Home Local ದೀವಗಿಯಲ್ಲಿ ಪಲ್ಟಿಯಾಯ್ತು ಪ್ಯಾಸೆಂಜರ್ ಟ್ಯಾಂಪೋ: ಕೆಲ ಕ್ಷಣ ಕಂಗಾಲಾದರು ಜನರು!

ದೀವಗಿಯಲ್ಲಿ ಪಲ್ಟಿಯಾಯ್ತು ಪ್ಯಾಸೆಂಜರ್ ಟ್ಯಾಂಪೋ: ಕೆಲ ಕ್ಷಣ ಕಂಗಾಲಾದರು ಜನರು!

SHARE

ಕುಮಟಾ : ಕುಮಟಾ- ಮಿರ್ಜಾನ್ ಮಾರ್ಗಮದ್ಯೆ ಸಾಗುತ್ತಿದ್ದ ಪ್ಯಾಸೆಂಜರ್ ಟ್ಯಾಂಪೋ ದೀವಗಿಯಲ್ಲಿ ಮಗುಚಿ ಬಿದ್ದ ಬಿದ್ದ ಪರಿಣಾಮ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು .

ಮೊನ್ನೆ ಮೊನ್ನೆ ತಾನೇ ಕರ್ಕಿಯಲ್ಲಿ ಸಂಭವಿಸಿದ ಭೀಕರ ಅಪಘಾತದ ನೆನಪು ಮಾಸುವ ಮುನ್ನವೇ ಈ ರೀತಿ ಟ್ಯಾಂಪೋ ಅಪಘಾತ ಸಂಭವಿಸಿರುವುದು ಜನತೆಯಲ್ಲಿ ಭಯದ ವಾತಾವರಣವನ್ನು ಹುಟ್ಟು ಹಾಕಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಈ ಘಟನೆ ಕ್ಷಣಕಾಲ ಎಲ್ಲರನ್ನೂ ಗೊಂದಲಕ್ಕೆ ಈಡು ಮಾಡಿದ್ದಂತೂ ಸುಳ್ಳಲ್ಲ .ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ .

ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದ ಕೆಲವರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ . ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ಸಂಭವಿಸಿದ್ದರಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು .

ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರ ಸಹಾಯದಿಂದ ತೆರವು ಕಾರ್ಯಾಚರಣೆ ನಡೆದಿದೆ ಎನ್ನಲಾಗಿದೆ.