Home Local ಕೊಂಕಣ ಎಜ್ಯುಕೇಶನ್ ಟ್ರಸ್ಟ ನಲ್ಲಿ ರಜತ ಮಹೋತ್ಸವ : ಡಿಸೆಂಬರ್ 22 ರಿಂದ 25ರವರೆಗೆ ಕಾರ್ಯಕ್ರಮ.

ಕೊಂಕಣ ಎಜ್ಯುಕೇಶನ್ ಟ್ರಸ್ಟ ನಲ್ಲಿ ರಜತ ಮಹೋತ್ಸವ : ಡಿಸೆಂಬರ್ 22 ರಿಂದ 25ರವರೆಗೆ ಕಾರ್ಯಕ್ರಮ.

SHARE

ಕುಮಟಾ: ರಾಷ್ಟ್ರೀಯ ವಿಚಾರಧಾರೆಯ ತಳಹದಿಯಲ್ಲಿ ಸಂಸ್ಕಾರಯುತ ಶಿಕ್ಷಣವನ್ನು ನೀಡಬೇಕೆಂಬ ಉದ್ದೇಶದಿಂದ ಕಳೆದ 25 ವರ್ಷಗಳ ಹಿಂದೆ ಕುಮಟಾದಲ್ಲಿ ಸ್ಥಾಪಿಸಲ್ಪಟ್ಟ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ತನ್ನ ರಜತ ಮಹೋತ್ಸವದ ಅಂಗವಾಗಿ 22 ಡಿಸೆಂಬರ್ 2018 ಶನಿವಾರದಿಂದ 25 ಡಿಸೆಂಬರ್ 2018 ಮಂಗಳವಾರದ ಪರ್ಯಂತ ನಾಲ್ಕು ದಿನಗಳ ವಿಶೇಷ ಕಾರ್ಯಕ್ರಮಗಳನ್ನು ಸಂಸ್ಥೆಯ ಪರಿಸರದಲ್ಲಿ ಆಯೋಜಿಸಲು ನಿರ್ಧರಿಸಿದೆ.

ನಮ್ಮ ಸಂಸ್ಥೆಯು ಈಗಾಗಲೇ ರಂಗಾ ದಾಸ ಶಾನಭಾಗ ಬಾಲಮಂದಿರ, ಸರಸ್ವತಿ ವಿದ್ಯಾಕೇಂದ್ರ ಪ್ರಾಥಮಿಕ ಶಾಲೆ, ಕೊಲಾಬಾ ವಿಠೋಬ ಶಾನಭಾಗ ಕಲಬಾಗಕರ ಪ್ರೌಢಶಾಲೆ, ಎಸ್.ಎಮ್.ಶಾನಭಾಗ ಹೆಗಡೆಕರ್ ಶಿಕ್ಷಕರ ತರಬೇತಿ ಕೇಂದ್ರ, ಬಿ.ಕೆ.ಭಂಡಾರ್ಕರ್ಸ್ ಸರಸ್ವತಿ ಪದವಿ ಪೂರ್ವ ಕಾಲೇಜ್, ಸರಸ್ವತಿ ಮಾಳಪ್ಪ ಕಾಮತ ಕೃಷಿ ಮತ್ತು ಕೌಶಲಾಭಿವೃದ್ಧಿ ಸಂಸ್ಥೆ, ಜಾನಕಿ ಪ್ರಭು ಪ್ರತಿಭಾ ಚೈತನ್ಯ ಕೇಂದ್ರಗಳೆಂಬ ಶಾಖೆಗಳನ್ನು ಹೊಂದಿದ್ದು, ಇಲ್ಲಿ 1700ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಸಾಂಸ್ಕøತಿಕ, ಶೈಕ್ಷಣ ಕ, ಹಾಗೂ ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಮಟ್ಟದ ದಾಖಲೆಯನ್ನು ಸ್ಥಾಪಿಸಿ ಗಮನಸೆಳೆಯುತ್ತಿದ್ದಾರೆ. ನಮ್ಮ ಸಂಸ್ಥೆಯಿಂದ ಶಿಕ್ಷಣ ಪಡೆದಂತ ಅನೇಕ ವಿದ್ಯಾರ್ಥಿಗಳು ಇಂದು ದೇಶ, ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದು ಅತ್ಯಂತ ಅಭಿಮಾನದ ಸಂಗತಿ.

ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮವನ್ನು ನಾಲ್ಕು ದಿನಗಳ ಅವಧಿಯಲ್ಲಿ ಅರ್ಥಪೂರ್ಣವಾಗಿ, ಜಿಲ್ಲೆಯ ಶೈಕ್ಷಣ ಕ ಕ್ಷೇತ್ರಕ್ಕೆ ಒಂದು ಕೊಡುಗೆಯಾಗಿ ಆಚರಿಸಲು ತಯಾರಿಯನ್ನು ನಡೆಸಿದ್ದೇವೆ.

ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ಸಮಾಗಮದಲ್ಲಿ ವಿವಿಧ ಶೈಕ್ಷಣ ಕ ವಿಚಾರ ಗೋಷ್ಠಿಗಳು, ಸಂಸ್ಥೆಯ ವಿದ್ಯಾರ್ಥಿಗಳ, ಶಿಕ್ಷಕ ವೃಂದದವರ, ಮಾತೃ ಮಂಡಳಿಯವರ ಮತ್ತು ಹಳೆಯ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಗಳು, ಇದರ ಜೊತೆಗೆ ರಾಜ್ಯ ಹಾಗೂ ರಾಷ್ಟø ಮಟ್ಟದ ಖ್ಯಾತಿವೆತ್ತ ಕಲಾವಿದರಿಂದ ಪ್ರತಿ ದಿನ ಸಾಯಂಕಾಲ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ. ಇದರೊಟ್ಟಿಗೆ ವಿಶೇಷ ಕವಾಯತುಗಳು, ಮಲ್ಲಕಂಬ ಪ್ರದರ್ಶನಗಳು ಕಾರ್ಯಕ್ರಮದ ಮೆರಗನ್ನು ಇನ್ನಷ್ಟು ಹೆಚ್ಚಿಸಲಿವೆ. ವಿಜ್ಞಾನ ವಸ್ತು ಪ್ರದರ್ಶನ, ಸಾಕ್ಷ್ಯಚಿತ್ರಗಳು, ಶೈಕ್ಷಣ ಕ ಸಂಪನ್ಮೂಲಗಳನ್ನೊಳಗೊಂಡ ಆಕರ್ಷಕ ಮಳಿಗೆಗಳು ಈ ಕಾರ್ಯಕ್ರಮದ ಆಕರ್ಷಣೆಗಳಾಗಲಿವೆ.

ಪ್ರತಿದಿನವೂ ಘನತೆವೆತ್ತ ಗಣ್ಯರುಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದು ಕುಮಟಾದ ಪರಿಸರದಲ್ಲಿ ಈ ವೇಳೆಯು ಸಂಭ್ರಮದ ವಾತಾವರಣವನ್ನು ನಿರ್ಮಿಸಲಿದೆ ಎಂದು ಕೊಂಕಣ ಎಜ್ಯುಕೇಶನ್ ಟ್ರಸ್ಟ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.