Home Information ಹೊನ್ನಾವರ ತಾಲ್ಲೂಕಿನಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಭೂಮಿ ನೀಡಬಯಸುವವರಿಗಾಗಿ ಅರ್ಜಿ ಆಹ್ವಾನ

ಹೊನ್ನಾವರ ತಾಲ್ಲೂಕಿನಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಭೂಮಿ ನೀಡಬಯಸುವವರಿಗಾಗಿ ಅರ್ಜಿ ಆಹ್ವಾನ

SHARE

ಕಾರವಾರ: ಹೊನ್ನಾವರ ತಾಲ್ಲೂಕಿನಲ್ಲಿ ಕೈಗಾರಿಕಾ ವಸಾಹತು/ಪ್ರದೇಶ ಸ್ಥಾಪನೆಗೆ ಅನುಕೂಲವಾಗುವಂತೆ ಭೂಮಿಯನ್ನು ಸ್ವ ಇಚ್ಛೆಯಿಂದ ನೀಡಲು ಇಚ್ಛಿಸುವ ಭೂ ಮಾಲೀಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲವಾಗುವಂತೆ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಅವಶ್ಯವಿರುವ 20 ರಿಂದ 50 ಏಕರೆ ಭೂಮಿಯನ್ನು ನೀಡಲು ಇಚ್ಛಿಸುವ ಭೂ ಮಾಲೀಕರು ಲಭ್ಯವಿರುವ ಭೂಮಿಯ ದಾಖಲೆಗಳೊಂದಿಗೆ ಅರ್ಜಿಯನ್ನು ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಶಿರವಾಡ, ಕಾರವಾರ ರವರಿಗೆ ಸಲ್ಲಿಸಲು ಕೋರಲಾಗಿದೆ.
ಒಂದಕ್ಕಿಂತ ಹೆಚ್ಚಿನ ಭೂ ಮಾಲೀಕರು ಒಗ್ಗೂಡಿ ಸಹ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಉಪ ನಿರ್ದೇಶಕರು ಜಿಲ್ಲಾ

ಕೈಗಾರಿಕಾ ಕೇಂದ್ರ, ಮೊಬೈಲ್ ಸಂಖ್ಯೆ 9481372678 ಸಂಪರ್ಕಿಸಬಹುದಾಗಿದೆ.