Home Special ಹೇಗಿದೆ ನಿಮ್ಮ ಇಂದಿನ ರಾಶಿ ಭವಿಷ್ಯ! ಯಾವ ರಾಶಿಯವರಿಗೆ ಒಳಿತು? ಯಾರಿಗೆ ಕೆಡುಕು? ಇಲ್ಲಿದೆ ನೋಡಿ

ಹೇಗಿದೆ ನಿಮ್ಮ ಇಂದಿನ ರಾಶಿ ಭವಿಷ್ಯ! ಯಾವ ರಾಶಿಯವರಿಗೆ ಒಳಿತು? ಯಾರಿಗೆ ಕೆಡುಕು? ಇಲ್ಲಿದೆ ನೋಡಿ

SHARE

ಇಂದಿನ ದಿನಾಂಕ 19/09/2018- ಬುಧವಾರದ ರಾಶಿ ಭವಿಷ್ಯ ಇಲ್ಲಿದೆ…

ಮೇಷ:–
ಮಾಡುವ ಕೆಲಸ ಕಾರ್ಯವು ಮಂದಗತಿಯಲ್ಲಿ ಸಾಗುವವು. ನೀವು ಅಲಸ್ಯವನ್ನು ತೊರೆದು ಕಾರ್ಯಪ್ರವೃತ್ತರಾದಲ್ಲಿ ಒಳಿತಾಗುವುದು. ಕುಟುಂಬದಲ್ಲಿನ ಸೌಹಾರ್ದತೆಯನ್ನು ಉಳಿಸಿಕೊಳ್ಳಿ. ಆಂಜನೇಯ ಸ್ತೋತ್ರ ಪಠಿಸಿ. ಮಾಡುವ ಕೆಲಸ ಕಾರ್ಯವು ಮಂದಗತಿಯಲ್ಲಿ ಸಾಗುವವು. ನೀವು ಅಲಸ್ಯವನ್ನು ತೊರೆದು ಕಾರ್ಯಪ್ರವೃತ್ತರಾದಲ್ಲಿ ಒಳಿತಾಗುವುದು. ಕುಟುಂಬದಲ್ಲಿನ ಸೌಹಾರ್ದತೆಯನ್ನು ಉಳಿಸಿಕೊಳ್ಳಿ. ಆಂಜನೇಯ ಸ್ತೋತ್ರ ಪಠಿಸಿ.
ಅದೃಷ್ಟ ಸಂಖ್ಯೆ-8

ವೃಷಭ:-
ಹೊಸ ಉದ್ಯೋಗಗಳನ್ನು ಹುಡುಕುವವರಿಗೆ ಹೇರಳ ಅವಕಾಶಗಳು ದೊರೆಯಲಿವೆ. ದೈವಕೃಪೆಯಿಂದ ಶುಭಫಲ ಉಂಟಾಗುವುದು. ಸ್ನೇಹಿತರು ಸಹಾಯಕೋರಿ ಬರಲಿದ್ದು, ಸಾಧ್ಯವಾದಷ್ಟು ಮಟ್ಟಿಗೆ ನೆರವು ನೀಡಿ. ಹಣಕಾಸಿನ ಸ್ಥಿತಿಯು ಉತ್ತಮಗೊಳ್ಳುವುದು.
ಅದೃಷ್ಟ ಸಂಖ್ಯೆ-7

ಮಿಥುನ:–
ವೈವಾಹಿಕ ಜೀವನ ಅಪೇಕ್ಷೆಯುಳ್ಳವರಿಗೆ ಖಂಡಿತವಾಗಿಯೂ ಆತುರ ಸಲ್ಲದು. ಕಾದಷ್ಟು ಕಣಕರುಚಿ ಎನ್ನುವಂತೆ ಇನ್ನು ಸ್ವಲ್ಪದಿನ ಕಾಯುವುದರಿಂದ ಉತ್ತಮ ಜೀವನ ಸಂಗಾತಿಯು ದೊರೆಯುವರು.
ಅದೃಷ್ಟ ಸಂಖ್ಯೆ-9

