Home Local ಧಾರೇಶ್ವರದಲ್ಲಿ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ: ದಿನಕರ ಪ್ರಾಥಮಿಕ ಹಾಗೂ ಪ್ರೌಢಶಾಲೆ ಧಾರೇಶ್ವರದ ಸಹಯೋಗದೊಂದಿಗೆ ಯಶಸ್ವಿಯಾಯ್ತು...

ಧಾರೇಶ್ವರದಲ್ಲಿ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ: ದಿನಕರ ಪ್ರಾಥಮಿಕ ಹಾಗೂ ಪ್ರೌಢಶಾಲೆ ಧಾರೇಶ್ವರದ ಸಹಯೋಗದೊಂದಿಗೆ ಯಶಸ್ವಿಯಾಯ್ತು ಕಾರ್ಯಕ್ರಮ.

SHARE

ಕುಮಟಾ: ದಿನಾಂಕ : 27-09-2018 ರಂದು ಗ್ರಾಮ ಪಂಚಾಯಿತಿ ದೇವಗಿರಿ,ಜನತಾ ವಿದ್ಯಾಲಯ ಹಾಗೂ ದಿನಕರ ಪ್ರಾಥಮಿಕ ಹಾಗೂ ಪ್ರೌಢಶಾಲೆ ಧಾರೇಶ್ವರದ ಸಹಯೋಗದೊಂದಿಗೆ ಸ್ವಚ್ಛ ಭಾರತ ಮಿಷನ್(ಗ್ರಾ)ಯೋಜನೆಯಡಿಯಲ್ಲಿ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮವನ್ನು ಜಾಥಾದ ಮೂಲಕ ಅರ್ಥ ಪೂರ್ಣವಾಗಿ ಆಚರಿಸಲಾಯಿತು.

ಜಾಥಾವನ್ನು ಶಾಲೆಯಿಂದ ಪ್ರಾರಂಭಿಸಿ ಗ್ರಾಮ ಪಂಚಾಯಿತಿಯವರೆಗೆ ಸಾಗಿ ರಸ್ತೆಯ ಬದಿಗಳಲ್ಲಿ ಸ್ವಚ್ಛತೆಯನ್ನು ಕೈಕೊಂಡು ಸುತ್ತ ಮುತ್ತಲಿನ ಜನರಿಗೆ ಸ್ವಚ್ಛತೆಯ ಕುರಿತು ಅರಿವು ಮೂಡಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುರೇಶ ಟಿ.ನಾಯ್ಕ ಉಪಾಧ್ಯಕ್ಷೆ ಭಾರತಿ ನಾಯ್ಕ,ಸದಸ್ಯರಾದ ಸುರೇಶ ಹರಿಕಾಂತ,ನಾಗೇಶ ನಾಯ್ಕ,ನಾಗಪ್ಪ ಹರಿಕಾಂತ,ಲ‍ಲಿತಾ ರೇವಣಕರ್,ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ವಿನಯಕುಮಾರ ನಾಯ್ಕ , ಜನತಾ ವಿದ್ಯಾಲಯದ ಮುಖ್ಯಾಧ್ಯಾಪಕಿ ಲಕ್ಷ್ಮಿ ಕಸ್ಮಾಡಿಯವರು,ಸಹ ಶಿಕ್ಷಕರಾದ ಎಸ್‌ .ಎಸ್‌.ಶಾಸ್ತ್ರಿ ,ಸಿ.ಜಿ. ಪೂಜಾರ,ಉದಯ ನಾಯ್ಕ,ಪ್ರತಿಭಾ ಭಟ್ಟ, ದಿನಕರ ಶಾಲೆಯ ಮುಖ್ಯಾಧ್ಯಾಪಕರಾದ ಜಗದೀಶ್ ಗುನಗಾ,ಸಹ ಶಿಕ್ಷಕಿಯರಾದ ರಮ್ಯಾ ನಾಗೇಕರ್,ಜ್ಯೋತಿ ಗಾಡಿಗಾ, ದೈಹಿಕ ಶಿಕ್ಷಣ ಶಿಕ್ಷಕರಾದ ಯೋಗೇಶ್ ಪಟಗಾರ ಹಾಗೂ ಎರಡೂ ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು.