Home Local ಹೊನ್ನಾವರದಲ್ಲಿ ಆಟೋ ರಿಕ್ಷಾ ಹಾಗೂ ಬೈಕ್ ನಡುವೆ ಅಪಘಾತ: ಬಾಲಕಿಯೂ ಸೇರಿ ಇಬ್ಬರಿಗೆ ಗಾಯ.

ಹೊನ್ನಾವರದಲ್ಲಿ ಆಟೋ ರಿಕ್ಷಾ ಹಾಗೂ ಬೈಕ್ ನಡುವೆ ಅಪಘಾತ: ಬಾಲಕಿಯೂ ಸೇರಿ ಇಬ್ಬರಿಗೆ ಗಾಯ.

SHARE

ಹೊನ್ನಾವರ: ಆಟೋ ರಿಕ್ಷಾ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಹಾಗೂ ಬಾಲಕಿ ಗಂಭೀರ ಗಾಯ ಗೊಂಡ ಘಟನೆ ತಾಲೂಕಿನಲ್ಲಿ ನಡೆದಿದೆ.

ಘಟನೆ ಹೊನ್ನಾವರದಲ್ಲಿ ನಿನ್ನೆ ಸಂಜೆ 7:30 ರ ಸುಮಾರಿಗೆ ಘಟಿಸಿದೆ ಎನ್ನಲಾಗಿದೆ.ಬೈಕ್ ನಲ್ಲಿ ತಂದೆ ಮತ್ತು ಮಗಳು ಪ್ರಯಾಣ ಬೆಳೆಸಿದ್ದರು. ಈ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

ಗಾಯಗೊಂಡವರನ್ನು ಕರ್ಕಿನಾಕದ ನಿವಾಸಿ ಈಶ್ವರ್ ನಾಯ್ಕ ಹಾಗೂ ಅವರ ಮಗಳು ವೈಭವಿ ಎಂದು ಗುರ್ತಿಸಲಾಗಿದೆ.

ಈ ಕುರಿತು ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.