Home Local ಕೊಂಕಣದ ಸಿ.ವಿ.ಎಸ್.ಕೆ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಮಾದರಿ ತಯಾರಿಕೆ...

ಕೊಂಕಣದ ಸಿ.ವಿ.ಎಸ್.ಕೆ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಮಾದರಿ ತಯಾರಿಕೆ ಸ್ಪರ್ಧೆಯಲ್ಲಿ ಸಾಧನೆ.

SHARE

ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳು ದಿ. 20-09-2018 ರಂದು ಕುಮಟಾದ ಡಯೆಟ್‍ನಲ್ಲಿ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಮಾದರಿ ತಯಾರಿಕೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಶಾಲೆಯ ವಿಜ್ಞಾನ ಶಿಕ್ಷರುಗಳಾದ ರವಿಶಂಕರ ಹಾಗೂ ಭಾಸ್ಕರ ಹೆಗಡೆ ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಪ್ರಮೋದ ಎಲ್. ಹಾಗೂ ಸೂರ್ಯಕಿರಣ ಎನ್. ಇವರು ಸಾರಿಗೆ ಮತ್ತು ಸಂಪರ್ಕ ವಿಜ್ಞಾನ ವಿಷಯದಡಿ ತಯಾರಿಸಿದ ಅದ್ಭುತ ಮಾದರಿ ಎಲ್ಲರ ಮನಸೂರೆಗೊಂಡಿತಲ್ಲದೆ, ನಿರ್ಣಾಯಕರ ಪ್ರಶಂಸೆಗೂ ಪಾತ್ರವಾಯಿತು.

ಶೈಕ್ಷಣಿಕ ವಿಚಾರದ ದೂರದೃಷ್ಟಿತ್ವದಲ್ಲಿ ಸದಾ ಮುಂಚೂಣ ಯಲ್ಲಿರುವ ಕೊಂಕಣದ ಸಿ.ವಿ.ಎಸ್.ಕೆ ಗೆ ಇದು ಮತ್ತೊಂದು ಹೆಮ್ಮೆಯ ಸಾಧನೆಯ ಗರಿಯಾಗಿದ್ದು, ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಶೈಕ್ಷಣಕ ಸಲಹೆಗಾರರು, ಮುಖ್ಯಾಧ್ಯಾಪಕರು, ಶಿಕ್ಷಕರು ಅಭಿನಂದನೆಗಳನ್ನು ಸಲ್ಲಿಸಿ ಮುಂದಿನ ಹಂತದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.