ಕಟಕ :-
ಸಾಮಾಜಿಕ ಜೀವನದ ಹಿನ್ನೆಲೆಯಲ್ಲಿ ನಿಮಗೆ ಹೆಚ್ಚಿನದಾದ ಹೆಸರು ಗಳಿಸುವ ಅವಕಾಶವಿದೆ. ನಿಮ್ಮ ಬರವಣಿಗೆಗಳು ಹೆಚ್ಚು ಜನರನ್ನು ಆಕರ್ಷಿಸುತ್ತದೆ. ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಅನುಕೂಲ ಕಂಡು ಬರುವುದು.
ಅದೃಷ್ಟ ಸಂಖ್ಯೆ-1

ಸಿಂಹ:–
ಕುಟುಂಬದಲ್ಲಿ ಗೊಂದಲಗಳು ಕಡಿಮೆಯಾಗಲಿದ್ದು, ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡಲಿದೆ. ಆರೋಗ್ಯದಲ್ಲಿ ತುಸು ಏರು-ಪೇರಾಗುವುದು. ಈ ಬಗ್ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ಅದೃಷ್ಟ ಸಂಖ್ಯೆ-5

ಕನ್ಯಾ :-
ಮನೆಯಲ್ಲಿ ಮಕ್ಕಳ ವಿಚಾರದಲ್ಲಿ ಉದಾಸೀನ ಮಾಡುವುದರಿಂದ ಕುಟುಂಬಕ್ಕೆ ಕಳಂಕ ಬರುವ ಸಾಧ್ಯತೆ ಇದ್ದು, ಮಕ್ಕಳನ್ನು ಕರೆದು ಈ ಬಗ್ಗೆ ಬುದ್ಧಿವಾದವನ್ನು ಹೇಳುವುದು ಒಳ್ಳೆಯದು. ಮನಸ್ಸಿಗೆ ಒಗ್ಗದ ಜವಾಬ್ದಾರಿಗಳನ್ನು ಹೊರಬೇಡಿ.
ಅದೃಷ್ಟ ಸಂಖ್ಯೆ-4

ತುಲಾ:–
ಬಂಧುಮಿತ್ರರು ಸಹಾಯಕೋರಿ ಬರಲಿದ್ದು, ಅವರಿಗೆ ಸಾಧ್ಯವಾದಷ್ಟು ಮಟ್ಟಿಗೆ ನೆರವು ನೀಡಿ. ನಿರುದ್ಯೋಗಿ ಮಗನಿಗೆ ಸಾಧಾರಣ ವೇತನದ ನೌಕರಿಯು ದೊರೆಯುವ ಸಾಧ್ಯತೆ ಇರುತ್ತದೆ. ಮಿತಿಮೀರುತ್ತಿರುವ ಖರ್ಚುಗಳಿಗೆ ಕಡಿವಾಣ ಹಾಕಿ.
ಅದೃಷ್ಟ ಸಂಖ್ಯೆ-9

ವೃಶ್ಚಿಕ :-
ಸ್ವತಂತ್ರವಾಗಿ ಬಂಡವಾಳ ಹೂಡಿ ವ್ಯವಹಾರ ಆರಂಭಿಸಲು ಸರಿಯಾದ ಕಾಲವಲ್ಲ. ಮತ್ತೊಬ್ಬರ ಪಾಲುದಾರಿಕೆಯೊಂದಿಗೆ ಆರಂಭಿಸುವುದು ಉತ್ತಮ. ಎಲ್ಲರ ಸಲಹೆಗಳನ್ನು ಸ್ವೀಕರಿಸಿ ಆದರೆ ನಿಮ್ಮ ಯೋಜನೆಯಂತೆ ಕಾರ್ಯರೂಪಕ್ಕೆ ತನ್ನಿ.
ಅದೃಷ್ಟ ಸಂಖ್ಯೆ-2

