Home Local ಗೋಕರ್ಣ ದೇವಾಲಯವನ್ನು ಶ್ರೀ ಮಠಕ್ಕೆ ಹಸ್ತಾಂತರಿಸದ ಕಾರಣ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರಿಗೆ ಲೀಗಲ್ ನೋಟಿಸ್!

ಗೋಕರ್ಣ ದೇವಾಲಯವನ್ನು ಶ್ರೀ ಮಠಕ್ಕೆ ಹಸ್ತಾಂತರಿಸದ ಕಾರಣ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರಿಗೆ ಲೀಗಲ್ ನೋಟಿಸ್!

SHARE

ಕಾರವಾರ: ರಾಮಚಂದ್ರಾಪುರ ಮಠಕ್ಕೆ ಗೋಕರ್ಣ ಮಹಾಬಲೇಶ್ವರ ದೇವಾಲಯ ಹಸ್ತಾಂತರ ಪ್ರಕ್ರಿಯೆ ಹಲವಾರು ಗೊಂದಲಗಳಿಗೆ ಕಾರಣವಾಗಿ ಇದೀಗ ಮಹತ್ವದ ಬೆಳವಣಿಗೆ ನಡೆದಿದೆ.

ಗೋಕರ್ಣ ಮಹಾಬಲೇಶ್ವರ ದೇವಾಲಯವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸದ ಕಾರಣಕ್ಕಾಗಿ ಮಠದ ಪರ ವಕೀಲ ಕಾರವಾರದ ನಾಗರಾಜ ನಾಯಕ ಅವರು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರಿಗೆ ಲೀಗಲ್ ನೋಟಿಸ್ ನೀಡಿದ್ದಾರೆ.

ಕೂಡಲೇ ರಾಮಚಂದ್ರಾಪುರ ಮಠಕ್ಕೆ ದೇಗುಲ ಹಸ್ತಾಂತರ ಮಾಡಿದಿದ್ದಲ್ಲಿ, ಕಾನೂನು ಪರಿಪಾಲಿಸದ ಜಿಲ್ಲಾಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೆ ಕುರಿತು ದೂರು ದಾಖಲಿಸಲಾಗುವದು ಎಂದು ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ ಎಂದು ವರದಿಯಾಗಿದೆ.

೨೦೧೮ರ ಅಕ್ಟೊಬರ್ ೩ರ ಸುಪ್ರೀಂ ಕೋರ್ಟ ಆದೇಶದ ಪ್ರಕಾರ ೭ ಸೆಪ್ಟೆಂಬರ್ ೨೦೧೮ರ ಪೂರ್ವದಲ್ಲಿ ದೇವಸ್ಥಾನದಲ್ಲಿ ಇದ್ದ ವ್ಯವಸ್ಥೆಯನ್ನೇ ಜಾರಿಗೆ ತರಬೇಕು ಎಂದು ಹೇಳಿದೆ. ೭ ಸೆಪ್ಟೆಂಬರ್ ೨೦೧೮ರ ಪೂರ್ವದಲ್ಲಿ ರಾಮಚಂದ್ರಾಪುರ ಮಠದವರೇ ಮಹಾಬಲೇಶ್ವರ ದೇವಾಲಯದ ಆಡಳಿತ ನಡೆಸುತ್ತಿದ್ದರು.ಅದರಂತೆ ದೇವಾಲಯವನ್ನು ರಾಮಚಂದ್ರಾಪುರ ಮಠಕ್ಕೆ ಸರ್ಕಾರ ಹಸ್ತಾಂತರಿಸಬೇಕಿತ್ತು.

ಆದರೆ ಇದುವರೆಗೂ ದೇವಾಲಯವನ್ನು ವಹಿಸಿಕೊಡದ ಕಾರಣ ಜಿಲ್ಲಾಧಿಕಾರಿಗಳಿಗೆ ನೋಟಿಸ್ ನೀಡಿದ್ದಾರೆ.