Home Article ಪರಮಾತ್ಮನೇ ಶಕ್ತಿಯ ಮೂಲಾಧಾರ (ಸದ್ಗುರು ಶ್ರೀಧರ ಸಂದೇಶ)

ಪರಮಾತ್ಮನೇ ಶಕ್ತಿಯ ಮೂಲಾಧಾರ (ಸದ್ಗುರು ಶ್ರೀಧರ ಸಂದೇಶ)

SHARE

(ಪ್ರಭಾ ಭಟ್ಟ, ಪುಣೆ – ‘ಶ್ರೀಧರಾಮೃತ ವಚನಮಾಲೆ’ಯಿಂದ)

ಈ ಜಗತ್ತನ್ನು ಸೃಷ್ಟಿಸಲಿಕ್ಕೆ ಶಕ್ತಿಯು ಬೇಕಷ್ಟೇ? ಶಕ್ತಿಯಿಲ್ಲದೇ ಯಾವ ಕಾರ್ಯವೂ ಆಗದು. ಮೊದಲು ಶಕ್ತಿ; ಬಳಿಕ ಕಾರ್ಯ.

ನೀವು ಕೇಳುವದೂ ನಾನು ಹೇಳುವದೂ ಕೂಡ ಶಕ್ತಿಯ ಕಾರ್ಯವೇ. ‘ಯೋಂತಃ ಪ್ರವಿಶ್ಯ ಮಮ ವಾಚಮಿಮಾಂ ಪ್ರಸುಪ್ತಾಮ್| ಸಂಜೀವತ್ಯಖಿಲ ಶಕ್ತಿಧರಃ
ಎಂದರೆ ಆ ಪರಮಾತ್ಮನೇ ನನ್ನ ಅಂತರಂಗದಲ್ಲಿದ್ದು ನನ್ನ ವಾಚಾಶಕ್ತಿಯನ್ನು ಪ್ರೇರಿಸಿದಾಗ ನಾನು ಮಾತನಾಡುತ್ತೇನೆ.

ಅಂತೂ ಈ ಜಗತ್ತಿನ ಸಕಲ ವ್ಯಾಪಾರಗಳಿಗೂ ಆ ಪರಮಾತ್ಮ ಶಕ್ತಿಯೇ ಮೂಲಾಧಾರ!
ಯಾವ ಪರಮಾತ್ಮನ ಸಂಕಲ್ಪಶಕ್ತಿಯಿಂದ ಅಖಿಲ ಜಗತ್ತು ಉಂಟಾಗಿರುವದೋ ಆ ಪರಮಾತ್ಮನು ಸರ್ವಶಕ್ತ. ಈ ಜಗತ್ತು ಆತನ ಶಕ್ತಿಯ ಕಾರ್ಯ.

‘ಶಕ್ತಿಃ ಶಕ್ತಿಮತೋರಭೇದಃ’ ಶಕ್ತಿಯು ಶಕ್ತನನ್ನು ಬಿಟ್ಟಿರುವದಿಲ್ಲ. ಅವರವರಲ್ಲಿ ಭೇದವಿಲ್ಲ.
‘ಅಸದ್ವಾ ಇದಮಗ್ರ ಆಸೀತ್ ತದಾತ್ಮಾನಂ ಸ್ವಯಮಕುರುತ’ ಈಗ ನಮಗೆ ಕಾಣಿಸುವ ಎಲ್ಲಾ ಜಗತ್ತು ಮೊದಲು ಅದೃಶ್ಯರೂಪವಾಗಿತ್ತು. ಆಮೇಲೆ ಪರಮಾತ್ಮನ ಸಂಕಲ್ಪ ಶಕ್ತಿಯಿಂದ ವ್ಯಕ್ತಸ್ವರೂಪಕ್ಕೆ ಬಂದಿತು. ವ್ಯಕ್ತತೆಯೇ ಜನ್ಮ.
‘ಅವ್ಯಕ್ತಾದೀನಿ ಭೂತಾನಿ ವ್ಯಕ್ತಮಧ್ಯಾನಿ ಭಾರತ ಅವ್ಯಕ್ತ ನಿಧನಾನ್ಯೇವ’
ವ್ಯಕ್ತವಾಗಿ ತೋರುವ ಕಾರ್ಯಕ್ಕೆ ಅವ್ಯಕ್ತ ಕಾರಣವೊಂದು ಇರಲೇಬೇಕು.

ಭಗವಂತನ ಸಂಕಲ್ಪದಿಂದ ಸೃಷ್ಟಿಯು ವ್ಯಕ್ತರೂಪವನ್ನು ತಾಳಿ ಕೊನೆಗೆ ಅದೇ ಪರಮಾತ್ಮನಲ್ಲಿ ಸೇರಿ ಐಕ್ಯತೆ ಹೊಂದಿ ಅದೃಶ್ಯವಾಗಿಬಿಡುವದು.

