Home Local ಚೀಟಿ ಬರೆದಿಟ್ಟು ಸಾವಿಗೆ ಶರಣಾದ ಆಟೊ ಚಾಲಕ : ಕಾರವಾರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ!

ಚೀಟಿ ಬರೆದಿಟ್ಟು ಸಾವಿಗೆ ಶರಣಾದ ಆಟೊ ಚಾಲಕ : ಕಾರವಾರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ!

SHARE

ಕಾರವಾರ: ಚೀಟಿ ಬರೆದಿಟ್ಟು ಆಟೊ ರಿಕ್ಷಾ ಚಾಲಕ ನಾಗೇಶ್ ಚಿಪ್ಕಾರ್ ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಬಾಡದಲ್ಲಿ ನಡೆದಿದೆ.

ಬಾಡದ ಮಹಾದೇವಸ್ಥಾನದ ಹಿಂಭಾಗದಲ್ಲಿರುವ ತಮ್ಮ ಮನೆಯಲ್ಲೇ ನಾಗೇಶ್ ಚಿಪ್ಕಾರ್ ಅವರು ನೇಣು ಹಾಕಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಸಾವಿಗೂ ಮುನ್ನ ಅವರು ಬರೆದಿಟ್ಟಿರುವ ಚೀಟಿಯಲ್ಲಿ, ನನ್ನ ಮರಣಕ್ಕೆ ನಾನೇ ಕಾರಣ ಎಂದು ಉಲ್ಲೇಖಿಸಿದ್ದಾರೆ.

ಯಾವ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಬಗ್ಗೆ ವಿವರ ಲಭ್ಯವಾಗಿಲ್ಲ. ಪೋಲೀಸ್ ತನಿಖೆ ನಂತರದಲ್ಲಿ ಈ ಬಗ್ಗೆ ಮಾಹಿತಿ ಲಭ್ಯವಾಗಲಿದೆ.