Home Local ಕುಮಟಾದಲ್ಲಿ ಯಶಸ್ವಿಯಾಗಿ ನಡೆದ ತಾಳಮದ್ದಲೆ ಕಾರ್ಯಕ್ರಮ: ಮನ ಸೂರೆಗೊಂಡ ಕಚ ದೇವಯಾನಿ ಆಖ್ಯಾನ

ಕುಮಟಾದಲ್ಲಿ ಯಶಸ್ವಿಯಾಗಿ ನಡೆದ ತಾಳಮದ್ದಲೆ ಕಾರ್ಯಕ್ರಮ: ಮನ ಸೂರೆಗೊಂಡ ಕಚ ದೇವಯಾನಿ ಆಖ್ಯಾನ

SHARE

ಕುಮಟಾ : ಯಕ್ಷಗಾನ ತಾಳಮದ್ದಳೆ ಪ್ರಿಯರ ಬಳಗ, ಕುಮಟಾ ಇವರ ಸಂಯೋಜನೆಯಲ್ಲಿ ತೆಂಕು- ಬಡಗಿನ ಸುಪ್ರಸಿದ್ಧ ಕಲಾವಿದರಿಂದ ತಾಳಮದ್ದಳೆ ‘ಕಚ ದೇವಯಾನಿ’ ಕಾರ್ಯಕ್ರಮವನ್ನು ಕುಮಟಾದ ಹವ್ಯಕ ಸಭಾಭವನದಲ್ಲಿ ನಡೆಯಿತು.

ಹಿಮ್ಮೇಳಕ್ಕೆ ಭಾಗವತರಾದ ಶ್ರೀ ಸರ್ವೇಶ್ವರ್ ಮೂರೂರು ,ಶ್ರೀ ರಾಮಕೃಷ್ಣ ಹಿಲ್ಲೂರು ಮತ್ತು ಮೃದಂಗದಲ್ಲಿ ಶ್ರೀ ಎನ್.ಜಿ.ಹೆಗಡೆ ,ಚಂಡೆಯಲ್ಲಿ ಶ್ರೀ ಗಣೇಶ್ ಗಾಂವ್ಕರ್ ಇದ್ದರು.

‘ಕಚ ‘ಪಾತ್ರಧಾರಿಯಾಗಿ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ,ಶುಕ್ರಾಚಾರರ್ಯರಾಗಿ ಶ್ರೀ ವಿಶ್ವೇಶ್ವರ ಭಟ್ಟ ಸುಣ್ಣಂಬಳ ,ದೇವಯಾನಿ ಯಾಗಿ ವಿದ್ವಾನ್ ಗಣಪತಿ ಭಟ್ ಸಂಕದಗುಂಡಿ, ವೃ‍ಷಪರ್ವ ಆಗಿ ಶ್ರೀ ರವಿರಾಜ ಪನೆಯಾಲ ಮತ್ತು ಬೃಹಸ್ಪತಿಯಾಗಿ ಪ್ರೊ.ಡಿ.ಕೆ ಗಾಂವಕರ್ ಯಲ್ಲಾಪುರ ಪಾತ್ರ ನಿರ್ವಹಿಸಿದರು.

ಕಾರ್ಯಕ್ರಮ ಯಶಸ್ವಿಯಾಗುವ ಮೂಲಕ ಸಂಘಟಕರಾದ ವಿಶ್ವೇಶ್ವರ ಭಟ್ಟ ಹಾಗೂ ರವಿ ಭಟ್ಟ ತೆಪ್ಪ ಇನ್ನಿತರರು ಜನರ ಪ್ರಶಂಸೆಗೆ ಪಾತ್ರರಾದರು.