ವಿಶೇಷ ಟಿಪ್ಪಣಿ : ಬ್ರಹ್ಮಾಂಡದ ಸೃಷ್ಟಿಯ ಬಗ್ಗೆ ವಿಜ್ಞಾನದ ದೃಷಿ್ಟಕೋನ ಮತು್ತ ಇತಿ-ಮಿತಿ
ಆಧುನಿಕ ಭೌತಶಾಸ್ತ್ರದ ಇತ್ತಿಚಿನ ಸಂಶೋಧನೆಗಳು ವಿಜ್ಞಾನದ ಇತಿ-ಮಿತಿಯನ್ನು ತೋರಿಸುತ್ತಿದೆ. ಉದಾಹರಣೆಗಾಗಿ ಕೆಲವನ್ನು ಸಂಕ್ಷಿಪ್ತವಾಗಿ ಸರಳೀಕರಿಸಿ ಬರೆದಿದ್ದೇನೆ.

೧. ಈ ಬ್ರಹ್ಮಾಂಡದ ಪ್ರತಿಶತ ೯೫ ಭಾಗ ವಿಜ್ಞಾನಕ್ಕೆ ಅಜ್ಞಾತವಾದ ಶಕ್ತಿ ಮತ್ತು ಪದಾರ್ಥಗಳಿಂದ ತುಂಬಿದೆ.
ಆದರೆ ಅದಿಲ್ಲದೆ ಈ ಬ್ರಹ್ಮಾಂಡದ ಸೃಷ್ಟಿ-ಸ್ಥಿತಿಗಳನ್ನು ವಿಜ್ಞಾನ ವಿವರಿಸಲಾರದು.

೨. ಶೂನ್ಯಾತಿಶೂನ್ಯ ಆಕಾಶದಲ್ಲಿಯೂ ನಿಮ್ನಾಣು ಕಣ-ಪ್ರತಿಕಣಗಳ ಸೃಷ್ಟಿ-ಲಯ ಕ್ರಿಯೆ ಅನವರತ ಸಾಗುತ್ತಿದೆ. ಅದೇಕೆ-ಅದೆಂತು ಎನ್ನುವದು ಇನ್ನೂ ಬಗೆಹರಿದಿಲ್ಲ.

೩. ಸೃಷ್ಟಿ ನಿರ್ಮಾಣದ ಎಲ್ಲ ನಿಮ್ನಾಣು-ಕಣಗಳು ಒಂದೇ ಅದೃಶ್ಯ ಶಕ್ತಿಯ ಹಲವು ಸೂಕ್ಷ್ಮ ರೂಪಾಂತರವಿರುವ ಶಕ್ಯತೆಯನ್ನು ವಿಜ್ಞಾನಿಗಳು ಅಭ್ಯಯಿಸುತ್ತಿದ್ದಾರೆ.

೪. ವಿಶ್ವೊತ್ಪತ್ತಿಯ ಮೊದಲು ಶಬ್ದ ತರಂಗ ಎಲ್ಲೆಲ್ಲಿಯೂ ತಂಬಿಕೊಂಡಿತ್ತು. ಈ ಶಬ್ದ ತರಂಗದಿಂದಾದ ವಿನ್ಯಾಸವೇ ವಿಶ್ವರಚನೆಗೆ ಕಾರಣ ಎಂದು ದಿಗಂತದಾಚೆಯ ಸೂಕ್ಷ್ಮ ತರಂಗಗಳನ್ನು ಅಭ್ಯಯಿಸುವ ವಿಜ್ಞಾನಿಗಳ ಒಂದು ಅಭಿಪ್ರಾಯ. ಆದರೆ ಈ ತರಂಗದ ಹುಟ್ಟಿನ ರಹಸ್ಯ ನಮ್ಮ ಅರಿವಿನಿಂದ ಹೊರಗಿದೆ ಎನ್ನುತ್ತದೆ ವಿಜ್ಞಾನ.

೫. ಗುರುತ್ವಾಕರ್ಷಣ ಮತ್ತು ಒಂದು ಅಜ್ಞಾತ ವಿಕರ್ಷಣ ಶಕ್ತಿಯಿಂದ ಈ ಬ್ರಹ್ಮಾಂಡ ಈ ರೀತಿ ಸ್ಥಿರವಾಗಿದೆ ಎನ್ನುತ್ತದೆ ವಿಜ್ಞಾನ. ಆದರೆ ಈ ಶಕ್ತಿಗಳ ಮೂಲ ಇನ್ನೂ ಅರ್ಥವಾಗಿಲ್ಲ.