ಧನಸ್ಸು:–
ಸಮಯ ಪ್ರಜ್ಞೆಯಿಂದ ವ್ಯವಹಾರಗಳನ್ನು ನಡೆಸಿ. ಸ್ನೇಹಿತರೊಂದಿಗೆ ಮೋಜನ್ನು ಅನುಭವಿಸುವಿರಿ. ನಿಮ್ಮ ಕೆಲಸಕಾರ್ಯಗಳಲ್ಲಿ ಮಕ್ಕಳ ಸಹಾಯ ಸಹಕಾರ ಇರುವುದರಿಂದ ಅಧಿಕ ಒತ್ತಡದಿಂದ ಪಾರಾಗುವಿರಿ. ಸಮಯ ಪ್ರಜ್ಞೆಯಿಂದ ವ್ಯವಹಾರಗಳನ್ನು ನಡೆಸಿ. ಸ್ನೇಹಿತರೊಂದಿಗೆ ಮೋಜನ್ನು ಅನುಭವಿಸುವಿರಿ. ನಿಮ್ಮ ಕೆಲಸಕಾರ್ಯಗಳಲ್ಲಿ ಮಕ್ಕಳ ಸಹಾಯ ಸಹಕಾರ ಇರುವುದರಿಂದ ಅಧಿಕ ಒತ್ತಡದಿಂದ ಪಾರಾಗುವಿರಿ.
ಅದೃಷ್ಟ ಸಂಖ್ಯೆ-6

ಮಕರ :-
ಅನುಭವಿಗಳ ಸಲಹೆಪಡೆದು ಷೇರು ಬಜಾರಿನಲ್ಲಿ ಹಣ ಹೂಡುವುದು ಒಳ್ಳೆಯದು. ಸಮಾಜವು ನಿಮ್ಮ ಸೇವೆಯನ್ನು ಗುರುತಿಸಿ ಗೌರವ ನೀಡಲಿದೆ. ಸರ್ಕಾರಿ ನೌಕರರು ಮೇಲಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳುವರು.
ಅದೃಷ್ಟ ಸಂಖ್ಯೆ-0

ಕುಂಭ:-
ಆದಾಯಕ್ಕಾಗಿ ಹೊಸ ಹೊಸ ದಾರಿ ಕಂಡಂತೆ ಖರ್ಚಿಗೂ ಕೂಡಾ ಹೊಸ ದಾರಿ ಕಾಣಲಿವೆ. ಖರ್ಚಿನ ಬಾಬ್ತಿಗೆ ಕಡಿವಾಣ ಹಾಕದಿದ್ದಲ್ಲಿ ಕೂಡಿಟ್ಟ ಗಂಟು ಕೂಡಾ ಕರಗುವ ಸಾಧ್ಯತೆ ಇದೆ. ಸೋಮಾರಿತನ ಹಾನಿ ಮಾಡುವುದು.
ಅದೃಷ್ಟ ಸಂಖ್ಯೆ-3

ಮೀನ:-
ನಿಮ್ಮ ಅನೇಕ ಸಮಸ್ಯೆಗಳಿಂದ ಗೊಂದಲದ ಗೂಡಾಗಿದ್ದ ಕುಟುಂಬದಲ್ಲಿ ನೆಮ್ಮದಿ ಕಾಣಲು ಆರಂಭವಾಗಿದೆ. ಆರ್ಥಿಕ ಸಮಸ್ಯೆಗಳು ವರಮಿನದಿಂದ ಸುಧಾರಿಸಲಿವೆ. ಮಾವನ ಮನೆಯಿಂದ ಬರಲಿರುವ ಎಲ್ಲಾ ರೀತಿಯ ಸಹಾಯಗಳನ್ನು ಸ್ವೀಕರಿಸಿ.
ಅದೃಷ್ಟ ಸಂಖ್ಯೆ-1