್ಕೆ ತಲುಪಬಹುದು.

ಈ ಹಂತದಲ್ಲಿ ವಿಪರೀತ ಜ್ವರ, ಮೈ ನಡುಗುವಿಕೆ, ಅಸಹನೀಯ ತಲೆನೋವು, ವಿಪರೀತ ಸ್ನಾಯುನೋವು, ಕೆಂಪಾದ ಊದಿಕೊಂಡ ಕಣ್ಣುಗಳು ಹೊಟ್ಟೆ ಮತ್ತು ಕಾಲುಗಳ ಮಾಸಖಂಡಗಳಲ್ಲಿ ವಿಪರೀತ ನೋವು ಕೆಂಪಾದ ಮೂತ್ರ, ಜಾಂಡೀಸ್, ತೀವ್ರವಾದ ಎದೆನೋವು ಕಾಣಿಸಿಕೊಳ್ಳಬಹುದು. ಕ್ರಮೇಣ ಕಡಿತ ಮತ್ತು ಗುಳ್ಳೆಗಳು ಕಾಣಿಸಿಕೊಳ್ಳಬಹುದು.

ಕ್ರಮೇಣ ಕಿಡ್ನಿ ಶ್ವಾಸಕೋಶ, ಮೆದುಳು, ಯಕೃತ್ತು ಹೇಗೆ ಒಂದೊಂದಾಗಿ ಎಲ್ಲಾ ಅಂಗಾಂಗಗಳಿಗೆ ವ್ಯಾಪಿಸಿ ತೀವ್ರವಾದ ಸ್ವರೂಪ ಪಡೆದ ಜೀವಕ್ಕೆ ಕುತ್ತು ತರಬಹುದು. ಪ್ರಾರಂಭಿಕ ಹಂತದಲ್ಲಿ ವೈದ್ಯರನ್ನು ಕಂಡಲ್ಲಿ ಸರಿಯಾದ ಚಿಕಿತ್ಸೆ ಸಕಾಲದಲ್ಲಿ ದೊರತಲ್ಲಿ, ಜೀವಹಾನಿಯನ್ನು ತಡೆಗಟ್ಟಬಹುದು. ರೋಗವನ್ನು ಸಕಾಲದಲ್ಲಿ ಪತ್ತೆಹಚ್ಚಿದಲ್ಲಿ ಚಿಕಿತ್ಸೆ ಅತಿ ಸರಳ ಮತ್ತು ಪರಿಣಾಮಕಾರಿ. ರೋಗದ ಲಕ್ಷಣಗಳು ಹೆಚ್ಚಾಗಿ ಡೆಂಘೀ, ಮಲೇರಿಯಾ, ಟೈಪಾಯ್ಡ್, ಹೆಪ್ಪಟೈಟಿಸ್ ಮುಂತಾದ ರೋಗಗಳನ್ನು ಹೋಲುವುದರಿಂದ ರೋಗವನ್ನು ಪತ್ತೆಹಚ್ಚುವುದು ಸುಲಭದ ಮಾತಲ್ಲ. ಜ್ವರ ಬರಲು ಕಾರಣವಾದ ಅಂಶಗಳ ಬಗ್ಗೆ ಹೆಚ್ಚಿನ ವಿವರಗಳನ್ನು ರೋಗಿಗಳ ಅಥವಾ ರೋಗಿಗಳ ಬಂಧುಗಳಿಂದ ಕೇಳಿ ತಿಳಿದುಕೊಳ್ಳಬೇಕು.

ಆಧುನಿಕ ತಂತ್ರಜ್ಞಾನ ಮತ್ತು ಸಾಮಾನ್ಯ ತಿಳುವಳಿಕೆಗಳ ಸಮ್ಮಿಲನದಿಂದ ಸರಿಯಾದ ರೋಗದ ನಿರ್ಣಯಕ್ಕೆ ಬರಬಹುದ. ಆದಾಗ್ಯೂ ಇಐISಂ ಒಂಖಿ ಮತ್ತು Pಅಖ ಎಂಬ ಹೊಸ ಆವಿಷ್ಕಾರದ ಪರೀಕ್ಷೆಗಳಿಂದ ಇಲಿಜ್ವರವನ್ನು ಪತ್ತೆಹಚ್ಚಿದಲ್ಲಿ ಚಿಕಿತ್ಸೆ ಸುಲಭವಾಗುವುದರಲ್ಲಿ ಸಂಶಯವೇ ಇಲ್ಲ.

