Home Local ನೀರಿನ ಸಂರಕ್ಷಣೆ ಹಾಗೂ ಪ್ಲಾಸ್ಟಿಕ್ ನಿರ್ಮೂಲನೆ ಅನಿವಾರ್ಯ- ಡಾ. ನಾಗರಾಜ ಭಟ್.

ನೀರಿನ ಸಂರಕ್ಷಣೆ ಹಾಗೂ ಪ್ಲಾಸ್ಟಿಕ್ ನಿರ್ಮೂಲನೆ ಅನಿವಾರ್ಯ- ಡಾ. ನಾಗರಾಜ ಭಟ್.

SHARE

ಕುಮಟಾ : ಕರ್ನಾಟಕ ಸರ್ಕಾರ, ಗ್ರಾಮೊತ್ಥಾನ ಸಮಿತಿ ಮೂರೂರು ಹಾಗೂ ಪ್ರಗತಿ ವಿದ್ಯಾಲಯ ಮೂರೂರು ಇವರ ಸಹಯೋಗದೊಂದಿಗೆ ನೀರಿನ ಸಂರಕ್ಷಣೆ ಹಾಗೂ ಪ್ಲಾಸ್ಟಿಕ್ ಜಾಗೃತಿ ಉಪನ್ಯಾಸ ಕಾರ್ಯಕ್ರಮ ಪ್ರಗತಿ ವಿದ್ಯಾಲಯ ಮೂರೂರಿನಲ್ಲಿ ನಡೆಯಿತು. ಖ್ಯಾತ ವೈದ್ಯರಾದ ಡಾ. ನಾಗರಾಜ ಭಟ್ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಿಕೊಟ್ಟು ನೀರನ್ನು ಸಂರಕ್ಷಿಸುವ ವಿವಿಧ ವಿಧಾನಗಳ ಬಗ್ಗೆ ಹಾಗೂ ಪ್ಲಾಸ್ಟಿಕ್ ನಿಂದ ಉಂಟಾಗಬಹುದಾದ ಹಾನಿಕಾರಕ ತೊಂದರೆಗಳನ್ನು ವಿವರವಾಗಿ ಹೇಳಿದರು.

ನೀರಿನ ಸಮರ್ಪಕ ನಿರ್ವಹಣೆ ಹಾಗೂ ಮಳೆ ನೀರಿನ ಕೊಯ್ಲು ಇದು ಇಂದಿನ ಸನ್ನಿವೇಶದಲ್ಲಿ ಅತ್ಯಗತ್ಯವಾದದ್ದು, ನೀರಿನ ಹಿತ-ಮಿತವಾದ ಬಳಕೆ ಹಾಗೂ ಪ್ಲಾಸ್ಟಿಕ್ ನಿಂದ ಉಂಟಾಗಬಲ್ಲ ಮಾರಕ ರೋಗಗಳ ಬಗ್ಗೆ ಉದಾಹರಣೆ ಸಮೇತವಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಪ್ರಗತಿ ವಿದ್ಯಾಲಯದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಅಧ್ಯಾಪಕರಾದ ಶ್ರೀ ಎಂ ಜಿ ಭಟ್ ಅವರು ಪ್ರಾಸ್ತಾವಿಕ ಮಾತನಾಡಿದರು. ಹಾಗೂ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ವಿಎಸ್ ಭಟ್ ಅಧ್ಯಕ್ಷತೆಯನ್ನು ವಹಿಸಿದ್ದರು.

ಹಾಗೆ ಸಭೆಯಲ್ಲಿ ಜೀ.ವಿ ಹೆಗಡೆ, ವಿ ಎಸ್ ಗೌಡ, ನಾಗವೇಣಿ ಭಟ್, ಆರ್ ಜಿ ಭಟ್ ಶ್ರೀಪಾದ್ ಭಟ್, ದಿನೇಶ್ ಭಟ್ ಇನ್ನು ಮುಂತಾದವರು ಹಾಜರಿದ್ದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ಮಾತಾಪಿತರ ಪೂಜೆ ನಡೆಸಿದ್ದು ವಿಶೇಷವಾಗಿದ್ದು ಗಮನಸೆಳೆಯಿತು.