Home Local ಟಿ.ಎಸ್.ಎಸ್. ಅಧ್ಯಕ್ಷರಾದ ಶ್ರೀ ಶಾಂತಾರಾಮ ವಿ. ಹೆಗಡೆ, ಶೀಗೇಹಳ್ಳಿ ಇವರಿಗೆ ಉತ್ತರ ಕರ್ನಾಟಕದ ಸಾಧಕ ಪ್ರಶಸ್ತಿ

ಟಿ.ಎಸ್.ಎಸ್. ಅಧ್ಯಕ್ಷರಾದ ಶ್ರೀ ಶಾಂತಾರಾಮ ವಿ. ಹೆಗಡೆ, ಶೀಗೇಹಳ್ಳಿ ಇವರಿಗೆ ಉತ್ತರ ಕರ್ನಾಟಕದ ಸಾಧಕ ಪ್ರಶಸ್ತಿ

SHARE

ಶಿರಸಿ :ದಿ ತೊಟಗಾರ್ಸ್‍ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿ ಇದರ ಮೂಲಕ ವೈವಿಧ್ಯಮಯ ಸೇವೆಗಳೊಂದಿಗೆ ಸಹಕಾರಿ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡುತ್ತಿರುವ ಟಿ.ಎಸ್.ಎಸ್. ಅಧ್ಯಕ್ಷರಾದ ಶ್ರೀ ಶಾಂತಾರಾಮ ವಿ. ಹೆಗಡೆ, ಶೀಗೇಹಳ್ಳಿ ಇವರಿಗೆ ಉತ್ತರ ಕರ್ನಾಟಕದ ಸಾಧಕ ಪ್ರಶಸ್ತಿ ಲಭಿಸಿದೆ.

ಟೈಮ್ಸ್‍ ಆಫ್‍ ಇಂಡಿಯಾ ಸಮೂಹದ ವಿಜಯ ಕರ್ನಾಟಕ ಪತ್ರಿಕೆಯು ದಿ:03.10.2018ರಂದು ಆಯೋಜಿಸಿದ್ದ “ಅಚಿವರ್ಸಆಫ್‍ಕರ್ನಾಟಕ” ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಈ ಪ್ರಶಸ್ತಿ ಸ್ವೀಕರಿಸಿದರು.

ಕರ್ನಾಟಕದ ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ ಹಾಗೂ ಶಾಸಕರಾದ ಶ್ರೀ ಅರವಿಂದ ಲಿಂಬಾವಳಿ ಇವರು ಬೆಂಗಳೂರಿನ ಶ್ಯಾಂಗ್ರಿ-ಲಾ ಹೊಟೆಲ್‍ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಹಲವು ಸಾಧಕರಿಗೆ ಈ ಸಮಾರಂಭದಲ್ಲಿಗೌರವಿಸಲಾಯಿತು.

ಟಿ.ಎಸ್.ಎಸ್.ನ ಉಪಾಧ್ಯಕ್ಷರಾದ ಶ್ರೀ ರಾಮಕೃಷ್ಣಎಸ್. ಹೆಗಡೆಕಡವೆ, ನಿರ್ದೇಶಕರಾದ ಶಶಾಂಕ ಎಸ್. ಹೆಗಡೆ ಶೀಗೇಹಳ್ಳಿ, ವಿಜಯಕರ್ನಾಟಕದ ಹಿರಿಯ ಸಂಪಾಧಕರಾದ ತಿಮ್ಮಪ್ಪ ಭಟ್ಟ ಹಾಗೂ ಸಿ.ಇ.ಒ. ಶ್ರೀ ರಂಜಿತ್‍ ಕಾಟೆ ಇವರುಗಳು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.