Home Important ರಾಷ್ಟ್ರಮಟ್ಟಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಶ್ರೀಭಾರತೀ ವಿದ್ಯಾಲಯದ ಬಾಲೆಯರು.

ರಾಷ್ಟ್ರಮಟ್ಟಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಶ್ರೀಭಾರತೀ ವಿದ್ಯಾಲಯದ ಬಾಲೆಯರು.

SHARE

ಮಹಾರಾಷ್ಟ್ರದ ಖಾನಪುರದಲ್ಲಿ CISCE ಸಂಘದ ವತಿಯಿಂದ ನಡೆದ ರಾಷ್ಟ್ರಮಟ್ಟದ ಕೋಕೋ ಸ್ಪರ್ಧೆಯಲ್ಲಿ ಬೆಂಗಳೂರಿನ ಹಂಪಿನಗರದಲ್ಲಿರುವ

ಶ್ರೀಭಾರತೀ ವಿದ್ಯಾಲಯದಿಂದ ಶ್ರೇಯಾ ಕಾಶಿದ್ ಹಾಗೂ ನಿಹಾರಿಕಾ ಇವರು ದ್ವಿತೀಯ ಸ್ಥಾನ (Runner up ) ಪ್ರಶಸ್ತಿ ಪಡೆದಿದ್ದಾರೆ.
ಈರ್ವರು ಬಾಲೆಯರು ಬಹುಮುಖ ಪ್ರತಿಭೆಗಳಾಗಿದ್ದಾರೆ. ಕ್ರೀಡೆಯ ಜೊತೆ ಜೊತೆ ಭರತನೃತ್ಯ , ಸಂಗೀತ ಹಾಗೂ ಇನ್ನಿತರ ಕಲಾಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇದೇ ಶಾಲೆಯ ಕುಮಾರಿ ದೀಪ್ತಿ ಸಿ. ಇವಳು CISCE ಯವರು 17 ವರ್ಷದೊಳಗಿನ ಮಕ್ಕಳಿಗಾಗಿ ಅಹ್ಮದಾಬಾದ್ ನಲ್ಲಿ ನಡೆಸಿದ್ದ ರಾಷ್ಟ್ರ ಮಟ್ಟದ ಟೆಕ್ವೊಂಡೊ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದಾಳೆ. ಈ ಪ್ರತಿಭೆಗಳನ್ನು ಶಾಲಾ ಆಡಳಿತ ಮಂಡಳಿ , ಶಿಕ್ಷಕರು ಹಾಗೂ ಪಾಲಕ ಪೋಷಕರು ಅಭಿನಂದಿಸಿದ್ದಾರೆ. ಇವರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತೇವೆ.