Home Local ಗೋಖಲೆ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳ ಸಾಧನೆ : ಸಂಗೀತ ಕಲೋತ್ಸವದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಗೋಖಲೆ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳ ಸಾಧನೆ : ಸಂಗೀತ ಕಲೋತ್ಸವದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

SHARE

ಅಂಕೋಲಾ : ತಾಲೂಕಿನ ಗೋಖಲೆ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳಾದ ಪ್ರೀಯಾಂಜಲಿ ವೈದ್ಯ ಹಾಗೂ ಸಂಗಡಿಗರು ಪ್ರತಿಭಾ ಕಲೋತ್ಸದ, ಬುಡಕಟ್ಟು ಜನಪದಗೀತೆಯಲ್ಲಿ (ಸಂಗೀತ ಕಲೋತ್ಸವ) ಪಾಲ್ಗೊಂಡು, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಇವರಿಗೆ ಜಿ ಸಿ ಕಾಲೇಜಿನ ಕನ್ನಡ ಭಾಷಾ ಉಪನ್ಯಾಸಕರಾದ ಶ್ರೀ ನಾಗರಾಜ ದಿವಗಿಕರ ತರಬೇತಿಯನ್ನು ನೀಡಿದ್ದರು.

ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಪ್ರಚಾರ್ಯರಾದ ಡಾ. ಇಮ್ತಿಯಾಜ್ ಖಾನ್ , ಆಡಳಿತ ಮಂಡಳಿಯ ಧರ್ಮದರ್ಶಿಗಳು, ಕಾರ್ಯದರ್ಶಿಗಳು ಆದ ಕೆ. ವಿ. ಶೆಟ್ಟಿ ಅವರು, ಸಾಹಿತಿಗಳಾದ ವಿಷ್ಣು ನಾಯ್ಕ ಅವರು, ಹಾಗೂ ಎಲ್ಲ ಉಪನ್ಯಾಸಕರು ಅಭಿನಂದನೆ ಸಲ್ಲಿದ್ದಾರೆ..