Home Local ಶಿರಸಿ ಮೂಲದ ಲಕ್ಸುರಿ ಬಾಬು ಇನ್ನಿಲ್ಲ: ಬೆಂಗಳೂರಿನಲ್ಲಿ ಕೊನೆಯುಸಿರೆಳೆದ ಉದ್ಯಮಿ!

ಶಿರಸಿ ಮೂಲದ ಲಕ್ಸುರಿ ಬಾಬು ಇನ್ನಿಲ್ಲ: ಬೆಂಗಳೂರಿನಲ್ಲಿ ಕೊನೆಯುಸಿರೆಳೆದ ಉದ್ಯಮಿ!

SHARE

ಶಿರಸಿ:- ಹೋಟೆಲ್ ಉದ್ಯಮಿಯಾಗಿ ಲಕ್ಸುರಿ ಬಾಬು ಎಂದೇ ಹೆಸರು ಪಡೆದಿದ್ದ ಶಿರಸಿಯ ಅಬ್ದುಲ್ ರಹೀಮ್ ಶೇಖ್ (ಲಕ್ಸುರಿ ಬಾಬು) ಇವರು ಅನಾರೋಗ್ಯದ ಕಾರಣದಿಂದಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ ಎಂದು ವರದಿಯಾಗಿದೆ.

ಮೃತರು ಕಾಂಗ್ರೆಸ್ ಪಕ್ಷದ ಕಟ್ಟಾ ಕಾರ್ಯಕರ್ತರಾಗಿದ್ದರು. ಲಕ್ಸುರಿ ಬಾಬು ಎಂದೇ ಹೆಸರು ಪಡೆದಿದ್ದ ಇವರು ಅನಾರೋಗ್ಯದಿಂದ ಬಳಲುತ್ತಿದ್ದರು. ಹೊಟೆಲ್ ಉದ್ಯಮಿಯಾಗಿ ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ದರು.

ನಗರದ ಕೆರೆಗುಂಡಿ ರಸ್ತೆಯ ನಿವಾಸಿಯಾಗಿದ್ದ ಅವರು ಪತ್ನಿ,ಒರ್ವ ಪುತ್ರಿ,ಮೂವರು ಪುತ್ರರು ಹಾಗು ಬಂಧು ಬಳಗದವರನ್ನು ಬಿಟ್ಟು ಅಗಲಿದ್ದಾರೆ.

ಮೃತರ ಅಂತ್ಯ ಸಂಸ್ಕಾರವನ್ನು ನೂರಾರು ಬಂಧು ಬಾಂದವರ ನಡುವೆ ಶಿರಸಿಯಲ್ಲಿ ನೆರವೇರಿಸಲಾಯಿತೆಂದು ಕುಟುಂಬ ಮೂಲದವರು ತಿಳಿಸಿದ್ದಾರೆ.