Home Local ಗಣೇಶ ವಿಸರ್ಜನೆಯಲ್ಲಿ ಕನ್ನಡ ಕಲರವ: ಆದರ್ಶ ಗಣೇಶ ವಿಸರ್ಜನೆಗೆ ಸಾಕ್ಷಿಯಾಯ್ತು ಬಗ್ಗೋಣ ಶಾಲಾ ಸಾರ್ವಜನಿಕ...

ಗಣೇಶ ವಿಸರ್ಜನೆಯಲ್ಲಿ ಕನ್ನಡ ಕಲರವ: ಆದರ್ಶ ಗಣೇಶ ವಿಸರ್ಜನೆಗೆ ಸಾಕ್ಷಿಯಾಯ್ತು ಬಗ್ಗೋಣ ಶಾಲಾ ಸಾರ್ವಜನಿಕ ಗಣೇಶೋತ್ಸವ ಸಮಿತಿ!

SHARE

ನೂರರಷ್ಟು ಪರಭಾಷೆಯೇ ಹಾಡುಗಳೆ ತುಂಬಿರುತ್ತಿದ್ದ ಗಣೇಶ ವಿಸರ್ಜನಾ ಮೆರವಣೆಗೆಯು ಈ ಬಾರಿ ವಿಭಿನ್ನವಾಗಿತ್ತು. ಮೆರವಣಿಗೆಯುದ್ದಕ್ಕೂ ಕನ್ನಡದ ಕಲರವ, ಕನ್ನಡ ಬಾವುಟಗಳ ಹಾರಟ ನೀಜಕ್ಕೂ ಇದು ಕನ್ನಡಮ್ಮನಿಗೆ ಸಂದ ಗೌರವವೆ ಸರಿ..

ಕುಮಟಾ ತಾಲೂಕಿನ ಬಗ್ಗೋಣ ಶಾಲಾ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪಿಸಿದ ಗಣೇಶ ವಿಸರ್ಜನೆಯ ವೇಳೆ ಕನ್ನಡಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಿರುವುದು ವಿಶೇಷವಾಗಿತ್ತು.

ಈ ಮಹತ್ತರ ಬದಲಾವಣೆ ಕಾರಣ ಕರುನಾಡ ಸೇವಕರು ತಂಡದ ಸದಸ್ಯರು.ರೂಪೇಶ್ ರಾಜಣ್ಣ ಅವರಿಂದ ಪ್ರೇರಣೆ ಹೊಂದಿದ ಯುವಕರ ಗುಂಪೊಂದು ಕನ್ನಡ ತಾಯಿಯ ಸೇವೆಗೆ ಪಣತೊಟ್ಟು ನಿಂತಿದೆ. ತಮ್ಮ ಮೊದಲ ಪ್ರಯತ್ನ ಎಂಬಂತೆ ತಮ್ಮೂರಿನ ಗಣೇಶ ವಿಸರ್ಜನೆಯ ವೇಳೆ ಎಲ್ಲೆಡೆ ಕನ್ನಡಮಯವಾಗಿಸಿದ್ದಾರೆ.

ಕರುನಾಡ ಸೇವಕರು ಹೆಸರಲ್ಲಿ ಶ್ರೀ ಗಣೇಶನ ಮುಡಿಗಂಧ ಪ್ರಸಾದದ ಸವಾಲನ್ನು ಸ್ವಿಕರಿಸಿದ ಯುವಕರ ತಂಡ ಮೆರವಣಿಗೆಯುದ್ದಕ್ಕೂ ಕನ್ನಡದ ಬಾವುಟಗಳನ್ನು ಹಿಡಿದು ಕನ್ನಡ ಹಾಡುಗಳಿಗೆ ಹೆಜ್ಜೆ ಹಾಕಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.