ತಡೆಗಟ್ಟುವುದು ಹೇಗೆ ?

ನಮ್ಮ ಸುತ್ತ ಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ಮಲಿನಗೊಂಡ ಕೊಳಚೆ ಪ್ರದೇಶಗಳಲ್ಲಿ ಸೊಳ್ಳೆ, ಇಲಿಗಳಿಗೆ ಸ್ವರ್ಗವಿದ್ದಂತೆ. ಇಂತಹಾ ಜಾಗಗಳಲ್ಲಿ ಮಲೇರಿಯಾ, ಡೆಂಘೀ ಮತ್ತು ಇಲಿಜ್ವರಗಳ ಉಗಮ ಸ್ಥಾನವಾಗಿರುತ್ತದೆ.
ಮನೆಯ ಸುತ್ತ ಮುತ್ತಲಲ್ಲಿರುವ ಇಲಿ ಹೆಗ್ಗಣಗಳನ್ನು ಸಾಯಿಸಬೇಕು. ಮತ್ತು ಖಾಲಿ ಕೈ ಗಳಿಂದ ಅವುಗಳನ್ನು ಮುಟ್ಟಲೇ ಬಾರದು ಇಲಿ ಹೆಗ್ಗಾಣಗಳು ಬೆಳೆಯಲು ಪೂರಕವಾದ ವಾತಾವರಣವನ್ನು ಮನೆಯ ಸುತ್ತ ಮುತ್ತ ಕಲ್ಪಿಸಿ ಕೊಡಲೇ ಬಾರದು.
ಹಳ್ಳಿ ಪ್ರದೇಶಗಳಲ್ಲಿ ಕೆಲಸ ಮಾಡುವ ರೈತರು, ಕೂಲಿ ಕೆಲಸದವರು ಚಪ್ಪಲಿ ಧರಿಸಲೇಬೇಕು. ಇಲ್ಲವಾಧಲ್ಲಿ ಕಾಲಿನ ಗಾಯಗಳ ಮುಖಾಂತರ ಹಲವಾರು ರೋಗಗಳನ್ನು ಉಂಟುಮಾಡುವ ರೋಗಗಳ ಬ್ಯಾಕ್ಟೀರಿಯಾಗಳು ದೇಹವನ್ನು ಪ್ರವೇಶಿಸಬಹುದು.
ಮನೆಯಲ್ಲಿ ಯಾವತ್ತು ಶುದ್ಧವಾದ ನೀರು ಮತ್ತು ಪ್ಯಾಶ್ಚರೀಲರಿಸಿದ ಹಾಲನ್ನೇ ಸೇವಿಸಬೇಕು. ಕಲುಷಿತಗೊಂಡ ನೀರು ಮತ್ತು ಹಸಿ ಹಾಲನ್ನು ಸೇವಿಸುವುದು ಆರೋಗ್ಯಕ್ಕೆ ಮಾರಕ.
ಇಲಿ ಹೆಗ್ಗಣಗಳಿಂದ ಮಲಿನಗೊಂಡ ಎಲ್ಲಾ ದ್ರವ್ಯ ಮತ್ತು ಘನ ಆಹಾರಗಳನ್ನು ವಿಸರ್ಜಿಸಬೇಕು ತಪ್ಪಿಯೂ ಸೇವಿಸಬಾರದು ಹಾಗೆ ಸೇವಿಸಿದಲ್ಲಿ ರೋಗ ಕಟ್ಟಿಟ್ಟ ಬುತ್ತಿ.
ಇಲಿ, ಹೆಗ್ಗಣ, ಬೆಕ್ಕು, ನಾಯಿ ಮುಂತಾದ ಪ್ರಾಣಿಗಳ ಸ್ಪರ್ಶದ ಬಳಿಕ ಸರಿಯಾದ ಕೀಟನಾಶಕ ದ್ರಾವಣ ಬಳಸಿಕ್ಕೆ ಸ್ಪಚ್ಛಗೊಳಿಸಬೇಕು. ಸಾಮಾನ್ಯವಾಗಿ ಸಾಕು ಪ್ರಾಣಿಗಳಿಂದ ಹೆಚ್ಚಿನ ಬ್ಯಾಕ್ಟೀರಿಯಾ ನಮ್ಮ ದೇಹಕ್ಕೆ ಪ್ರವೇಶ ಪಡೆಯುತ್ತದೆ. ನಾಯಿ, ಬೆಕ್ಕುಗಳಿಗೂ ಲಸಿಕೆ ಹಾಕಿಸುವುದನ್ನು ಕಡ್ಡಾಯವಾಗಿ ಪಾಲಿಸಬೇಕು.
ಇಲಿ, ಹೆಗ್ಗಣಗಳಿಂದ ಕಲುಷಿತಗೊಂಡ ನೀರಿನ ಟ್ಯಾಂಕ್‍ಗಳಲ್ಲಿ ಅಥವಾ ಕೆರೆಗಳಲ್ಲಿ ಸ್ನಾನ ಮಾಡುವುದನ್ನು ನಿಲ್ಲಿಸಬೇಕು.
ಹಳ್ಳಿ, ಗದ್ದೆಗಳಲ್ಲಿ ಕೆಲಸಮಾಡುವ ಜನರು ದೇಹದ ಮೇಲಿನ ಗಾಯಗಳನ್ನು ಸಂಪೂರ್ಣವಾಗಿ ಮುಚ್ಚಿಕೊಂಡು (ನೀರು ಕೂಡ ಪ್ರವೇಶಿಸದಂತೆ) ಕೆಲಸಮಾಡಬೇಕು. ಇಲ್ಲವಾದಲ್ಲಿ ಗಾಯ ಒಣಗಿದ ಬಳಿಕ ಕೆಲಸ ಮಾಡಬೇಕು.

