Home Important ಕೆನರಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯಲ್ಲ ಎಂದ್ರು ಚಕ್ರವರ್ತಿ ಸೂಲಿಬೆಲೆ! ಅವರು ಹೇಳಿದ್ದೇನು ಗೊತ್ತಾ?

ಕೆನರಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯಲ್ಲ ಎಂದ್ರು ಚಕ್ರವರ್ತಿ ಸೂಲಿಬೆಲೆ! ಅವರು ಹೇಳಿದ್ದೇನು ಗೊತ್ತಾ?

SHARE

ಕಾರವಾರ:ಕೆನರಾ ಲೋಕಸಭಾ ಕ್ಷೇತ್ರದಿಂದ ಚಕ್ರವರ್ತಿ ಸೂಲಿಬೆಲೆಯವರು ಸ್ಪರ್ಧಿಸುತ್ತಾರೆ ಎಂಬ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದ ಮುಖಾಂತರ ಚಕ್ರವರ್ತಿ ಸೂಲಿಬೆಲೆಯವರು ಈ ವಿಷಯವನ್ನು ತಳ್ಳಿ ಹಾಕಿದ್ದಾರೆ .

ಕೆನರಾ ಲೋಕಸಭಾ ಕ್ಷೇತ್ರ ಎಂದಷ್ಟೇ ಅಲ್ಲ ನಾನು ಯಾವುದೇ ಕ್ಷೇತ್ರದಿಂದಲೂ ಟಿಕೆಟ್ ಬಯಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ .

ಕೆನರಾ ಕ್ಷೇತ್ರಕ್ಕೆ ಬಿಜೆಪಿಯಿಂದ ನಾನೊಬ್ಬ ಪ್ರಬಲ ಆಕಾಂಕ್ಷಿ ಎಂದು ಬಿಜೆಪಿ ಆರ್ಥಿಕ ಪ್ರಕೋಷ್ಠದ ಸಂಚಾಲಕ ಬಸವರಾಜ್ ಹೊಸಮಠ ಹೇಳಿಕೆ ನೀಡಿದ ವಿಷಯವನ್ನು ಕೋಟ್ ಮಾಡಿದ ಚಕ್ರವರ್ತಿ ಮಿಥುನ್ ನಾನು ನನ್ನ ತಂಡದೊಂದಿಗೆ ಇದ್ದು ಅವರ ಜೊತೆಗೆ ಇರಲು ಬಯಸುತ್ತೇನೆ ಎಂದು ಹೇಳಿದ್ದಾರೆ .

ಇದರಿಂದಾಗಿ ಈವರೆಗೆ ಹರಿದಾಡುತ್ತಿದ್ದ ಗೊಂದಲಗಳು ಹಾಗೂ ಇನ್ನೆಲ್ಲ ವಿಚಾರಗಳು ಸ್ಪಷ್ಟ ಗೊಂಡಂತಾಗಿದೆ.

ಚಕ್ರವರ್ತಿ ಸೂಲಿಬೆಲೆಯವರು ಹೇಳಿದ್ದೇನು?

ಚರ್ಚೆಗೆ ಇಲ್ಲಿದೆ ಪೂರ್ಣವಿರಾಮ. ನಾನು ಯಾವುದೇ ಕ್ಷೇತ್ರದಿಂದ ಟಿಕೆಟ್ ಅನ್ನು ಕೇಳುವುದೂ ಇಲ್ಲ, ಪಡೆಯುವುದೂ ಇಲ್ಲ. ನಾನು ನನ್ನ ನಿರ್ಧಾರದಲ್ಲಿ ದೃಢವಾಗಿದ್ದೇನೆ. ನನ್ನ ಯುವಾಬ್ರಿಗೇಡ್ ಹುಡುಗರೊಂದಿಗಿರಲು ನಾನು ಸದಾ ಇಷ್ಟ ಪಡುತ್ತೇನೆ. ಕೆಲವು ಬಾರಿ ಜನ ತಾವೊಬ್ಬರೇ ಉಳಿಯಲು ಸುದ್ದಿಯನ್ನು ಹಬ್ಬಿಸುತ್ತಾರೆ. ಆದರೆ ಕೆನರಾದಲ್ಲಿ ಎರಡನೇ ಸಾಲಿನ ನಾಯಕರು ಹಲವರಿದ್ದಾರೆ. ಯಾರು ಬೇಕಾದರೂ ಸವಾಲೆಸೆಯಬಹುದು. ಪ್ರಸ್ತುತ ಸಂಸದರು ಮುಂದಿನ ನಾಯಕರಿಗೆ ಜಾಗ ಮಾಡಿಕೊಡುತ್ತಿರುವುದರಿಂದ ಫಿರ್ ಸೆ ಮೋದಿ ಗಾಗಿ ತಳಹಂತದಲ್ಲಿ ಕೆಲಸ ಮಾಡಲು ಇದು ಒಳ್ಳೆಯ ಸಮಯ.
ನನ್ನ ಊರಿನ ಎಲ್ಲ ಆಕಾಂಕ್ಷಿಗಳಿಗೂ ಶುಭವಾಗಲಿ.

Here is the full stop for the debate. I will neither seek nor accept any tickets from any constituency. I am firm in my decision. I love to be with my #YuvaBrigade boys always. Some times people plant the news to stay alone in the fray. But in Canara there are many second line leaders on whom any one can bet. As the present MP is willing to make a way for the next leaders it’s time that one can work on ground for #PhirseModi
Best of luck to all the wishful leaders of My mother town!!
YA:ಚಕ್ರವರ್ತಿ ಮಿಥುನ್