Home Local ಕಾರವಾರದಲ್ಲಿ ಬೈಕ್‌ ಅಪಘಾತ : ಛಿದ್ರ ಛಿದ್ರವಾದ ಸವಾರನ ತಲೆ!

ಕಾರವಾರದಲ್ಲಿ ಬೈಕ್‌ ಅಪಘಾತ : ಛಿದ್ರ ಛಿದ್ರವಾದ ಸವಾರನ ತಲೆ!

SHARE

ಕಾರವಾರ: ಬೈಕ್‌ ಅಪಘಾತದಲ್ಲಿ ಬೈಕ್ ಸವಾರ ಬಿದ್ದು ಆತನ ತಲೆ ಛಿದ್ರ ಛಿದ್ರವಾದ ಘಟನೆ ಕಾರವಾರ ತಾಲೂಕಿನ ಮುದಗಾದಲ್ಲಿ ನಡೆದಿದೆ.

ಹಟ್ಟಿಕೇರಿ ಜೇಸಿ ಸ್ಕೂಲ್’ನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾದ ತೊಡುರಿನ ಗುರುಪ್ರಸಾದ್ ನಾಯ್ಕ (32) ಮೃತ ಬೈಕ್ ಸವಾರ ಎಂದು ವರದಿಯಾಗಿದೆ.

ರಸ್ತೆ ಬದಿಯಲ್ಲಿ ಬಿದ್ದಿರುವ ಈತನ ತಲೆ ಛಿದ್ರಗೊಂಡಿದೆ. ಆದರೆ, ವಾಹನ ಡಿಕ್ಕಿಯಾಗಿಯೇ ಈತ ಮೃತಪಟ್ಟಿದ್ದಾನೆಯೇ ಅಥವಾ ಬೈಕ್ ಸ್ಕಿಡ್ ಆಗಿ ಬಿದ್ದು ಮೃತಪಟ್ಟಿದ್ದಾನೆಯೇ ಎನ್ನುವುದು ತಿಳಿದು ಬರಬೇಕಿದೆ.

ರಸ್ತೆಯ ಪಕ್ಕದಲ್ಲಿ ಬಿದ್ದಿರುವ ಈತನ ಶವ ನೋಡಿ ಜನತೆ ಭಯ ಭೀತರಾಗಿದ್ದು ಭೀಕರ ಅಪಘಾತವೇ ಸಂಭವಿಸಿರಬಹುದು ಎಂದು ಊಹಿಸಿದ್ದಾರೆ.

ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರ್ಣದ ತನಿಖೆಯ ನಂತರ ಪೂರ್ಣ ಮಾಹಿತಿ ಹೊರಬರಬೇಕಿದೆ.