Home Information ಟಿವಿ ಟೆಕ್ನೀಶಿಯನ್, ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ಹಾಗೂ ಗೃಹೋಪಯೋಗಿ ವಿದ್ಯುತ್ ಉಪಕರಣಗಳ ದುರಸ್ತಿ ತರಬೇತಿಗಳಿಗಾಗಿ...

ಟಿವಿ ಟೆಕ್ನೀಶಿಯನ್, ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ಹಾಗೂ ಗೃಹೋಪಯೋಗಿ ವಿದ್ಯುತ್ ಉಪಕರಣಗಳ ದುರಸ್ತಿ ತರಬೇತಿಗಳಿಗಾಗಿ ಅರ್ಜಿ ಆಹ್ವಾನ

SHARE

ಕಾರವಾರ: ಕೆನರಾ ಬ್ಯಾಂಕ್ ಆರ್‍ಸೆಟ್ ಸಂಸ್ಥೆ(ರಿ) ಹಳಿಯಾಳ ಇವರು ಅಕ್ಟೋಬರ ತಿಂಗಳಲ್ಲಿ ಜರುಗಲಿರುವ ಟಿವಿ ಟೆಕ್ನೀಶಿಯನ್, ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ಹಾಗೂ ಗೃಹೋಪಯೋಗಿ ವಿದ್ಯುತ್ ಉಪಕರಣಗಳ ದುರಸ್ತಿ ತರಬೇತಿಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದಾರೆ.

ತರಬೇತಿಯಲ್ಲಿ ಪ್ರಾಯೋಗಿಕ ಕೌಶಲ್ಯಗಳ ಜೋತೆಗೆ ವ್ಯವಹಾರಿಕ ತಂತ್ರಗಳ ಬಗ್ಗೆಯೂ ಸಹ ತರಬೇತಿ ನೀಡಲಾಗುವುದು. ತರಬೇತಿಗಳು ಊಟ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು 18 ರಿಂದ 45 ವರ್ಷದೊಳಗಿನ ಅರ್ಹ ನಿರುದ್ಯೋಗಿ ಯುವಜನತೆ ತರಬೇತಿಯಲ್ಲಿ ಭಾಗವಹಿಸಬಹುದಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆ(ರಿ), ಉದ್ಯೋಗ ವಿದ್ಯಾ ನಗರ, ದಾಂಡೇಲಿ ರಸ್ತೆ, ಹಳಿಯಾಳ, ದೂರವಾಣಿ ಸಂಖ್ಯೆ 08284-220807, ಮೊ.ನಂ 94834885489, 9482188780 ಸಂಪರ್ಕಿಸಬಹುದು ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.