Home Local ಅಖಿಲ ಹವ್ಯಕ ಮಹಾಸಭಾದಿಂದ ಅಶ್ವಿನಿ ಕೋಡಿಬೈಲ್ ಗೆ ಸನ್ಮಾನ

ಅಖಿಲ ಹವ್ಯಕ ಮಹಾಸಭಾದಿಂದ ಅಶ್ವಿನಿ ಕೋಡಿಬೈಲ್ ಗೆ ಸನ್ಮಾನ

SHARE

ಸುಳ್ಯ – ಇತ್ತಿಚೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಹವ್ಯಕ ಭವನದಲ್ಲಿ ನಡೆದ ಹವ್ಯಕ ಯುವಜನೋತ್ಸವ ಕಾರ್ಯಕ್ರಮದಲ್ಲಿ ತಾಲೂಕಿನ ಯುವ ಕವಯಿತ್ರಿ ಅಶ್ವಿನಿ ಕೋಡಿಬೈಲು ಅವರನ್ನು ಸನ್ಮಾನಿಸಲಾಯಿತು.

ಗ್ರಾಮೀಣ ಭಾಗದಲ್ಲಿದ್ದು ಗಣನೀಯ ಸೇವೆ ಮಾಡಿದ ಸಮಾಜದ ಯುವ ಪ್ರತಿಭಾನ್ವಿತರನ್ನು ಪ್ರೋತ್ರಾಹಿಸುತ್ತ ಬಂದಿರುವ ಸಂಘಟನೆ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಯುವ ಲೇಖಕಿ ಅಶ್ವಿನಿ ಕೋಡಿಬೈಲು ಅವರನ್ನು ಸಾಹಿತ್ಯ ಕ್ಷೇತ್ರದ ಯುವ ಸಾಧಕಿ ಎಂದು ಗುರುತಿಸಿ ಸನ್ಮಾನಿಸಿತು. ಈ ವೇಳೆ ಇತರೆ ಕ್ಷೇತ್ರದಲ್ಲಿನ ಸಾಧಕರನ್ನೂ ಕೂಡ ಸನ್ಮಾನಿಸಲಾಯಿತು.

ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಡಾ.ಗಿರಿಧರ ಕಜೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು