Home Local ಹೋರಾಟಗಾರ ಸೂರಜ್ ನಾಯ್ಕ ಸೋನಿ ಕುಟುಂಬಕ್ಕೆ ಜೀವ ಬೆದರಿಕೆ! ಕುಮಟಾ ಠಾಣೆಯಲ್ಲಿ ದಾಖಲಾಯ್ತು ಪ್ರಕರಣ.

ಹೋರಾಟಗಾರ ಸೂರಜ್ ನಾಯ್ಕ ಸೋನಿ ಕುಟುಂಬಕ್ಕೆ ಜೀವ ಬೆದರಿಕೆ! ಕುಮಟಾ ಠಾಣೆಯಲ್ಲಿ ದಾಖಲಾಯ್ತು ಪ್ರಕರಣ.

SHARE

ಕುಮಟಾ: ಹೋರಾಟಗಾರ,ರಾಜಕೀಯ ಧುರೀಣ ಹಾಗೂ ಸಾಮಾಜಿಕ ಕಾರ್ಯಕರ್ತ ಸೂರಜ್ ನಾಯ್ಕ ಸೋನಿ ಅವರ ಕುಟುಂಬಕ್ಕೆ ಪದೇ ಪದೆ ಬೆದರಿಕೆಯು ಬರುತ್ತಿದೆ ಎನ್ನಲಾಗಿದ್ದು ಈ ಬಗ್ಗೆ ಸ್ವತಃ ಸೂರಜ್ ನಾಯ್ಕ ಸೋನಿಯವರೇ ಕುಮಟಾ ಪೊಲೀಸ್ ಠಾಣೆಯಲ್ಲಿ ತಮ್ಮ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಮನವಿ ಸಲ್ಲಿಸಿದ್ದಾರೆ .ಹಾಗೂ ಈ ಬೆದರಿಕೆ ಪತ್ರದ ಜೊತೆಗೆ ಪ್ರಕರಣ ದಾಖಲಿಸಿದ್ದಾರೆ.

ಈ ಹಿಂದೆ ಹಿಂದೂ ಹೋರಾಟದ ಸಂದರ್ಭದಲ್ಲಿ ಅನೇಕ ರೀತಿಯ ನೋವುಗಳನ್ನು ಹಾಗೂ ಬೆದರಿಕೆಗಳನ್ನು ನಾನು ಅನುಭವಿಸಿದ್ದೆ ಆದರೆ ಇದೀಗ ಚತುಷ್ಪಥ ರಸ್ತೆ ಕಾಮಗಾರಿಗೆ ಸಂಬಂಧಪಟ್ಟಂತೆ ಹೋರಾಟ ನಡೆಸುತ್ತಿದ್ದು ಈ ನಿಮಿತ್ತವಾಗಿ ಈ ಬೆದರಿಕೆ ಬಂದಿರುವುದಾಗಿ ಅವರು ತಿಳಿಸಿದ್ದಾರೆ .

ಬೆದರಿಕೆ ಓಡ್ಡುತ್ತಿರುವವರು ಸೋನಿ ಕುಟುಂಬದವರನ್ನು ,ಮಕ್ಕಳನ್ನು ,ಅಪಹರಣ ಮಾಡುವ ಹಾಗೂ ಅವರನ್ನು ಕೊಲೆಗೈಯುವ ಹಾಗೂ ಸುಪಾರಿ ಹಂತಕರಿಗೆ ಸುಪಾರಿ ನೀಡುವ ಬೆದರಿಕೆ ಒಡ್ಡುತ್ತಿದ್ದಾರೆ ಎನ್ನಲಾಗಿದೆ .

ಈ ಬಗ್ಗೆ ಸ್ವತಃ ಸೂರಜ್ ಸೋನಿ ಅವರೇ ಬೇಸರ ವ್ಯಕ್ತಪಡಿಸಿದ್ದು ಈ ರೀತಿಯ ಹೇಯ ಕೃತ್ಯಗಳನ್ನು ನಡೆಸುವುದಾಗಿ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ತಮ್ಮ ಕಳವಳ ವ್ಯಕ್ತಪಡಿಸಿದರು .

ತಮ್ಮ ಕುಟುಂಬವನ್ನು ರಕ್ಷಿಸುವಂತೆ ಪೊಲೀಸರ ಮೊರೆ ಹೋಗಿರುವ ಸೂರಜ್ ನಾಯ್ಕ ಸೋನಿ ಅವರು ಈ ಮನವಿಯನ್ನು ದೇವರಿಗೂ ಸಲ್ಲಿಸುವುದಾಗಿ ಹೇಳಿದ್ದಾರೆ .

ಹೋರಾಟಗಾರರೊಬ್ಬರಿಗೆ ಈ ರೀತಿ ಬೆದರಿಕೆ ಬರುತ್ತಿದ್ದು ಈ ಬಗ್ಗೆ ಅವರ ಆಪ್ತೇಷ್ಟರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಸೂರಜ್ ನಾಯ್ಕ ಸೋನಿ ಹೇಳಿದ್ದೇನು? ವಿಡಿಯೋ ನೋಡಿ
https://youtu.be/_Nvc-PU9Olk