ಯಾವುದೇ ಪ್ರಾಣಿಗಳ ಕಡಿತವಾಗಿದಲ್ಲಿ (ನಾಯಿ, ಬೆಕ್ಕು, ಇಲಿ, ಹೆಗ್ಗಣ) ನಿರ್ಲಕ್ಷ ಮಾಡಲೇ ಬಾರದು. ಸ್ವಯಂ ಮದ್ದುಗಾರಿಕೆ ಜೀವಕ್ಕೆ ತುತ್ತಾಗಬಹುದು. ತಕ್ಷಣವೇ ವೈದ್ಯರನ್ನು ಕಂಡು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಅತೀ ಅಗತ್ಯ.

ಚಿಕಿತ್ಸೆ

ಇಲಿಜ್ವರದ ಚಿಕಿತ್ಸೆ ಅತೀ ಸರಳ ಮತ್ತು ಸುಲಭ. ಪೆನಿಸಿಲಿನ್ ಈಗಲೂ ಪರಿಣಾಮಕಾರಿ ಔಷಧಿ. ಆದರೆ ರೋಗವನ್ನು ಪತ್ತೆಹಚ್ಚವುದು ಬಹಳ ಕಷ್ಟ. ಸೂಕ್ತ ತಜ್ಞ್ಬಾ ಪೈದ್ಯರ ಸಲಹೆ ಮತ್ತು ಮಾರ್ಗದರ್ಶನ ಅತೀ ಅಗತ್ಯ. ಪ್ರಾಥಮಿಕ ಹಂತದಲ್ಲಿ ಗುರುತಿಸಿದಲ್ಲಿ ಚಿಕಿತ್ಸೆ ಪರಿಣಾಮ ಕಾರಿಯಾಗಬಹುದು. ತೀವ್ರತರದ ಹಂತಕ್ಕೆ ತಲುಪಿದ ಬಳಿಕ, ಜೀವಕ್ಕೆ ಸಂಚಕಾರ ಬರುವ ಸಾಧ್ಯತೆ ಇದೆ.