Home Local ಕುಮಟಾದ ದೀವಗಿಯಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ ಸಿಲಿಂಡರ್ ವಿತರಣೆ.

ಕುಮಟಾದ ದೀವಗಿಯಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ ಸಿಲಿಂಡರ್ ವಿತರಣೆ.

SHARE

ಕುಮಟಾ: ದಿನಾಂಕ: 23.09.2018 ರಂದು
ಭಾನುವಾರ ದೀವಿಗಿ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 52 ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ ಸಿಲಿಂಡರ್ ಹಾಗೂ ಒಲೆಗಳನ್ನು ಕುಮಟಾ ,ಹೊನ್ನಾವರ ಕ್ಷೇತ್ರದ ಶಾಸಕರಾದ ಶ್ರೀ ದಿನಕರ್ ಕೆ ಶೆಟ್ಟಿ ಇವರು ವಿತರಿಸಿದರು .

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಗಜಾನನ ಪೈ, ಭಾರತೀಯ ಜನತಾ ಪಾರ್ಟಿಯ ಮುಖಂಡರಾದ ಶ್ರೀ ವಿನೋದ್ ಪ್ರಭು, ಶ್ರೀ ಬಿ.ಡಿ. ಪಟಗಾರ್, ತಾಲ್ಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಅನಸೂಯಾ ಅಂಬಿಗ , ಸ್ಥಳೀಯರಾದ ಶ್ರೀ ಸುರೇಶ್ ಭಟ್ಟ , ಶ್ರೀಮತಿ ಮಾಲಾ ಅಂಬಿಗ, ಶ್ರೀ ಲಕ್ಷ್ಮಣ್ ಅಂಬಿಗ ಇವರು ಉಪಸ್ಥಿತರಿದ್ದರು. ಶ್ರೀ ಉಮೇಶ್ ಭಂಡಾರಿ ಅವರು ಸ್ವಾಗತಿಸಿದರು.