Home Local ಮಕ್ಕಳ ಮೇಲೆ ಎರಗಿದ ಬೀದಿ ನಾಯಿ : ಯಲ್ಲಾಪುರದಲ್ಲಿ ನಾಯಿಗಳ ಕಾಟ : ಜನತೆಯ ಕಷ್ಟಕ್ಕೆ...

ಮಕ್ಕಳ ಮೇಲೆ ಎರಗಿದ ಬೀದಿ ನಾಯಿ : ಯಲ್ಲಾಪುರದಲ್ಲಿ ನಾಯಿಗಳ ಕಾಟ : ಜನತೆಯ ಕಷ್ಟಕ್ಕೆ ಸ್ಪಂದಿಸುತ್ತಿಲ್ಲವೇ ಅಧಿಕಾರಿಗಳು!

SHARE

ಯಲ್ಲಾಪುರ:ಇತ್ತೀಚಿಗೆ ಭಟ್ಕಳದಲ್ಲಿ ಹುಚ್ಚು ನಾಯಿಗಳ ದಾಳಿಯಿಂದ ನಾಲ್ಕೈದು ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಘಟನೆ ನಡೆದು ಇನ್ನೇನು ಕೆಲವೇ ದಿನಗಳು ಘಟಿಸಿರಬಹುದು. ಈ ಘಟನಾವಳಿಗಳು ಮಾಸುವ ಮುನ್ನವೇ ಮತ್ತೊಂದು ಇಂತಹುದೇ ಘಟನೆ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ನಡೆದಿದೆ. ಈ ಘಟನೆ ಸಂಬಂಧ ಅನೇಕ ಠೀಕೆಗಳೂ ವ್ಯಕ್ತವಾಗಿದೆ.

ಯಲ್ಲಾಪುರದ ಮಾರ್ಕೆಟ್ ನಲ್ಲಿ ಹೋಗುತ್ತಿರಬೇಕಾದರೆ ನಾಯಿಗಳು ದಾಳಿ ನಡೆಸಿವೆ. ಇದನ್ನು ಕಂಡ ವ್ಯಾಪಾರಿಗಳು ಮಕ್ಕಳಿಬ್ಬರನ್ನು ನಾಯಿಗಳಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಿದ್ದಾರೆ. ನಾಯಿ ಕಡಿತಕ್ಕೆ ಮಕ್ಕಳ ಕೈ ಹಾಗೂ ಕಾಲುಗಳಿಗೆ ಗಂಭೀರವಾದ ಗಾಯಗಳಾಗಿವೆ.

ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ೯ ವರ್ಷದ ಬಾಲಕ ಉದಯ ಮತ್ತು ಬಾಲಕಿ ರುಕ್ಸಾನಾ ಎನ್ನುವವರಿಗೆ ಬೀದಿ ನಾಯಿಗಳು ಕಚ್ಚಿ ಗಾಯಗೊಳಿಸಿದ ಘಟನೆ ವರದಿಯಾಗಿದೆ. ಆಟವಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಉತ್ತರಕನ್ನಡ ಜಿಲ್ಲಾದ್ಯಂತ ಬೀದಿನಾಯಿ ಹಾಗೂ ಹುಚ್ಚುನಾಯಿಗಳ ಕಾಟ ದಿನೆ ದಿನೆ ಹೆಚ್ಚಾಗುತ್ತಿದ್ದು ಜಿಲ್ಲಾಡಳಿತ ಇದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.