Home Article ದುರ್ಜನರ ಸಂಘವದು…

ದುರ್ಜನರ ಸಂಘವದು…

SHARE

 

ಮಂಗನಿಂದ ಮಾನವ ಎನ್ನುವ ವಿಚಾರವನ್ನ ಪ್ರಾಥಮಿಕ ಅಧ್ಯಯನದ ಸಂದರ್ಭದಲ್ಲೇ ನಮಗೆ ಬೋಧಿಸುತ್ತಾರೆ.ಆ ವಿಚಾರದ ಬಗ್ಗೆ ಅವರಬಳಿ ದಾಖಲೆಗಳೂ ಇವೆ. ಹಾಗಾಗಿ ಅದನ್ನ ನಂಬಲೇಬೇಕು.
ದಾಖಲೆಗಳಿವೆ ಎಂಬ ಮಾತ್ರಕ್ಕೇ ನಂಬಬೇಕೆಂದಿಲ್ಲ. ಮಾನವನ ಕೆಲವು ನಡವಳಿಕೆಯನ್ನ ಗಮನಿಸಿದರೆ ಸಾಕು ಯಾರಾದರೂ ಹೇಳಬಹುದು ಇವನ ಮೂಲ ಮರ್ಕಟನೆಂದು.
“ಮರ್ಕಟಸ್ಯ ಸುರಾಪಾನಂ ಮಧ್ಯೆ ವ್ರಶ್ಚಿಕದಂಶನಂ ತನ್ಮಧ್ಯೇ ಭೂತಸಂಚಾರಂ ಯದ್ವಾತದ್ವಾ ಭವಿಷ್ಯತಿ”.
ಹೇಗೆ ಮರ್ಕಟನಿಗೆ ಈ ಎಲ್ಲಾ ಕ್ರಿಯೆಗಳ ಏಕಕಾಲ ಸಂಯೋಗದಲ್ಲಿ ಯದ್ವಾತದ್ವಾ ಆಗುತ್ತದೆಯೋ ಅದೇ ರೀತಿ ಮನುಷ್ಯನಿಗೆ ಯೌವನ, ರೂಪ, ಧನ, ಬಲ ಇವುಗಳೆಲ್ಲದರ ಏಕಕಾಲ ಸಂಯೋಗದಿಂದ ಯದ್ವಾತದ್ವಾ ಆಗುತ್ತದೆ
ಮಾನವ ಆಗ ಮೂರ್ಖನಾಗುತ್ತಾನೆ.
ಅವನ ವರ್ತನೆ ಹೇಗಿರುತ್ತದೆಂದರೆ
ಮೂರ್ಖಸ್ಯ ಪಂಚ ಚಿನ್ಹಾನಿ ಗರ್ವೋ ದುರ್ವಚನಂ ತಥಾ.
ಕ್ರೋದಶ್ಚ ದೃಡವಾದಶ್ಚ ಪರವಾಕ್ಯೇಷ್ವನಾದರಃ.
ಹೀಗೆ ಈ ಎಲ್ಲಾ ಗುಣಸಂಪನ್ನನಾದ ಮೂರ್ಖ ಬಹಳ ಅಪಾಯಕಾರಿಯಾಗುತ್ತಾನೆ. ದುಷ್ಟನಾಗುತ್ತಾನೆ.
ಕೋತಿ ತಾ ಕೆಡುವುದಲ್ಲದೇ ವನವನ್ನೆಲ್ಲಾ ಕೆಡಿಸಿದಂತೆ ಈತನೂ ತನ್ನ ಸುತ್ತಲಿನ ವಾತಾವರಣವನ್ನೆಲ್ಲಾ ಹಾಳುಗೆಡವುತ್ತಾನೆ.
ಆದುದರಿಂದಲೇ ಇರಬೇಕು ಹೇಳಿದ್ದು “ದುರ್ಜನರ ಸಂಘವದು ಕಾರ್ಕೋಟ ವಿಷದಂತೆ” ಎಂದು.
ಹೆಜ್ಜೇನು ಸವಿಯದಿದ್ದರೂ ಚಿಂತೆಯಿಲ್ಲ ವಿಷಸೇವನೆ ಬೇಡ. ಹಾಗಾಗಿ ನಾವು ಅಂತಹ ಮೂರ್ಖ ಮಾನವರ ಸಂಘರಹಿತರಾಗುವುದೇ ಒಳಿತು.