Home Local ವಿದೇಶಿಗರ ಆಕ್ರಮಣದಿಂದ ಭಾರತೀಯ ಚಿಂತನೆಗಳ ಕಡೆಗಣನೆ: ಡಾ|| ಜಿ.ಎಲ್.ಹೆಗಡೆ

ವಿದೇಶಿಗರ ಆಕ್ರಮಣದಿಂದ ಭಾರತೀಯ ಚಿಂತನೆಗಳ ಕಡೆಗಣನೆ: ಡಾ|| ಜಿ.ಎಲ್.ಹೆಗಡೆ

SHARE

ಕುಮಟಾ: ಭಾರತೀಯ ಪ್ರಾಚೀನ ಪರಂಪರೆ ನಮಗೆ ಋಷಿ ಮುನಿಗಳು ಕೊಟ್ಟಕೊಡುಗೆಯಾಗಿದೆ. ವಿದೇಶಿಗರು ಭಾರತದ ಭೂಪ್ರದೇಶದ ಮೇಲೆ ಮಾತ್ರ ಆಕ್ರಮಣ ಮಾಡಿದ್ದಲ್ಲ, ಬದಲಾಗಿ ಇಲ್ಲಿಯ ಪ್ರಾಚೀನ ಚಿಂತನೆಗಳ ಮೇಲೂ ಆಕ್ರಮಿಸಿದರು. ಭಾರತದ ಅನನ್ಯವಾದ ಅರ್ಥಶಾಸ್ತ್ರ, ರಾಜನೀತಿಶಾಸ್ತ್ರ, ವೈದ್ಯಕೀಯ ಶಾಸ್ತ್ರ ವಿಜ್ಞಾನ ಭಾರತದ ಅಧ್ಯಾತ್ಮ ಸಾಧನೆಗಳ ಮೇಲೂ ಆಕ್ರಮಣಗಳು ನಡೆದವು. ತನ್ಮೂಲಕ ಭಾರತೀಯ ಪ್ರಾಚೀನ ಚಿಂತನೆಗಳು ವ್ಯವಸ್ಥಿತವಾಗಿ ಮೂಲೆಗೆ ತಳ್ಳಲ್ಪಟ್ಟವು ಎಂದು ಕುಮಟಾ ಡಾ|| ಎ.ವಿ.ಬಾಳಿಗಾ ಕಲಾ & ವಿಜ್ಞಾನ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ|| ಜಿ. ಎಲ್. ಹೆಗಡೆಯವರು ಹೇಳಿದರು.

ಅವರು ಹಳಕಾರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೆಲ್ಲಿಕೇರಿ ಹನುಮಂತ ಬೆಣ್ಣೆ ಸರಕಾರಿ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್. ವಾರ್ಷಿಕ ಶಿಬಿರದ ಮೊದಲ ದಿನದ ಶೈಕ್ಷಣಿಕ ಉಪನ್ಯಾಸಗೈಯುತ್ತಾ, ಭಾರತೀಯರ ಮೂಲ ಉದ್ದೇಶ ಆತ್ಮೋದ್ಧಾರವಾಗಿದ್ದು, ಧರ್ಮಾರ್ಥ ಕಾಮ ಮೋಕ್ಷಗಳು ಗುರಿಯಾಗಿದೆ. ಅದರಿಂದ ಅರ್ಥಕಾಮಗಳೇ ಇಂದು ಎಲ್ಲೆಲ್ಲೂ ವಿಜ್ರಂಭಿಸುತ್ತಾ ಇದೆ, ಅರ್ಥ ಕಾಮಗಳು ಭಾರತೀಯ ಚಿಂತನೆಯಲ್ಲ, ನಮಗಿಂದು ಯಾವುದು ಬೇಕು, ಯಾವುದು ಬೇಡ ಎಂದು ತಿಳಿಯದಾಗಿದೆ. ಹಂತಹಂತವಾಗಿ ವಿದೇಶಿ ಚಿಂತನೆಗಳು ಭಾರತೀಯರನ್ನು ಆಕ್ರಮಿಸುತ್ತಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಲತಾ ಹೆಬ್ಬಾರ ವಹಿಸಿ ಮಾತನಾಡುತ್ತಾ, ಎನ್.ಎಸ್.ಎಸ್. ಶಿಬಿರ ವಿದ್ಯಾರ್ಥಿಗಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಪೂರಕ. ಶಿಬಿರಾರ್ಥಿಗಳಿಗೆ ಶ್ರಮ, ಸಂಸ್ಕøತಿಯ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೆ ಪೂರಕ ಚಟುವಟಿಕೆಗಳು ನಡೆಯುತ್ತಿವೆ. ನಮ್ಮ ಕೆಲಸವನ್ನು ನಾವೇ ಮಾಡಿಕೊಳ್ಳಲು ಕಲಿಸುತ್ತದೆ. ನಮ್ಮ ಕೆಲಸ ನಾವೇ ಮಾಡಿಕೊಂಡಾಗ ಮಾತ್ರ ನಾವು ಸ್ವಯಂ ಪರಿಪೂರ್ಣರಾಗಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಉಪನ್ಯಾಸಕಿ ಶ್ರೀಮತಿ ರೇಣುಕಾ ಹೆಗಡೆ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳು ಶ್ರೀ ಗಣೇಶ ಭಟ್ಟ ಉಪಸ್ಥಿತರಿದ್ದರು.
ಶಿಬಿರಾರ್ಥಿ ಕು. ಭಾಸ್ಕರ ಮರಾಠಿ ಸ್ವಾಗತಿಸಿ, ಕುಮಾರಿ ಜ್ಯೋತಿ ಪಟಗಾರ ವಂದಿಸಿದಳು. ಕು. ಸಂತೋಷ ಕೊಡಿಯಾ ಕಾರ್ಯಕ್ರಮ ನಿರ್ವಹಿಸಿದನು.